ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿ ಅಭಿವೃದ್ಧಿಗೆ ಪೂರಕ : ಡಿಡಿಪಿಐ ರಾಮಪ್ಪ

ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಡಿಡಿಪಿಐ ರಾಮಪ್ಪ
Last Updated 20 ಸೆಪ್ಟೆಂಬರ್ 2020, 3:05 IST
ಅಕ್ಷರ ಗಾತ್ರ

ಹರಪನಹಳ್ಳಿ: ಪಟ್ಟಣದ ಟಿ.ಎಂ.ಎ.ಇ. ಸಂಸ್ಥೆ ಶಿಕ್ಷಣ ಮಹಾವಿದ್ಯಾಲಯ, ರಾಜ್ಯ ಅನುದಾನಿತ ಬಿ.ಇಡಿ. ಕಾಲೇಜುಗಳ ಅಧ್ಯಾಪಕರ ಸಂಘ, ಬಳ್ಳಾರಿ ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಚೇರಿ ಸಹಯೋಗದಲ್ಲಿ ಶನಿವಾರ ಒಂದು ದಿನದ ರಾಷ್ಟ್ರಮಟ್ಟದ ವಿಚಾರಸಂಕಿರಣ ನಡೆಯಿತು.

ವೆಬಿನಾರ್‌ನಲ್ಲಿರಾಷ್ಟ್ರೀಯ ಶಿಕ್ಷಣ ನೀತಿ-2020ರ ಶಾಲಾ ಶಿಕ್ಷಣ ಮತ್ತು ಶಿಕ್ಷಕರ ಶಿಕ್ಷಣದ ಸವಾಲುಗಳು ಮತ್ತು ಸಮಸ್ಯೆಗಳು ವಿಷಯ ಕುರಿತು ವಿವಿಧ ಸಂಪನ್ಮೂಲ ವ್ಯಕ್ತಿಗಳು ಪ್ರಬಂಧ ಮಂಡಿಸಿದರು.

ಶಾಲಾ ಶಿಕ್ಷಣ, ಸವಾಲುಗಳು ಮತ್ತು ಸಮಸ್ಯೆಗಳು ವಿಷಯ ಕುರಿತು ಮೈಸೂರು ಎನ್‍ಸಿಇಆರ್‌ಟಿ ಆರ್‌ಐಇ ವಿಭಾಗದ ಸಂಪನ್ಮೂಲ ವ್ಯಕ್ತಿ ಡಾ.ಟಿ.ವಿ. ಸೋಮಶೇಖರ, ಶಿಕ್ಷಕರ ಶಿಕ್ಷಣದ ಸವಾಲುಗಳು ಮತ್ತು ಸಮಸ್ಯೆಗಳು ಕುರಿತು ಮೈಸೂರು ಆರ್‌ಐಇ ವಿಭಾಗದ ಸಂಪನ್ಮೂಲ ವ್ಯಕ್ತಿ ಡಾ.ಸುಜಾತ ಬಿ.ಹಂಚಿನಾಳ್‍ ಪ್ರಬಂಧ ಮಂಡಿಸಿದರು.

ಉದ್ಘಾಟಿಸಿದ ಬಳ್ಳಾರಿ ಡಿಡಿಪಿಐ ಸಿ. ರಾಮಪ್ಪ, ‘ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಸಹಕಾರಿ ಆಗಲಿದೆ’ ಎಂದರು.

ಪಂಜಾಬ್, ಮಧ್ಯಪ್ರದೇಶ, ಒಡಿಶಾ, ಹಿಮಾಚಲ ಪ್ರದೇಶ, ದೆಹಲಿ ಸೇರಿ ದೇಶದ ವಿವಿಧ ರಾಜ್ಯದ 1500ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಟಿ.ಎಂ. ಚಂದ್ರಶೇಖರಯ್ಯ, ಅಧ್ಯಾಪಕರ ಸಂಘದ ರಾಜ್ಯಾಧ್ಯಕ್ಷ ಡಾ.ಕೆ. ರಮೇಶ್, ಪ್ರಾಚಾರ್ಯ ಟಿ.ಎಂ. ರಾಜಶೇಖರ, ಡಾ. ಯೋಗೀಶ, ಡಾ.ಸುಧಾ, ಜಗದೀಶ ಗೌಡ ಪಾಟೀಲ್, ಕೆ. ದಾಕ್ಷಾಯಿಣಿ, ಟಿ. ವಂದನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT