ಮಂಗಳವಾರ, ಆಗಸ್ಟ್ 16, 2022
30 °C

ಹಾಲಿನ ಲಾರಿ–ಕಾರು ಡಿಕ್ಕಿ: ಇಬ್ಬರು ಯುವಕರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನ್ಯಾಮತಿ: ಪಟ್ಟಣದ ಹೊರವಲಯದ ಕುಮಟಾ-ಕಾರಮಡಗಿ ಹೆದ್ದಾರಿಯ ಸಾಲಬಾಳು ಗ್ರಾಮದ ಬಳಿ ಶನಿವಾರ ಸಂಜೆ ಹಾಲಿನ ಲಾರಿ ಮತ್ತು ಆಮ್ನಿ ಕಾರು ಮುಖಾಮುಖಿ ಡಿಕ್ಕಿಯಾಗಿ, ಕಾರಿನಲ್ಲಿದ್ದ ಶಿಕಾರಿಪುರ ತಾಲ್ಲೂಕು ಹೊಸೂರು ಗ್ರಾಮದ ಸಂತೋಷ (32) ಹಾಗೂ ಚಾಲನೆ ಮಾಡುತ್ತಿದ್ದ ಶ್ರೀನಿವಾಸ (33) ಮೃತಪಟ್ಟಿದ್ದಾರೆ.

ಶಿಕಾರಿಪುರ ತಾಲ್ಲೂಕು ಹೊಸೂರಿನಿಂದ ಸವಳಂಗ ಕಡೆ ಹೋಗುತ್ತಿದ್ದ ಕಾರು, ಎದುರುಗಡೆಯಿಂದ ನ್ಯಾಮತಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆಯಿತು. ಸಂತೋಷ ಸ್ಥಳದಲ್ಲೇ
ಮೃತಪಟ್ಟರು. ಶ್ರೀನಿವಾಸ ಅವರ ಕೈಕಾಲು, ತಲೆಗೆ ಪೆಟ್ಟು ಬಿದ್ದು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ರಾತ್ರಿ ಮೃತಪಟ್ಟಿದ್ದಾರೆ. ನ್ಯಾಮತಿ ಎಸ್‌ಐ ಪಿ.ಎಸ್. ರಮೇಶ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು