ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂತೇಬೆನ್ನೂರು | ಕಳ್ಳರ ಬಂಧನ: ನಗದು, ಚಿನ್ನಾಭರಣ ವಶ

Published : 1 ಅಕ್ಟೋಬರ್ 2024, 14:43 IST
Last Updated : 1 ಅಕ್ಟೋಬರ್ 2024, 14:43 IST
ಫಾಲೋ ಮಾಡಿ
Comments

ಸಂತೇಬೆನ್ನೂರು: ಬಸವಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಹರೋಸಾಗರ ಹಾಗೂ ಕೋಟೆಹಾಳ್ ಗ್ರಾಮದ ಮನೆಗಳು ಹಾಗೂ ದೇಗುಲಗಳಲ್ಲಿ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಸಿಪಿಐ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ಬಂಧಿಸಿದ್ದು,₹ 12.50 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣ, ನಗದು ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ.

ಬಸವಾಪಟ್ಟಣದ ಅದ್ದೂರಿ ಹನುಮಂತ, ಮಂಜುನಾಥ ಬಂಧಿತ ಆರೋಪಿಗಳು. ಈ ಇಬ್ಬರ ವಿರುದ್ಧ ಬಸವಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 3 ಪ್ರಕರಣಗಳು, ಸಂತೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಪ್ರಕರಣಗಳು ಹಾಗೂ ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ಪ್ರಕರಣ ದಾಖಲಾಗಿವೆ. ಆರೋಪಿತರಿಂದ ₹ 10 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ನಗದು ಹಾಗೂ ₹ 2.5 ಲಕ್ಷ ಮೌಲ್ಯದ ಮೋಟಾರ್ ಬೈಕ್ ವಶಪಡಿಸಿಕೊಳ್ಳಲಾಗಿದೆ.

ಪ್ರಕರಣ ಬೇಧಿಸಲು ಸಿಪಿಐ ಲಿಂಗನಗೌಡ ನೆಗಳೂರು, ಪಿಎಸ್‌ಐ ವೀಣಾ, ಸಿಬ್ಬಂದಿಯಾದ ರುದ್ರೇಶ, ಸತೀಶ, ವೀರಭದ್ರಪ್ಪ, ಗುರುಬಸಪ್ಪ, ಪರಶುರಾಮ,  ಇಬ್ರಾಹಿಂ, ತಿಪ್ಪೇಶ್ ಓಲೆಕಾರ್, ಸಿಪಿಸಿ ತಿಮ್ಮರಾಜು, ರವಿ, ಗಣಕ ಯಂತ್ರ ವಿಭಾಗದ ರಾಘವೇಂದ್ರ, ಶಾಂತರಾಜ್ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಪ್ರಕರಣ ಬೇಧಿಸಲು ಯಶಸ್ವಿಯಾಗಿರುವ ತಂಡಕ್ಕೆ ಎಸ್‌ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್‌ಪಿ ವಿಜಯ ಕುಮಾರ್, ಎಂ.ಸಂತೋಷ್, ಹೆಚ್ಚುವರಿ ಎಸ್‌ಪಿ ಜಿ.ಮಂಜುನಾಥ್, ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT