ಬುಧವಾರ, ಆಗಸ್ಟ್ 21, 2019
27 °C

ಯುಕೋ ಬ್ಯಾಂಕ್‌ನಿಂದ ₹ 10 ಲಕ್ಷವಿದ್ದ ಸೂಟ್‌ಕೇಸ್‌ ಕಳವು

Published:
Updated:

ದಾವಣಗೆರೆ: ಇಲ್ಲಿನ ಬಿನ್ನಿಕಂಪನಿ ರಸ್ತೆಯಲ್ಲಿರುವ ಯುಕೋ ಬ್ಯಾಂಕ್‌ನ ದಿನದ ವಹಿವಾಟಿಗಾಗಿ ಭದ್ರತಾ ಕೊಠಡಿಯಿಂದ ಹಣ ತಂದಿದ್ದ ಸೂಟ್‌ಕೇಸನ್ನೇ ಅಪರಿಚಿತರು ಬುಧವಾರ ಎಗರಿಸಿದ್ದಾರೆ.

ಬ್ಯಾಂಕ್‌ ವ್ಯವಸ್ಥಾಪಕ ಭಕ್ತಿ ಭೂಷಣ್‌ ಗರನಾಯಕ್‌ ಅವರು ಬುಧವಾರ ಬೆಳಿಗ್ಗೆ ಕಟ್ಟಡ ಮಾಲೀಕರ ಜತೆಗೆ ಮಾತನಾಡುವುದಿತ್ತು. ಹೀಗಾಗಿ ಭದ್ರತಾ ಕೊಠಡಿಯ ಕೀಯನ್ನು ಹೆಡ್‌ ಕ್ಯಾಷಿಯರ್‌ ಪ್ರವೀಣ್‌ ಅವರಿಗೆ ನೀಡಿ ನಗದು ತರಲು ತಿಳಿಸಿ ಹೋಗಿದ್ದರು. ಸಿಬ್ಬಂದಿ ದುಗ್ಗಪ್ಪ ಮತ್ತು ಪ್ರವೀಣ್‌ ಭದ್ರತಾ ಕೊಠಡಿಯಿಂದ ₹ 10.15 ಲಕ್ಷವನ್ನು ಸೂಟ್‌ಕೇಸ್‌ನಲ್ಲಿ ತಂದು ಕ್ಯಾಷಿಯರ್‌ ಅನಸೂಯಮ್ಮ ಅವರಿಗೆ ನೀಡಿದ್ದರು. ಸ್ವಲ್ಪ ಹೊತ್ತಿನಲ್ಲೇ ಸೂಟ್‌ಕೇಸ್‌ ನಾಪತ್ತೆಯಾಗಿತ್ತು. ಸಿಸಿಟಿವಿ ಕ್ಯಾಮೆರಾ ನೋಡಿದಾಗ ಐದಾರು ಮಂದಿ ಗ್ರಾಹಕರು ಬ್ಯಾಂಕಿಗೆ ಬಂದಿದ್ದು, ಕ್ಯಾಷಿಯರ್‌ ಮತ್ತು ಇತರರಲ್ಲಿ ಮಾತನಾಡಿ ಗಮನ ಬೇರೆಡೆಗೆ ಸೆಳೆಯುವ ಹೊತ್ತಿನಲ್ಲಿ ಒಬ್ಬ ಸೂಟ್‌ಕೇಸ್‌ ಒಯ್ಯುವುದು ಕಂಡುಬಂದಿದೆ.

ಆರೋಪಿಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಭಕ್ತಿ ಭೂಷಣ್‌ ಗರನಾಯಕ್‌ ಬಸವನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Post Comments (+)