ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಅಂಗಡಿ, ಶೆಡ್‌ಗಳ ತೆರವು ಕಾರ್ಯಾಚರಣೆ

Last Updated 9 ಅಕ್ಟೋಬರ್ 2020, 14:53 IST
ಅಕ್ಷರ ಗಾತ್ರ

ದಾವಣಗೆರೆ:ಸ್ಮಾರ್ಟ್ ಸಿಟಿ ಅಭಿವೃದ್ಧಿ ಕಾಮಗಾರಿ ಕಾರಣ ಇಲ್ಲಿನ ಗ್ರಾಮಾಂತರ ಪೊಲೀಸ್‌ ಠಾಣೆಯ ಬಳಿಯ ಶನೇಶ್ವರ ದೇವಸ್ಥಾನದ ಪಕ್ಕದ ಶೆಡ್‌ಗಳು, ಹಾಗೂ ಹಣ್ಣಿನ ಅಂಗಡಿಗಳು,ಹೋಟೆಲ್‌ ತೆರವು ಕಾರ್ಯಾಚರಣೆ ಶುಕ್ರವಾರ ನಡೆಯಿತು.

ಮುಂಜಾನೆಯೇ ಜೆಸಿಬಿ ಯಂತ್ರದ ಮೂಲಕ ಪಾಲಿಕೆ ಸಿಬ್ಬಂದಿ ತೆರವು ಕಾರ್ಯಾಚರಣೆ ಕೈಗೊಂಡರು. ಆದರೆ ಇದಕ್ಕೆ ದೇವಸ್ಥಾನದ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದರು. ‘ನಮ್ಮ ಜಾಗದಲ್ಲಿನ ಶೆಡ್‌ ಏಕೆ ತೆರವು ಮಾಡುತ್ತೀರಾ’ ಎಂದು ಪ್ರಶ್ನಿಸಿದರು. ಇದು ಪಾಲಿಕೆಯ ಜಾಗ. ಇಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಸಮಜಾಯಿಸಿ ನೀಡಿದರು.

ಸ್ಮಾ‌ರ್ಟ್ ಸಿಟಿಯ ನಗರ ಸೌಂದರ್ಯೀಕರಣಯೋಜನೆಯಡಿ ನಗರದ 5 ವೃತ್ತಗಳನ್ನು ಸ್ಮಾ‌ರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿದೆ.ಇದರಲ್ಲಿಗ್ರಾಮಾಂತರ ಪೊಲೀಸ್‌ ಠಾಣೆ ವೃತ್ತವೂ ಸೇರಿದೆ. ಈ ಕಾರಣ ಅಲ್ಲಿದ್ದ ಕೆಲ ಅಂಗಡಿಗಳನ್ನು ಎರಡು ತಿಂಗಳ ಹಿಂದೆಯೇ ತೆರವುಗೊಳಿಸಲಾಗಿತ್ತು. ಮತ್ತೆ ತೆರವು ಕಾರ್ಯಾಚರಣೆ ಮುಂದುವರಿದಿದೆ.

‘25 ವರ್ಷಗಳಿಂದ ದೇವಸ್ಥಾನದ ಪಕ್ಕದ ಜಾಗದಲ್ಲಿ ಚಿಕ್ಕ ಪ್ರಸಾದ ನಿಲಯ ಇತ್ತು. ಪ್ರತಿ ಮಂಗಳವಾರ, ಶನಿವಾರ ಅನ್ನದಾಸೋಹ ಮಾಡುತ್ತಿದ್ದೆವು. ಅಲ್ಲಿ ಚಿಕ್ಕ ಗೋಶಾಲೆಯೂ ಇತ್ತು. ಅದನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಕೇಳಿದರೆ ಪಾಲಿಕೆ ಜಾಗ ಎನ್ನುತ್ತಾರೆ. ಅದು ದೇವಸ್ಥಾನಕ್ಕೆ ಸೇರಿದ ಜಾಗ. ಏಕಾಏಕಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ನಮಗೆ ಮಾಹಿತಿ ನೀಡಿರಲಿಲ್ಲ’ ಎಂದು ದೇವಸ್ಥಾನದ ಅರ್ಚಕ ಮಂಜುನಾಥ ಹಿರೇಮಠ ತಿಳಿಸಿದರು.

‘ಸ್ಮಾ‌ರ್ಟ್ ಸಿಟಿ ಅಭಿವೃದ್ಧಿ ಕಾಮಗಾರಿಯಡಿ ಪೊಲೀಸ್‌ ಠಾಣೆ ವೃತ್ತವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕಾರಣ ಅಲ್ಲಿರುವ ಅಂಗಡಿಗಳನ್ನು ತೆರವುಗೊಳಿಸುವಂತೆಸ್ಮಾ‌ರ್ಟ್ ಸಿಟಿ ಅಧಿಕಾರಿಗಳು ಮನವಿ ಸಲ್ಲಿಸಿದ್ದರು. ಈ ಕಾರಣ ಕಾರ್ಯಾಚರಣೆ ನಡೆಸಲಾಗಿದೆ. ಎರಡು ತಿಂಗಳ ಹಿಂದೆ ಕಾರ್ಯಾಚರಣೆ ನಡೆಸಿದಾಗ ಕಾಲಾವಕಾಶ ನೀಡುವಂತೆ ವ್ಯಾಪಾರಿಗಳು ಕೋರಿದ್ದರು. ಇಷ್ಟು ದಿನ ಆದರೂ ಅವರು ತೆರವು ಮಾಡಿರಲಿಲ್ಲ’ ಎಂದು ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ದೇವಸ್ಥಾನದ ಪಕ್ಕದ ಶೆಡ್‌ ಇದ್ದ ಜಾಗ ಪಾಲಿಕೆಗೆ ಸೇರಿದೆ. ಹಾಗಾಗಿ ತೆರವುಗೊಳಿಸಲಾಗಿದೆ. ಏಕಾಏಕಿ ತೆರವು ಮಾಡಿಲ್ಲ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT