ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಪಾದರಾಯನಪುರ ಘಟನೆ ಖಂಡನೀಯ: ಜಿ.ಎಂ. ಸಿದ್ದೇಶ್ವರ

ಕಿಟ್ ವಿತರಣೆ ವೇಳೆ ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿಕೆ
Last Updated 20 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ದಾವಣಗೆರೆ: ಬೆಂಗಳೂರಿನ ಪಾದರಾಯನಪೂರದಲ್ಲಿ ಪೊಲೀಸರ ಅಧಿಕಾರಿಗಳ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ. ಇಂತಹ ಪ್ರಕರಣ ಘಟನೆಗಳು ಪದೆ ಪದೆ ನಡೆಯುತ್ತಿರುವುದು ವಿಷಾದನೀಯ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ನಗರದ ಹೊಂಡದ ವೃತ್ತದಲ್ಲಿ ದಿನಸಿ ಕಿಟ್‌ಗಳ ವಿತರಣೆ ಮಾಡಿ ಅವರು ಮಾತನಾಡಿ, ‘ಭಾರತದ ಇತಿಹಾಸದಲ್ಲಿ ಕೆಟ್ಟ ಪರಿಸ್ಥಿತಿ ಪಾದರಾಯನಪುರದಲ್ಲಿ ಆಗಿದೆ. ವೈದ್ಯರು, ಪೊಲೀಸರು ಹಾಗೂ ಆಶಾ ಕಾರ್ಯಕರ್ತರು ನಮ್ಮನ್ನು ರಕ್ಷಣೆ ಮಾಡುವವರು ಅವರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಪದೇ ಪದೇ ನಡೆಯುತ್ತಿದೆ. ಏಕೆ ಎಂದು ತಿಳಿಯುತ್ತಿಲ್ಲ’ ಎಂದರು.

ದಾವಣಗೆರೆಯಲ್ಲಿ ಮುಸ್ಲಿಮರು ಇದ್ದಾರೆ. ಆದರೆ ಇದುವೆರಗೆ ಇಂತಹ ಘಟನೆ ನಡೆದಿಲ್ಲ. ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರು ಅವರ ಜನಾಂಗದವರಿಗೆ ತಿಳಿವಳಿಕೆ ನೀಡಿದ್ದಾರೆ. ಕೊರೊನಾ ಕಾಯ್ದೆ ಸರ್ವಜನಾಂಗಕ್ಕೂ ಒಂದೇ. ಇದರಲ್ಲಿ ಹಿಂದೂ, ಮುಸ್ಲಿಂ, ಸಿಖ್ಖರು ಎಂಬ ಬೇಧವಿಲ್ಲ. ಈ ಕಾಯಿಲೆ ಎಲ್ಲರಿಗೂ ಬರುವುದರಿಂದ ಎಚ್ಚರಿಕೆಯಿಂದ ಇರಬೇಕು’ ಎಂದರು.

‘ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಅವರ ಮನೆ ವಾಚ್‌ಮನ್ ಆಗಿ ಮನೆ ಕಾಯುತ್ತೇನೆ ಎಂದು ಜಮೀರ್ ಅಹಮದ್ ಹೇಳಿದ್ದರು. ಆದರೆ ಇವತ್ತಿನವರೆಗೂ ಮನೆ ಕಾಯಲಿಲ್ಲ. ಒಂದು ಜನಾಂಗವನ್ನು ಎತ್ತಿಕಟ್ಟುವುದು ಜಮೀರ್ ಕೆಲಸ. ಸಿಎಂ ಯಡಿಯೂರಪ್ಪ ಅವರು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ’ ಎಂದರು.

‘ಯಾವುದೇ ಕ್ಷೇತ್ರದಲ್ಲಿ ಗಲಾಟೆಗಳು ನಡೆದರೆ ಕೇಂದ್ರದ ಗೃಹ ಇಲಾಖೆ ಕಾರ್ಯದರ್ಶಿ ಮಾಹಿತಿ ತೆಗೆದುಕೊಳ್ಳುತ್ತಾರೆ. ಬೆಂಗಳೂರಿನಲ್ಲಿ ಆಗಿರುವುದರಿಂದ ಅಲ್ಲಿಂದ ವರದಿ ತೆಗೆದುಕೊಂಡು ಕ್ರಮ ಕೈಗೊಳ್ಳುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

2ಸಾವಿರಕ್ಕೂ ಹೆಚ್ಚು ಕಿಟ್‌ಗಳನ್ನು ವಿತರಿಸುತ್ತಿದ್ದು, ಅಂತರ ಕಾಯ್ದುಕೊಳ್ಳದಿರುವ ಕಾರಣಕ್ಕೆ ಸಾಂಕೇತಿಕವಾಗಿ 15 ಜನಕ್ಕೆ ನೀಡಲಾಗಿದೆ. ಬಿಜೆಪಿ ಕಾರ್ಯಕರ್ತರು ಮನೆಮನೆಗೆ ಹೋಗಿ ಕಿಟ್ ವಿತರಿಸುತ್ತಾರೆ. ಈ ಭಾಗದ ನಿರ್ಗತಿಕರು, ಊಟಕ್ಕೆ ಇಲ್ಲದಿರುವವರಿಗೆ ಕಿಟ್‌ಗಳನ್ನು ನೀಡಲಾಗುವುದು ಎಂದರು.

ಅಂತರ ಕಾಯ್ದುಕೊಳ್ಳದ ಜನ: ಆಹಾರ ಕಿಟ್ ವಿತರಣೆ ವೇಳೆ ಅಲ್ಲಿಗೆ ಬಂದಿದ್ದ ಜನರು ಯಾವುದೇ ಅಂತರ ಕಾಯ್ದುಕೊಳ್ಳದೇ ಕಿಟ್ ಪಡೆಯಲು ಮುಂದೆ ಬಂದರು. ನಮಗೆ ಸರ್ಕಾರದಿಂದ ಯಾವುದೇ ಸವಲತ್ತು ನೀಡಿಲ್ಲ ಎಂದು ಮಹಿಳೆಯರು ಆರೋಪಿಸಿದರು.

ಅಲ್ಲಿಯೇ ಇದ್ದ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ‘ಇದು ಸರ್ಕಾರದವರು ನೀಡುತ್ತಿರುವ ಕಿಟ್ ಅಲ್ಲ. ನಾವು ಸ್ವಂತ ಹಣದಿಂದ ಬಡವರನ್ನು ಗುರುತಿಸಿ ಅವರಿಗೆ ನೀಡುತ್ತೇವೆ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಹನಗವಾಡಿ, ದೂಡ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯರಾದ ರಾಕೇಶ್ ಜಾಧವ್, ಎಲ್‌.ಡಿ.ಗೋಣೆಪ್ಪ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT