ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೊಗರಿ ಖರೀದಿ ಕೇಂದ್ರ ಶೀಘ್ರ ‌‘

ಟಿಎಪಿಸಿಎಂಎಸ್ ಅಧ್ಯಕ್ಷ ಪ್ರೇಮ್‍ಕುಮಾರ್ ಹೇಳಿಕೆ
Last Updated 22 ಡಿಸೆಂಬರ್ 2020, 3:31 IST
ಅಕ್ಷರ ಗಾತ್ರ

ಹರಪನಹಳ್ಳಿ: ಸರ್ಕಾರದ ನಿರ್ದೇಶನದಂತೆ ಶೀಘ್ರ ಪಟ್ಟಣದಲ್ಲಿ ತೊಗರಿ ಬೆಳೆ ಬೆಂಬಲ ಬೆಲೆ ಖರೀದಿ ಕೇಂದ್ರ ಹಾಗೂ ಜನೌಷಧ ಮಾರಾಟ ಮಳಿಗೆ ಆರಂಭಿಸಲಾಗುವುದು ಎಂದು ಹರಪನಹಳ್ಳಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಪಿ.ಪ್ರೇಮ್‍ಕುಮಾರ್ ತಿಳಿಸಿದರು.

ಪಟ್ಟಣದ ಸಹಕಾರ ಸಂಘದ ಕಚೇರಿ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ 2019-20ನೇ ಸಾಲಿನ ಸಂಘದ 90ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರ ರೈತರ ಹಿತದೃಷ್ಟಿಯಿಂದ ಖರೀದಿ ಕೇಂದ್ರ ಸ್ಥಾಪಿಸುವಂತೆ ನಿರ್ದೇಶನ ನೀಡಿದೆ. ಕೋವಿಡ್ ನಿಯಮ ಮತ್ತು ಸಭೆಯಲ್ಲಿ ಚರ್ಚಿತವಾಗಿರುವಂತೆ ನಿರ್ದೇಶಕರ ಡಿವಿಡೆಂಡ್‌ ಅನ್ನು ಶೇ 18ಕ್ಕೆ ಇಳಿಸಲಾಗಿದೆ. ಸಂಘವು ರಸಗೊಬ್ಬರ, ಪೆಟ್ರೊಲ್‍ ಬಂಕ್, ಉತ್ಪನ್ನಗಳನ್ನು ಸೇರಿಸಿ ಒಟ್ಟು ₹ 8,15,47,802 ವ್ಯವಹಾರ ಮಾಡಿದ್ದು, ಆ ಪೈಕಿ ₹ 11,35,081 ರಷ್ಟು ವ್ಯಾಪಾರಿ ಲಾಭವನ್ನು ಗಳಿಸಿದೆ. ವ್ಯವಹಾರ ಲಾಭ, ಬಾಡಿಗೆಗಳ ಆದಾಯ ಮತ್ತು ಒಟ್ಟು ಕ್ರೋಢಿಕೃತ ಲಾಭ ಸೇರಿ ₹ 53,57,847 ನಿವ್ವಳ ಲಾಭಗಳಿಸಿದೆ ಎಂದು ತಿಳಿಸಿದರು.

ಸಂಘದ ಹಿರಿಯ ಸದಸ್ಯರಾದ ಕಟ್ಟಿ ಆನಂದಪ್ಪ, ತಿಪ್ಪೆರುದ್ರಸ್ವಾಮಿ, ಗೌಳಿ ಈರಣ್ಣ ಸಭೆ ಉದ್ಘಾಟಿಸಿದರು.

ಹಡಗಲಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ, ಸಂಘದ ಉಪಾಧ್ಯಕ್ಷ ತಳವಾರ ಮಂಜಪ್ಪ, ನಿರ್ದೇಶಕರಾದ ಬಿ.ಕೆ. ಪ್ರಕಾಶ್, ಕುಲುಬಿ ಅಬ್ದುಲ್ಲಾ, ಗಿಡ್ಡಳ್ಳಿ ನಾಗರಾಜ್, ಹಾಲೇಶ್‍ನಾಯ್ಕ, ರೇವಣಸಿದ್ದಪ್ಪ, ತಿಮ್ಮಾನಾಯ್ಕ, ಡಿ.ಜಿ. ಪ್ರಕಾಶ್‍ಗೌಡ, ಮಂಜುಳಾಮೂರ್ತಿ, ಎಚ್.ನೇತ್ರಾವತಿ, ಎಂ.ವಿ. ಕೃಷ್ಣಕಾಂತ, ಕೆ. ವಿರೂಪಾಕ್ಷಪ್ಪ, ಹನುಮಂತಪ್ಪ, ಎ. ಬಸವರಾಜಪ್ಪ, ಕಾರ್ಯದರ್ಶಿ ಎಚ್. ತಿರುಪತಿ, ಗುಮಾಸ್ತರಾದ ಟಿ. ಲೋಕನಾಥ್, ಕೆ.ಬಿ.ಗಾಯಿತ್ರಿ, ಕೆ.ಸಂಗೀತ್, ಶಫಿ, ಕೆ.ಬಸವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT