ಪ್ರಜಾವಾಣಿ ವಾರ್ತೆ

ಕಡರನಾಯ್ಕನಹಳ್ಳಿ: ಚೈತ್ರ ಅಮಾವಾಸ್ಯೆಯ ಪ್ರಯುಕ್ತ ಶುಕ್ರವಾರ ಅಪಾರ ಸಂಖ್ಯೆಯ ಭಕ್ತರು ಉಕ್ಕಡಗಾತ್ರಿ ಅಜ್ಜಯ್ಯನ ದರ್ಶನ ಪಡೆದರು.

ಚೈತ್ರ ಅಮಾವಾಸ್ಯೆ ಅಥವಾ ಅಕ್ಷಯ ತೃತೀಯ ಅಮಾವಾಸ್ಯೆಯಲ್ಲಿ ಮುಂಜಾನೆ ಪವಿತ್ರ ಸ್ನಾನ ಮಾಡಿದರೆ ಒಳಿತಾಗಲಿದೆ ಎಂಬುದು ಭಕ್ತರ ನಂಬಿಕೆ. ಗುರುವಾರ ರಾತ್ರಿಯೇ ಭಕ್ತರು ಬಂದು ತಂಗಿದ್ದರು. ಬೆಳಿಗ್ಗೆ ಸ್ನಾನ ಮಾಡಿ ದಿಂಡುರುಳು ಸಲ್ಲಿಸಿದರು. ವಿವಿಧ ಸಾಂಪ್ರದಾಯಿಕ ಪೂಜೆಗಳೊಂದಿಗೆ ಕರಿಬಸವೇಶ್ವರ ಅಜ್ಜಯ್ಯನ ದರ್ಶನ ಪಡೆದರು.

‘ಸೂರ್ಯೋದಯದ ವೇಳೆ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯ ಅರ್ಪಿಸುವುದು, ಪೂರ್ವಜರಿಗೆ ತರ್ಪಣ ನೀಡುವುದರಿಂದ ಒಳಿತಾಗುತ್ತದೆ’ ಎಂದು ಮೈಸೂರಿನಿಂದ ಬಂದಿದ್ದ ಕೃಷ್ಣಕುಮಾರ್ ತಿಳಿಸಿದರು. ನೀರು ಹಾಗೂ ಬೆಲ್ಲವನ್ನು ದಾನ ಮಾಡುವುದು ಕಂಡು ಬಂತು.

ಹರಕೆ ಹೊತ್ತವರು ಹರಕೆ ಒಪ್ಪಿಸುವುದು, ನದಿ ತಟದಲ್ಲಿ ವಿಘ್ನೇಶ್ವರನ ಪೂಜೆ ಸಲ್ಲಿಸುವುದು, ಸ್ನಾನ ಘಟ್ಟದಲ್ಲಿ ಎಂದಿನಂತೆ ಪೂಜೆ ಪುನಸ್ಕಾರಗಳನ್ನು ಭಕ್ತರು ಮಾಡಿದರು.

ಭಕ್ತರ ಸಂಖ್ಯೆ ಹೆಚ್ಚಳವಾಗಿದ್ದರಿಂದ ವಸತಿ ಗೃಹಗಳು ತುಂಬಿ ಹೋಗಿದ್ದವು. ಸಾರಿಗೆ ಇಲಾಖೆ ಹೆಚ್ಚಿನ ಬಸ್ ಸೌಲಭ್ಯ ಒದಗಿಸಿತ್ತು.

ಕರಿಬಸವೇಶ್ವರ ಅಜ್ಜಯ್ಯನಿಗೆ ಅಭಿಷೇಕ, ವಿಶೇಷ ಪೂಜೆ ನಡೆದವು. ಭಕ್ತರು ಸರತಿ ಸಾಲಿನಲ್ಲಿ ದರ್ಶನ ಪಡೆದರು. ದೇವಸ್ಥಾನದ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-43-2060267295

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.