ಸೋಮವಾರ, ಜನವರಿ 27, 2020
25 °C

ಜಗಳೂರು | ಹೊಂಡದಲ್ಲಿ ಮುಳುಗಿ ವಿದ್ಯಾರ್ಥಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗಳೂರು (ದಾವಣಗೆರೆ): ಹೊಂಡದಲ್ಲಿ ಮುಳುಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕಣಕುಪ್ಪೆ ಗ್ರಾಮದಲ್ಲಿ ಸೋಮವಾರ ನಡೆದಿದೆ. ಪವನ್ (16)  ಹೊಂಡದಲ್ಲಿ ಮುಳುಗಿದ ಸಾವನ್ನಪ್ಪಿದ ವಿದ್ಯಾರ್ಥಿ.

ಚಿಕ್ಕಮ್ಮನಹಟ್ಟಿ ಗ್ರಾಮದ ವಕೀಲ ಸಿ.ಬಸವರಾಜ್ ಅವರ ಪುತ್ರ ಪವನ್, ಪಕ್ಕದ ಕಣಕುಪ್ಪೆ ಗ್ರಾಮದ ಹೊಂಡದಲ್ಲಿ ಕೈಕಾಲು ತೊಳೆಯಲು ಹೋದಾಗ ಮುಳುಗಿದ್ದಾನೆ. ಶವವನ್ನು ಹೊಂಡದಿಂದ ಹೊರ ತೆಗೆಯಲಾಗಿದೆ.

ಪ್ರತಿಕ್ರಿಯಿಸಿ (+)