ಗುರುವಾರ , ನವೆಂಬರ್ 21, 2019
20 °C

ಬೈಕ್‌ಗೆ ಕಾರು ಡಿಕ್ಕಿ: ಇಬ್ಬರು ಸಾವು

Published:
Updated:

ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಬಸವರಾಜಪುರ ಗ್ರಾಮದ ಬಳಿ ರಾಜ್ಯ ಹೆದ್ದಾರಿ 65ರಲ್ಲಿ ಬಜಾಜ್ ಪಲ್ಸರ್ ಬೈಕ್ ಮತ್ತು ಕಾರಿನ ನಡುವೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ.

ಹೊಸಳ್ಳಿ ಗ್ರಾಮದ ವಿನಯ್ (16) ಸುಭಾನ್ (22) ಮೃತಪಟ್ಟವರು. ಸೂಳೆಕೆರೆಯಿಂದ ಹೊಸಳ್ಳಿ ಗ್ರಾಮಕ್ಕೆ ಹೊಗುತ್ತಿದ್ದಾಗ ಎದುರುಗಡೆಯಿಂದ ಬಂದ ಮಾರುತಿ‌ ಇಕೊ ಕಾರು ಡಿಕ್ಕಿ ಹೊಡೆದು ಬೈಕ್ ಸವಾರರು ಸ್ಧಳದಲ್ಲಿಯೇ ಮೃತಪಟ್ಟಿರುತ್ತಾರೆ.

ಘಟನಾ ಸ್ದಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ಪ್ರತಿಕ್ರಿಯಿಸಿ (+)