ಮಂಗಳವಾರ, ಸೆಪ್ಟೆಂಬರ್ 29, 2020
27 °C

ದರ್ಶನ್‌ ನೋಡಲು ನೂಕುನುಗ್ಗಲು: ಲಘು ಲಾಠಿ ಪ್ರಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನಟ ದರ್ಶನ್‌ ಅವರನ್ನು ನೋಡಲು ಅಭಿಮಾನಿಗಳು ಇಲ್ಲಿನ ಬಾಪೂಜಿ ಅತಿಥಿಗೃಹದ ಬಳಿ ಭಾರಿ ಸಂಖ್ಯೆಯಲ್ಲಿ ನೆರೆದಿದ್ದರಿಂದ ನೂಕು ನುಗ್ಗಲು ಉಂಟಾಯಿತು. ಅಭಿಮಾನಿಗಳು ಗೇಟು ದಾಟಿ ಮುಂದೆ ಬರಲು ಪ್ರಯತ್ನಿಸಿದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಭಾನುವಾರ ರಾತ್ರಿ ಶಾಮನೂರು ಮನೆಗೆ ದರ್ಶನ್‌ ಬಂದಾಗಲೂ ಇದೇ ರೀತಿ ನೂಕುನುಗ್ಗಲು ಉಂಟಾಗಿತ್ತು. ಆಗಲೂ ಲಾಠಿ ರುಚಿ ತೋರಿಸಿ ನಿಯಂತ್ರಿಸಲಾಗಿತ್ತು.

ಸೋಮವಾರ ಗೇಟ್‌ ನೂಕಿ ಒಳಬಂದಾಗ ಪೊಲೀಸರು ಲಾಠಿ ಬೀಸಿದರು. ಒಂದು ಕ್ಷಣ ಜನರು ಹಿಂದಕ್ಕೆ ಸರಿದರು. ಬಳಿಕ ವಿ ವಾಂಟ್‌ ಜಸ್ಟೀಸ್‌ ಎಂದು ಕೂಗುತ್ತಾ ನುಗ್ಗುವ ಪ್ರಯತ್ನ ಮಾಡಿದರು.

ಈ ಮಧ್ಯೆ ಮಹಿಳೆಯೊಬ್ಬರು ‘ದರ್ಶನ್‌ನನ್ನು ನೋಡಲೇಬೇಕು’ ಎಂದು ಪಟ್ಟು ಹಿಡಿದಿದ್ದರಿಂದ ಪೊಲೀಸರಿಗೆ ಅವರನ್ನು ಹೊರಗೆ ಕಳುಹಿಸುವುದು ಬಹಳ ಕಷ್ಟವಾಯಿತು. ಸುಮಾರು ಹೊತ್ತು ವಾಗ್ವಾದ ನಡೆದ ಬಳಿಕ ಮಹಿಳೆ ಗೇಟಿನ ಹೊರಗೆ ಹೋದರು.

ಎರಡು ಕುದುರೆ ಕೊಡುಗೆ: ಕಲ್ಲೇಶ್ವರ ರೈಸ್‌ ಮಿಲ್‌ ಬಳಿ ಎಸ್‌.ಎಸ್‌. ಮಲ್ಲಿಕಾರ್ಜುನ ಸಾಕಿದ್ದ ಕುದುರೆಗಳಲ್ಲಿ ದರ್ಶನ್‌ಗೆ ಇಷ್ಟವಾದ ಎರಡು ಕುದುರೆಗಳನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಯಿತು. ದರ್ಶನ್‌ ಸೋಮವಾರ ಕೂಡ ಹರಪನಹಳ್ಳಿ ತಾಲ್ಲೂಕಿನ ದುಗ್ಗಾವತಿಯಲ್ಲಿ ಶಾಮನೂರು ತೋಟದಲ್ಲಿ ಕುರಿ, ಆಕಳು, ಆಡುಗಳ ಜತೆಗೆ ಕಾಲ ಕಳೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು