ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಟಲದ್ರವ ಪರೀಕ್ಷೆ: ಬಾರದ ಫಲಿತಾಂಶ

Last Updated 17 ಮೇ 2020, 15:25 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಭಾನುವಾರ ಕೊರೊನಾ ವೈರಸ್‌ ಸೋಂಕು ಪ್ರಕರಣ ಪತ್ತೆಯಾಗಿಲ್ಲ. ಇದಕ್ಕೆ ಯಾವುದೇ ಫಲಿತಾಂಶ ಬಾರದೆ ಇರುವುದೇ ಕಾರಣವಾಗಿದೆ.

ಬೆಂಗಳೂರಿನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿಗೆ ಭಾನುವಾರ 393 ಮಾದರಿಗಳನ್ನು ಕಳುಹಿಸಿದ್ದಾರೆ. ಇದು ಒಳಗೊಂಡಂತೆ ಇಲ್ಲಿಯವರೆಗೆ ಕಳುಹಿಸಲಾದ 3643 ಮಾದರಿಗಳಲ್ಲಿ 1489 ಮಾದರಿಗಳ ಫಲಿತಾಂಶ ಬರಲು ಬಾಕಿ ಇದೆ. ಫಲಿತಾಂಶ ಬಂದು ದೃಢಪಟ್ಟ ಪ್ರಕರಣಗಳಿಲ್ಲದಿದ್ದರೆ ಜನರು, ಅಧಿಕಾರಿಗಳು ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. ಆದರೆ ಫಲಿತಾಂಶವೇ ಬಾರದಿರುವುದು ಆತಂಕ ಹೆಚ್ಚಿಸಿದೆ.

‘ಒಂದೊಂದೇ ಹಂತವಾಗಿ ಫಲಿತಾಂಶ ಬರುತ್ತಿದೆ. ಇವತ್ತು ರಾತ್ರಿ ಹಲವು ಫಲಿತಾಂಶಗಳು ಬರಲಿವೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್‌ ತಿಳಿಸಿದ್ದಾರೆ.

ಈವರೆಗೆ 2065 ಫಲಿತಾಂಶಗಳು ನೆಗೆಟಿವ್‌ ಎಂದು ಬಂದಿವೆ. 89 ಪ್ರಕರಣಗಳು ದೃಢಪಟ್ಟಿವೆ. ಅದರಲ್ಲಿ ಇಬ್ಬರು ಗುಣಮುಖರಾಗಿದ್ದಾರೆ. ನಾಲ್ವರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಸದ್ಯ 83 ಪ್ರಕರಣಗಳು ಸಕ್ರಿಯವಾಗಿವೆ.

ಜಾಲಿನಗರದಲ್ಲಿ ಆಕ್ರೋಶ: ‘ಜಾಲಿನಗರದಲ್ಲಿ ಸೋಂಕು ಪತ್ತೆಯಾದ ಮನೆಇರುವ ಬೀದಿಯನ್ನಷ್ಟೇ ಕಂಟೈನ್‌
ಮೆಂಟ್‌ ಝೋನ್‌ ಎಂದು ಘೋಷಿಸಿ. ಉಳಿದ ಪ್ರದೇಶವನ್ನು ಈ ವಲಯದಿಂದ ಹೊರಗೆ ಇಡಬೇಕು. ನಾವು ದುಡಿಯದೇ ಊಟ ಮಾಡೋದು ಹೇಗೆ ?’ ಎಂದು ಸ್ಥಳೀಯರು ಕಂಟೈನ್‌ಮೆಂಟ್‌ ಝೋನ್‌ ಒಳಗೇ ಪ್ರತಿಭಟನೆ ನಡೆಸಿದ್ದಾರೆ.

ನಿಷೇಧಾಜ್ಞೆ ಮುಂದುವರಿಕೆ
ಕೊರೊನಾ ವೈರಸ್‌ ಸೋಂಕು ಇರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಲಂ 144 ಅನ್ವಯ ಮೇ 17ರ ವರೆಗೆ ಹೊರಡಿಸಲಾಗಿದ್ದ ನಿಷೇಧಾಜ್ಞೆಯನ್ನು ಮೇ 19ರ ವರೆಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮುಂದುವರಿಸಿದ್ದಾರೆ.

ಕೋವಿಡ್‌ –19 ಚಿಕಿತ್ಸೆ ಮತ್ತು ಶಾಸನಬದ್ಧ, ನಿಯಂತ್ರಣ ಕಾರ್ಯಗಳನ್ನು ಹೊರತುಪಡಿಸಿ ಬೇರೆಲ್ಲೂ ಐದು ಜನರಿಗಿಂತ ಹೆಚ್ಚು ಮಂದಿ ಸೇರಬಾರದು. ಯಾವುದೇ ಧರ್ಮದ ಪ್ರಾರ್ಥನೆ, ಹಬ್ಬಗಳಿಗಾಗಿ ಒಟ್ಟು ಸೇರಬಾರದು. 10 ವರ್ಷದ ಒಳಗಿನ ಮತ್ತು 65 ವರ್ಷಕ್ಕಿಂತ ಮೇಲಿನವರು, ಮಾನಸಿಕ ಮತ್ತು ದೈಹಿಕ ಕಾಯಿಲೆ ಇರುವವರು ಹೊರಗೆ ಬರಬಾರದು. ರಾತ್ರಿ 7ರಿಂದ ಬೆಳಿಗ್ಗೆ 7ರ ವರೆಗೆ ತುರ್ತು ಅಗತ್ಯಗಳ ಓಡಾಟ ಹೊರತುಪಡಿಸಿ ಸಾರ್ವಜನಿಕರ ಚಲನವಲನ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೊರಡಿಸಿದರು ಆದೇಶದಲ್ಲಿ ತಿಳಿಸಿದ್ದಾರೆ.

ಪೊಲೀಸ್‌ ಕ್ವಾಟ್ರರ್ಸ್‌ 9ನೇ ಕಂಟೈನ್‌ಮೆಂಟ್‌ ಝೋನ್‌
ಪೊಲೀಸ್‌ ಕಾನ್‌ಸ್ಟೆಬಲ್‌ (ಪಿ.975) ಒಬ್ಬರಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ಮೂರು ದಿನಗಳ ಹಿಂದೆ ಖಚಿತಪಟ್ಟ ಹಿನ್ನೆಲೆಯಲ್ಲಿ ಪೊಲೀಸ್‌ ಕ್ವಾಟ್ರರ್ಸ್‌ ಅನ್ನು ಕಂಟೈನ್‌ಮೆಂಟ್‌ ಝೋನ್‌ ಎಂದು ಘೋಷಿಸಲಾಗಿದೆ.

ಬಾಷಾನಗರ, ಜಾಲಿನಗರ, ಇಮಾಂನಗರ, ಬೇತೂರು ರಸ್ತೆ, ಕೆಟಿಜೆ ನಗರ, ಎಸ್‌ಪಿಎಸ್‌ ನಗರ, ಶಿವನಗರ ಮತ್ತು ಜಾಲಿನಗರ ಈಗಾಗಲೇ ಕಂಟೈನ್‌ಮೆಂಟ್‌ ಝೋನ್‌ ಆಗಿದ್ದು, ಈಗ 9ನೇಯದ್ದಾಗಿ ಪೊಲೀಸ್‌ ಕ್ವಾಟ್ರರ್ಸ್‌ ಸೇರ್ಪಡೆಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT