ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾಳಿ: ಕುರಿಗಳೊಂದಿಗೆ ತಾಲ್ಲೂಕು ಕಚೇರಿಗೆ ಮುತ್ತಿಗೆ

ಗೋಮಾಳದಲ್ಲಿನ ಅಕ್ರಮ ಸಾಗುವಳಿ ತೆರವಿಗೆ ಅರಬಗಟ್ಟೆ ಗ್ರಾಮಸ್ಥರ ಆಗ್ರಹ
Last Updated 23 ಜೂನ್ 2022, 2:22 IST
ಅಕ್ಷರ ಗಾತ್ರ

ಹೊನ್ನಾಳಿ: ತಾಲ್ಲೂಕಿನ ಅರಬಗಟ್ಟೆ ಗ್ರಾಮದಲ್ಲಿರುವ ಗೋಮಾಳವನ್ನು ಯಾವುದೇ ಕಾರಣಕ್ಕೂ ಅಕ್ರಮ ಸಾಗುವಳಿದಾರರಿಗೆ ಬಿಟ್ಟುಕೊಡಬಾರದು ಎಂದು ಆಗ್ರಹಿಸಿ ಗ್ರಾಮಸ್ಥರು ಸಾವಿರಾರು ಕುರಿಗಳೊಂದಿಗೆ ಬುಧವಾರ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿದರು.

ಗೋಮಾಳದಲ್ಲಿರುವ ಸಾಗುವಳಿದಾರರನ್ನು ತೆರವುಗೊಳಿಸಿ ಜಾನುವಾರುಗಳಿಗೆ ಮೇಯಲು ಹಾಗೂ ನಿರ್ಗತಿಕರು ಮನೆ ನಿರ್ಮಿಸಿಕೊಳ್ಳುವುದಕ್ಕೆ ಮಾತ್ರ ಮೀಸಲಿರಿಸಬೇಕು ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ಆಗ್ರಹಿಸಿದರು.

ಗ್ರಾಮದ ‌ಸರ್ವೆ ನಂ–102, 103, 111, 112, 113, 115 ಹಾಗೂ 120ರ ಗೋಮಾಳ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. 231 ಎಕರೆ ಗೋಮಾಳ ಸಂಪೂರ್ಣವಾಗಿ ಒತ್ತುವರಿಯಾಗಿದೆ. ಇದರಿಂದ ಜಾನುವಾರುಗಳಿಗೆ ಮೇಯಲು ಸ್ಥಳವಿಲ್ಲ. ನಿರ್ಗತಿಕರು, ಬಡವರು ವಾಸಿಸಲು ಮನೆ ಇಲ್ಲದಂತಾಗಿದೆ. ಶೀಘ್ರ ಅಕ್ರಮ ಸಾಗುವಳಿ ಮಾಡುತ್ತಿರುವವರನ್ನು ತೆರವುಗೊಳಿಸಬೇಕು.ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಗ್ರಾಮಸ್ಥರು ಸಾವಿರಾರು ಕುರಿಗಳೊಂದಿಗೆ ರಸ್ತೆಯಲ್ಲಿ ಮೆರವಣಿಗೆ ಮಾಡುತ್ತಾ ಬಂದು ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿದರು. ಇದರಿಂದ ಒಂದು ಗಂಟೆಗಳ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.

ಕುರಿಗಳ ಸಮೇತ ಮೆರವಣಿಗೆ ನಡೆಸಲು ಮುಂದಾದ ಅರಬಗಟ್ಟೆ ಗ್ರಾಮಸ್ಥರನ್ನು ಪೊಲೀಸರು ಸುಂಕದಕಟ್ಟೆ ಹೊನ್ನಾಳಿ ಮಧ್ಯ ಭಾಗದಲ್ಲಿಯೇ ತಡೆದರು. ಅವರ ಮನವಿಯನ್ನು ಆಲಿಸಿದ ಪೊಲೀಸರು ತಹಶೀಲ್ದಾರ್ ಅವರನ್ನು ಸ್ಥಳಕ್ಕೆ ಕರೆಸಿ ನಿಮಗೆ ನ್ಯಾಯ ಒದಗಿಸಿಕೊಡುತ್ತೇನೆ ಎಂದು ಭರವಸೆ ನೀಡಿದರೂ ಗ್ರಾಮಸ್ಥರು ಪಟ್ಟು ಸಡಿಲಿಸಲಿಲ್ಲ. ತಾಲ್ಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದಾಗ ಪೊಲೀಸರು ಅನಿವಾರ್ಯವಾಗಿ ರಕ್ಷಣೆ ನೀಡಬೇಕಾಯಿತು.

ಬಳಿಕ‌‌ ಸಿಪಿಐ ದೇವರಾಜ್ ಹಾಗೂ ಪಿಎಸ್‌ಐ ಬಸವನಗೌಡ ಬಿರಾದರ್ ನೇತೃತ್ವದಲ್ಲಿ ಪೊಲೀಸರು ಪ್ರತಿಭಟನಕಾರರನ್ನು ಬದಿಗೆ ಸರಿಸುತ್ತಾ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಗ್ರಾಮಸ್ಥರ ಮನವಿ ಸ್ವೀಕರಿಸಿದತಹಶೀಲ್ದಾರ್ ಎಚ್.ಜೆ. ರಶ್ಮಿ, ‘ಅಕ್ರಮ ಸಾಗುವಳಿದಾರರರಿಗೆ ಉಳುಮೆ
ಮಾಡಲು ಅವಕಾಶ ಮಾಡಿಕೊಡುವುದಿಲ್ಲ’ ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಆರ್. ಮಹೇಶ್, ಗ್ರಾಮಸ್ಥರಾದ ಸಿದ್ದೇಶಪ್ಪ, ಬಸವನಗೌಡ, ದೊಡ್ಡಬಸಪ್ಪ, ಪವನ್, ಚಿಕ್ಕಪ್ಪ, ಶರತ್, ನಾಗರಾಜ್, ದೊಡ್ಡೇಶ್, ಪಿ. ಬಸವರಾಜಪ್ಪ, ತ್ಯಾಗರಾಜ್, ಪರಮೇಶ್ವರಪ್ಪ, ಸುಶೀಲಮ್ಮ, ಮೈಲಪ್ಪ, ಅರುಣ್‍ಕುಮಾರ್, ಸಣ್ಣಬಸಪ್ಪ, ಸುಜಾತಾ, ವಾಮದೇವಪ್ಪ, ಶಾಂತವೀರ್ ಸೇರಿ ನೂರಾರು ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT