ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಕಷ್ಟವೇ ಸಾಧನೆಯ ಮೆಟ್ಟಿಲಾಗಲಿ’

Published 30 ಜುಲೈ 2023, 15:33 IST
Last Updated 30 ಜುಲೈ 2023, 15:33 IST
ಅಕ್ಷರ ಗಾತ್ರ

ದಾವಣಗೆರೆ: ಜೀವನದಲ್ಲಿ ಕಷ್ಟ ಎಂದು ಕೊರಗುವ ಬದಲು ಅದನ್ನೇ ಮೆಟ್ಟಿಲಾಗಿಸಿಕೊಂಡು ಸಾಧನೆ ಮಾಡಬೇಕು ಎಂದು ನಿರ್ಗಮಿತ ಜಿಲ್ಲಾಕಾರಿ ಶಿವಾನಂದ ಕಾಪಶಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸಿದ್ದೇಶ್ವರ ಸ್ವಾಮಿಗಳ ನೆನಪಿನಲ್ಲಿ ಎಸ್ಸೆಸ್ಸೆಲ್ವಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಅಜ್ಜಂಪುರ ಶೆಟ್ರು ಪ್ರತಿಭಾ ಪ್ರತಿಷ್ಠಾನದಿಂದ ಭಾನುವಾರ ಏರ್ಪಡಿಸಿದ್ದ 18ನೇ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಅವರು ಮಾತನಾಡಿದರು.

ಸುಸ್ಥಿತಿಯಲ್ಲಿರುವವರು ಬಡವರ ಕೈಹಿಡಿದು ಮೇಲಕ್ಕೆ ಎತ್ತಬೇಕು. ಆಗ ನಿಮ್ಮಿಂದ ಮೇಲಕ್ಕೆ ಬಂದವನು ಇನ್ನೊಬ್ಬರನ್ನು ಮೇಲೆತ್ತಲು ಸಹಕಾರ ನೀಡಿದಂತಾಗುತ್ತದೆ. ಪ್ರತಿಷ್ಠಾನವು 18 ವರ್ಷಗಳಿಂದ ಪ್ರತಿಭಾ ಪುರಸ್ಕಾರ ಸೇರಿದಂತೆ ನಾನಾ ಸಮಾಜಮುಖಿ ಕಾರ್ಯ ನಡೆಸಿಕೊಂಡು ಬರುತ್ತಿರುವುದು ಅಭಿನಂದನಾರ್ಹ. ಈಗ ನೀಡುತ್ತಿರುವ ಪುರಸ್ಕಾರವು ಜೀವನದಲ್ಲಿ ಮತ್ತಷ್ಟು ಸಾಧನೆ ಮಾಡಲು ಈ ಮಕ್ಕಳಲ್ಲಿ ನವಚೈತನ್ಯ ನೀಡಲಿದೆ" ಎಂದು ಹೇಳಿದರು.

‘ಸಿದ್ದೇಶ್ವರ ಸ್ವಾಮೀಜಿ ಯೋಗಿ, ಜ್ಞಾನಿ ಹಾಗೂ ನಿರಂಜನಮೂರ್ತಿಯಾಗಿದ್ದಾರೆ. ಅವರು ಅಧ್ಯಯನ, ಪ್ರವಚನ ಮತ್ತು ಬರಹವನ್ನು ಜೀವನದಲ್ಲಿ ಮೈಗೂಡಿಸಿಕೊಂಡಿದ್ದರು. ಎಲ್ಲರಿಗೂ ತಿಳಿಯುವಂತೆ ಸರವಾಗಿ ನೀಡುವುದರಲ್ಲಿ ಅವರು ನಾಡಿನ ಉದ್ದಗಲಕ್ಕೂ ಹೆಸರುವಾಸಿಯಾಗಿದ್ದರು. ಆಡಂಬರ ಇಲ್ಲದೇ ಅನುಭವದ ನೆಲೆಯಲ್ಲಿ ಸರಳವಾಗಿ ಬದುಕು ನಡೆಸಿದ ಮಹಾತ್ಮರಾಗಿದ್ದಾರೆ’ ಎಂದು ಡಾ. ಎಸ್.ಎಂ. ಎಲಿ ಸಲಹೆ ನೀಡಿದರು. 

ಬೆಂಗಳೂರಿನ ಜ್ಞಾನಯೋಗ ಆಶ್ರಮದ ಎ.ಎಂ. ಶಿವಕುಮಾರ್ ಅವರು ಸಿದ್ದೇಶ್ವರ ಸ್ವಾಮಿಗಳ ಜೀವನ ಕುರಿತು ಉಪನ್ಯಾಸ ನೀಡಿದರು. ಬಸವ ಬಳಗದ ಅಧ್ಯಕ್ಷ ಎ.ಎಚ್. ಹುಚ್ಚಪ್ಪ ಮೇಷ್ಟ್ರು ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಅಜ್ಜಂಪುರ ರಾಜಣ್ಣ ಮತ್ತಿತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT