ಬುಧವಾರ, ಆಗಸ್ಟ್ 17, 2022
26 °C

ಟ್ರೇಲರ್ ಮಗುಚಿ ಅಪಘಾತ: ಒಬ್ಬ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಆನಗೋಡು-ಸಾಸಲು ರಸ್ತೆಯ ಓಬೇನಹಳ್ಳಿ ಕ್ರಾಸ್ ಹತ್ತಿರ ಟ್ರ್ಯಾಕ್ಟರ್‌ನಲ್ಲಿ ಅಡಿಕೆ ತುಂಬಿಕೊಂಡು ಬರುತ್ತಿರುವ ವೇಳೆ ಟ್ರೇಲರ್ ಮಗುಚಿ ಒಬ್ಬರು ಮೃತಪಟ್ಟಿದ್ದು, ಮೂವರಿಗೆ ಗಾಯಗಳಾಗಿವೆ.

ಗುಡ್ಡದ ರಂಗವ್ವನಹಳ್ಳಿ ಗ್ರಾಮದ ಉಮೇಶ್ ಬಾಬು (40) ಮೃತರು. ಮಾರುತಿ, ಕಣುಮೇಶ ಹಾಗೂ ಗಜೇಂದ್ರ ಅವರಿಗೆ ಗಾಯಗಳಾಗಿವೆ.

ಹಿರೇಕಂದವಾಡಿಯ ಗ್ರಾಮದ ತೋಟದಲ್ಲಿ ಅಡಿಕೆ ಕೊಯ್ದು ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ವೇಗವಾಗಿ ಬರುತ್ತಿರುವ ವೇಳೆ ಚಾಲಕ ಹಂಪ್ಸ್‌ ಮೇಲೆ ಹತ್ತಿಸಿದ ಪರಿಣಾಮ ಟ್ರೇಲರ್ ಪಲ್ಟಿಯಾಗಿ ಕೆಳಗೆ ಬಿದ್ದು, ಗಾಯಗೊಂಡಿದ್ದ ಉಮೇಶ್‌ ಬಾಬು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮಾಯಕೊಂಡ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.