ಪಡಿತರ ಚೀಟಿಯಲ್ಲಿ ಸಿದ್ಧಗಂಗಾಶ್ರೀ ಭಾವಚಿತ್ರ ಮುದ್ರಿಸಲು ತೇಜಸ್ವಿ ಪಟೇಲ್‌ ಒತ್ತಾಯ

7

ಪಡಿತರ ಚೀಟಿಯಲ್ಲಿ ಸಿದ್ಧಗಂಗಾಶ್ರೀ ಭಾವಚಿತ್ರ ಮುದ್ರಿಸಲು ತೇಜಸ್ವಿ ಪಟೇಲ್‌ ಒತ್ತಾಯ

Published:
Updated:
Prajavani

ದಾವಣಗೆರೆ: ಸಹಸ್ರ–ಸಹಸ್ರ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರಗಳನ್ನು ನೀಡಿ ಅವರ ಬದುಕಿನಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿರುವ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಭಾವಚಿತ್ರವನ್ನು ಪಡಿತರ ಚೀಟಿಯಲ್ಲಿ ಮುದ್ರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ತೇಜಸ್ವಿ ಪಟೇಲ್‌ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸ್ವಾಮೀಜಿ ಅವರಿಗೆ ಅನೇಕ ಗೌರವಗಳನ್ನು ನೀಡಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಿವೆ. ಹಸಿವು ನೀಗಿಸುವುದಕ್ಕೂ ಸ್ವಾಮೀಜಿ ಆದ್ಯತೆ ನೀಡಿದ್ದರು ಎಂಬುದು ಮನವರಿಕೆಯಾಗುತ್ತದೆ. ಸ್ವಾಮೀಜಿ ಅವರಿಗೆ ಪ್ರಿಯವಾದ ವಿಷಯದಲ್ಲಿ ಅವರಿಗೆ ಗೌರವ ಸೂಚಿಸುವುದು ಹೆಚ್ಚು ಅರ್ಥಪೂರ್ಣವಾಗಿರುತ್ತದೆ. ಹೀಗಾಗಿ ರಾಜ್ಯ ಸರ್ಕಾರದ ಪಡಿತರ ಚೀಟಿಯಲ್ಲಿ ಶಿವಕುಮಾರ ಸ್ವಾಮೀಜಿ ಭಾವ ಚಿತ್ರವನ್ನು (ಲಭ್ಯವಿದ್ದರೆ ಊಟ ಬಡಿಸುತ್ತಿರುವ ಚಿತ್ರ) ಮುದ್ರಿಸುವ ತೀರ್ಮಾನವನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತೆಗೆದುಕೊಳ್ಳಬೇಕು. ಸ್ವಾಮೀಜಿ ಭಾವಚಿತ್ರ ಮುದ್ರಿಸುವ ತೀರ್ಮಾನ ಕೈಗೊಂಡರೆ ಬಡತನ ನಿವಾರಣೆ ಆಗುವವರೆಗೂ ಶಿವಕುಮಾರ ಸ್ವಾಮಿಗಳನ್ನು ಈ ವಿಷಯದಲ್ಲಿ ಸ್ಮರಿಸುತ್ತಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !