ಮಕ್ಕಳಿಗೆ ಜೀವನ ಕೌಶಲ ಕಲಿಸಿ: ಡಾ.ಪ್ರೀತಿ ಪೈ

7

ಮಕ್ಕಳಿಗೆ ಜೀವನ ಕೌಶಲ ಕಲಿಸಿ: ಡಾ.ಪ್ರೀತಿ ಪೈ

Published:
Updated:
Deccan Herald

ದಾವಣಗೆರೆ: ‘ಇಂದು ಮಕ್ಕಳಿಗೆ ಜೀವನ ಕೌಶಲ ಕಲಿಸುವ ಶಿಕ್ಷಣವನ್ನು ನೀಡುವ ಅಗತ್ಯವಿದೆ’ ಎಂದು ಮಾನಸಿಕ ರೋಗದ ತಜ್ಞೆ ಡಾ. ಪ್ರೀತಿ ಪೈ ಶಾನಭಾಗ್‌ ಅಭಿಪ್ರಾಯಪಟ್ಟರು.

ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಭಾಭವನದಲ್ಲಿ ಭಾನುವಾರ ಹಮ್ಮಿಕಂಡಿದ್ದ ರಾಜ್ಯ ಮಟ್ಟದ ‘ಕನ್ನಡ ಕೌಸ್ತುಭ’, ‘ಸರಸ್ವತಿ ಪುರಸ್ಕಾರ’ ಮತ್ತು ಜಿಲ್ಲಾ ಮಟ್ಟದ ‘ಕನ್ನಡ ಕುವರ– ಕುವರಿ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ವಿದ್ಯಾರ್ಥಿಗಳು ಕೇವಲ ಹೆಚ್ಚು ಅಂಕ ಗಳಿಸಿದರೆ ಸಾಲದು. ಅವರಿಗೆ ಜೀವನದ ಮೌಲ್ಯಗಳ ಬಗ್ಗೆ ತಿಳಿಸಿಕೊಡಬೇಕಾಗಿದೆ. ಪೋಷಕರು ಹಾಗೂ ಶಿಕ್ಷಕರು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಬೇಕು. ಪ್ರತಿ ಮಕ್ಕಳಲ್ಲೂ ಪ್ರತಿಭೆ ಇರುತ್ತದೆ. ಅದನ್ನು ಅನಾವರಣಗೊಳಿಸುವ ಕೆಲಸ ಆಗಬೇಕು. ಶಿಕ್ಷಣದ ಜೊತೆಗೆ ಸಂಗೀತ, ಸಾಹಿತ್ಯ, ಕ್ರೀಡೆಯಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.

‘ಜೀವನದಲ್ಲಿ ಸೋಲು ಎದುರಾಗುವುದು ಸಹಜ. ಇದರಿಂದ ಖಿನ್ನತೆಗೆ ಒಳಗಾಗಬಾರದು. ಸೋಲನ್ನು ಸವಾಲಾಗಿ ಸ್ವೀಕರಿಸಿ, ಸಾಧನೆ ಮಾಡಬೇಕು’ ಎಂದ ಅವರು, ‘ಪೋಷಕರು ಮಕ್ಕಳ ಮೇಲೆ ಅನಗತ್ಯವಾಗಿ ಒತ್ತಡ ಹೇರಬಾರದು. ಸ್ವತಂತ್ರವಾಗಿ ಯೋಚಿಸಿ ನಿರ್ಧಾರ ಕೈಗೊಳ್ಳಲು ಅವಕಾಶ ನೀಡಬೇಕು’ ಎಂದು ಸಲಹೆ ನೀಡಿದರು.

ಕಲಾಕುಂಚದ ಅಧ್ಯಕ್ಷ ಕೆ.ಎಚ್‌. ಮಂಜುನಾಥ್‌ ಅಧ್ಯಕ್ಷತೆ ವಹಿಸಿದ್ದರು. ಎಸ್‌.ಎಸ್‌.ಎಲ್‌.ಸಿ.ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದ ಶಿವಮೊಗ್ಗದ ವಿದ್ಯಾರ್ಥಿ ಅಭಿರಾಮ್‌ ಭಾಗ್ವತ್‌, ‘ಬಾಲ ಸರಸ್ವತಿ’ ಪ್ರಶಸ್ತಿ ಪುರಸ್ಕೃತೆ ಆಯನಾ ಕೆ. ರಮಣ್‌, ಕಲಾಕುಂಚದ ಸಂಸ್ಥಾಪಕ ಸಾಲಿಗ್ರಾಮ ನಾಗೇಶ್‌ ಶೆಣೈ, ಪ್ರಧಾನ ಕಾರ್ಯದರ್ಶಿ ಜೆ.ಬಿ. ಲೋಕೇಶ್‌, ಕಚೇರಿ ಕಾರ್ಯದರ್ಶಿ ವಿಜಯಕುಮಾರ್‌ ಶೆಟ್ಟಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !