ಬುಧವಾರ, ನವೆಂಬರ್ 20, 2019
°C

ವಿದ್ಯಾರ್ಥಿನಿ ಕಾಣೆ: ಪ್ರಕರಣ ದಾಖಲು

Published:
Updated:

ಸೊರಬ: ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿರುವ ಅಮರಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಕಾಣೆಯಾಗಿರುವ ಬಗ್ಗೆ ಸೊರಬ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.

ಅನುಷಾ ವಾಜ್(14) ಕಾಣೆಯಾದ ವಿದ್ಯಾರ್ಥಿನಿ. ಸಾಗರದ ನಿವಾಸಿಯಾದ ಈ ವಿದ್ಯಾರ್ಥಿನಿ ಅ.12ರಿಂದ ಶಾಲೆ ಆರಂಭವಾದರೂ ವಿದ್ಯಾರ್ಥಿನಿ ಬಾರದೇ ಇರುವುದರಿಂದ ಶಾಲೆಯ ಶಿಕ್ಷಕರು ವಿದ್ಯಾರ್ಥಿನಿಯನ್ನು ಕಳುಹಿಸಿಕೊಡಲು ಪೋಷಕರಿಗೆ ಮಂಗಳವಾರ ಸಂಜೆ ದೂರವಾಣಿ ಕರೆ ಮಾಡಿದ್ದಾರೆ. ಅನುಷಾ ವಾಜ್ ಅವರ ತಾಯಿ ಅ.1ರಂದು ಸಾಗರದಿಂದ ಬಸ್ ಹತ್ತಿಸಿರುವುದಾಗಿ ತಿಳಿಸಿದ್ದಾರೆ.

ಶಾಲಾ ಹಾಸ್ಟೆಲ್‍ನ ವಿದ್ಯಾರ್ಥಿನಿಯಾಗಿದ್ದರಿಂದ ನಿಲಯಪಾಲಕರನ್ನು ವಿಚಾರಿಸಿದಾಗ ವಿದ್ಯಾರ್ಥಿನಿ ಬಾರದಿರುವುದನ್ನು ಪೋಷಕರಿಗೆ ತಿಳಿಸಲಾಗಿದೆ. ಗಾಬರಿಗೊಂಡ ವಿದ್ಯಾರ್ಥಿನಿಯ ತಾಯಿ ಮರಿಯಾ ವಾಜ್ ಮಗಳು ಕಾಣೆಯಾಗಿರುವ ಬಗ್ಗೆ ಅ.17ರಂದು ಸೊರಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸ್ ಅಧಿಕಾರಿಗಳು ಹುಡುಕಾಟ ಆರಂಭಿಸಿದ್ದಾರೆ.

ಪ್ರತಿಕ್ರಿಯಿಸಿ (+)