ಕ್ರೀಡೆ ಜೀವನದ ಭಾಗವಾಗಲಿ: ವಚನಾನಂದ ಸ್ವಾಮೀಜಿ

ಸೋಮವಾರ, ಜೂನ್ 17, 2019
28 °C
ರಾಜ್ಯಮಟ್ಟದ ವಾಸವಿ ಕ್ರೀಡಾಕೂಟಕ್ಕೆ ಚಾಲನೆ

ಕ್ರೀಡೆ ಜೀವನದ ಭಾಗವಾಗಲಿ: ವಚನಾನಂದ ಸ್ವಾಮೀಜಿ

Published:
Updated:
Prajavani

ದಾವಣಗೆರೆ: ಕಬಡ್ಡಿ, ಫುಟ್‌ಬಾಲ್‌, ವಾಲಿಬಾಲ್‌, ಚೆಸ್‌, ಕ್ರಿಕೆಟ್‌ ಸೇರಿ ಹಲವು ಕ್ರೀಡೆಗಳು ಜೀವನದ ಒಂದು ಭಾಗವಾಗಲಿ ಎಂದು ಹರಿಹರದ ವೀರಶೈವ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ ಸಲಹೆ ನೀಡಿದರು.

ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾ ಹಾಗೂ ವಾಸವಿ ಯುವಜನ ಸಂಘದ ಆಶ್ರಯದಲ್ಲಿ ದಾವಣಗೆರೆ ನೇತಾಜಿ ಸುಭಾಷ್‌ಚಂದ್ರ ಭೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ವಾಸವಿ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸದಾಕಾಲ ಯುವಕರಂತೆ ಇರಬೇಕು ಎಂದರೆ ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಮನುಷ್ಯ ಯಾವುದಾದರೂ ಶಾರೀರಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ನಡಿಗೆ, ಓಡುವುದು ಕನಿಷ್ಠ ಕೃಷಿ ಚಟುವಟಿಕೆಯನ್ನಾದರೂ ಕೈಗೊಳ್ಳಬೇಕು. ಶಾರೀರಿಕ ಶ್ರಮದಿಂದ ಸದಾಕಾಲ ಆರೋಗ್ಯವಾಗಿರಬಹುದು’ ಎಂದು ಹೇಳಿದರು.

‘ದಿನಕ್ಕೆ ಒಂದು ಗಂಟೆ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ 23 ಗಂಟೆ ಆರೋಗ್ಯವಾಗಿರಬಹುದು. ವಾಸವಿ ಸಂಘ ದೇಶದ ಎಲ್ಲಾ ಕಡೆಯಲ್ಲಿಯೂ ಕಾರ್ಯ ನಿರ್ವಹಿಸುತ್ತಿದೆ. ಜುಲೈ 5,6 ಹಾಗೂ 7 ರಂದು ಅಮೆರಿಕಾದ ಡೆಟ್ರಾಯಿಟ್‌ನಲ್ಲಿ ವಾಸವಿ ಜಯಂತಿ ನಡೆಯಲಿದ್ದು, ಅಲ್ಲಿ ನಾನು ಯೋಗ, ಧ್ಯಾನ ಹಾಗೂ ಸತ್ಸಂಗ ನಡೆಸಿಕೊಡುತ್ತೇನೆ’ ಎಂದು ಹೇಳಿದರು.

‘10 ವರ್ಷಗಳ ಹಿಂದೆ ಒಲಿಂಪಿಕ್ಸ್‌ನಲ್ಲಿ ಚೀನಾ 100 ಪದಕಗಳನ್ನು ತಂದರೆ ಭಾರತ 3 ಪದಕಗಳನ್ನು ತರುತ್ತಿತ್ತು. ಆದರೆ ಕಳೆದ 5 ವರ್ಷಗಳಲ್ಲಿ ಭಾರತವು ಉತ್ತಮ ಸಾಧನೆ ಮಾಡುತ್ತಿದೆ. ಕ್ರೀಡಾಪಟು ಒಬ್ಬರು ಸಚಿವರಾದ ಮೇಲೆ ಅವರು ಕ್ರೀಡೆಗೆ ಪ್ರೋತ್ಸಾಹ ನೀಡಿದ್ದರಿಂದ ಭಾರತದ ಕ್ರೀಡಾಪಟುಗಳು ಹೆಚ್ಚು ಪದಕಗಳನ್ನು ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಭಾರತ ಗಣನೀಯ ಸಾಧನೆ ಮಾಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಆರ್ಯವೈಶ್ಯ ಯುವಜನ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಎಸ್‌.ಎನ್‌. ಶಬರೀಶ್‌ ಮಾತನಾಡಿ, ‘ಯುವಕರನ್ನು ಕ್ರೀಡೆಗೆ ಪರಿಚಯಿಸುವುದು ಆರ್ಯ ವೈಶ್ಯ ಯುವಜನ ಸಂಘದ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಕರಿಗೆ ವೇದಿಕೆ ಸಿಗುವುದು ಕಡಿಮೆಯಾಗುತ್ತಿದ್ದು, ಸಿಕ್ಕಿರುವ ವೇದಿಕೆಯನ್ನು ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ನವೆಂಬರ್ 15ರಿಂದ 21ರವರೆಗೆ ಗುಜರಾತ್‌ನಲ್ಲಿ ಆರ್ಯ ವೈಶ್ಯ ಯುವಕ ಸಂಘದ ಏಕತಾ ಸಮಾವೇಶ ನಡೆಯಲಿದ್ದು, ಜಿಲ್ಲೆಯಿಂದ ಸಾವಿರಾರು ಮಂದಿ ಪಾಲ್ಗೊಳ್ಳಲಿದ್ದಾರೆ. ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು’ ಎಂದು ಮನವಿ ಮಾಡಿದರು.

ಕನ್ನಿಕಾಪರಮೇಶ್ವರಿ ದೇವಸ್ಥಾನ ಸಂಘದ ಅಧ್ಯಕ್ಷ ಆರ್‌.ಎಲ್‌. ಪ್ರಭಾಕರ್, ಕರ್ನಾಟಕ ಆರ್ಯವೈಶ್ಯ ಮಹಾಸಭಾ ದಾವಣಗೆರೆ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಜಿ. ನಾಗೇಂದ್ರ ಪ್ರಸಾದ್‌, ಕನ್ನಿಕಾಪರಮೇಶ್ವರಿ ಕೊ–ಆಪರೇಟಿವ್‌ ಬ್ಯಾಂಕ್‌ನ ಆರ್‌.ಜಿ. ಶ್ರೀನಿವಾಸಮೂರ್ತಿ, ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದ ಮಾಜಿ ಅಧ್ಯಕ್ಷರಾದ ಡಿ.ವಿ. ಸತ್ಯನಾರಾಯಣ, ಎಸ್‌. ಟಿ.ವಿಜೇಂದ್ರ, ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದ ನಿಕಟಪೂರ್ವ ಅಧ್ಯಕ್ಷ ಜಿ.ಬಿ. ಕೋಟೇಶ್‌, ಬಿ. ಎಸ್‌. ಶಿವಾನಂದ, ಬಿ.ಎನ್. ಸಾಯಿಪ್ರಕಾಶ್‌, ಎಸ್‌. ಸುನೀಲ್, ಎಸ್‌. ಎಸ್‌.ನರೇಶ್, ಜಗತ್ ಎಸ್‌.ಕಂಬಂ, ಆರ್‌.ಎನ್. ಅಜಿತ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !