ದಾವಣಗೆರೆ: ರೋಗಿಯೊಬ್ಬರಿಗೆ ಸಣ್ಣ ಕರುಳಿನಲ್ಲಿ ಉಂಟಾದ ಅಪರೂಪದ ರಕ್ತಸ್ರಾವವನ್ನು ಆಧುನಿಕ ತಂತ್ರಜ್ಞಾನವಾದ ‘ಕ್ಯಾಪ್ಸುಲ್ ಎಂಡೋಸ್ಕೋಪಿ’ ಕಾರ್ಯವಿಧಾನದ ಮೂಲಕ ಪತ್ತೆಹಚ್ಚಿದ ನಂಜಪ್ಪ ಆಸ್ಪತ್ರೆಯ ಪರಿಣತ ವೈದ್ಯರ ತಂಡ ಯಶಸ್ವಿ ಚಿಕಿತ್ಸೆ ನೀಡಿದೆ.

ಉದರ ತಜ್ಞ ಡಾ.ಶಿವರಾಜ್ ಅಫ್ಜಲ್ ಪುರ್ಕರ್ ನೇತೃತ್ವದ ವೈದ್ಯರ ತಂಡ ಕ್ಯಾಪ್ಸುಲ್ ಎಂಡೋಸ್ಕೋಪಿ ಕಾರ್ಯವಿಧಾನ ಸೂಕ್ತವೆಂದು ನಿರ್ಣಯಿಸಿ ರಕ್ತಸ್ರಾವದ ಮೂಲವನ್ನು ಗುರುತಿಸಿ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದೆ.

62 ವರ್ಷದ ವ್ಯಕ್ತಿಯೊಬ್ಬರು ಶಕ್ತಿಹೀನತೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಧಾವಿಸಿದಾಗ ರಕ್ತದಲ್ಲಿ ಹೀಮೋಗ್ಲೋಬಿನ್ ಪ್ರಮಾಣ ತೀರಾ ಕಡಿಮೆಯಾಗಿತ್ತು. ರಕ್ತಸ್ರಾವದ ಮೂಲವನ್ನು ಕಂಡುಹಿಡಿಯಲು ಆರಂಭದಲ್ಲಿ ಕಷ್ಟವಾಗಿತ್ತು.

‘ಕ್ಯಾಪ್ಸುಲ್ ಎಂಡೋಸ್ಕೋಪಿ ವಿಧಾನವು ಅತ್ಯಂತ ಪರಿಣಾಮಕಾರಿಯಾಗಿದ್ದು, ನಿಖರವಾಗಿ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ. ರೋಗಿಗೆ ನುಂಗಿಸಿದ ಕ್ಯಾಮೆರಾ ಹೊಂದಿರುವ ಕ್ಯಾಪ್ಸುಲ್ ಕರುಳಿಗೆ ಹೋಗುತ್ತದೆ. ರಕ್ತಸ್ರಾವ ಹಾಗೂ ಇತರ ಸಮಸ್ಯೆಗಳನ್ನು ಚಿತ್ರಸಹಿತ ಸೆರೆಹಿಡಿದು ರವಾನಿಸುತ್ತದೆ. ಇದನ್ನು ಗಮನಿಸಿ ವೈದ್ಯರು ಚಿಕಿತ್ಸೆ ನೀಡಿದರು’ ಎಂದು ನಂಜಪ್ಪ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.