ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಯದ ಸಾವಿನ ಸರಣಿ: ಮೂವರು ಮರಣ

ದಾವಣಗೆರೆಯ 41, ಜಗಳೂರಿನ 5, ಹರಿಹರದ 2, ಹೊನ್ನಾಳಿಯ 2, ಹರಿಹರದ 1, ಬೇರೆ ಜಿಲ್ಲೆಗಳ 5 ಮಂದಿಗೆ ಸೋಂಕು
Last Updated 18 ಜುಲೈ 2020, 16:31 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಸಾಯುವವ ಸಂಖ್ಯೆ ಏರುತ್ತಿದೆ. ಮೂವರು ಮಹಿಳೆಯರು ಕೊರೊನಾದಿಂದ ಮೃತಪಟ್ಟಿರುವುದು ಶನಿವಾರ ದೃಢಪಟ್ಟಿದೆ. ಶನಿವಾರ 56 ಮಂದಿಗೆ ಕೊರೊನಾ ಬಂದಿದೆ.

ಜಾಲಿನಗರದ 35 ವರ್ಷದ ಮಹಿಳೆ ತೀವ್ರ ಉಸಿರಾಟದ ತೊಂದರೆಯಿಂದ ಜುಲೈ 11ರಂದು ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 13ರಂದು ಮೃತಪ್ಟಟಿದ್ದರು. ಅವರಿಗೆ ಜ್ವರ, ಕಫ ಇತ್ತು. ಜತೆಗೆ ಅಧಿಕ ರಕ್ತದೊತ್ತಡದಿಂದಲೂ ಬಳಲುತ್ತಿದ್ದರು. ಇಮಾಂನಗರದ 45 ವರ್ಷದ ಮಹಿಳೆ ಉಸಿರಾಟದ ತೊಂದರೆಯಿಂದ ಜುಲೈ 13ರಂದು ಆಸ್ಪತ್ರೆಗೆ ದಾಖಲಾಗಿದ್ದು, ಜುಲೈ 17ರಂದು ಮೃತಪಟ್ಟಿದ್ದರು. ಅವರಿಗೆ ಜ್ವರದ ಜತೆಗೆ ಮಧುಮೇಹ, ರಕ್ತದೊತ್ತಡ ಇತ್ತು. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ 48 ವರ್ಷದ ಮಹಿಳೆ ಇದೇ ಸಮಸ್ಯೆಯಿಂದ ಜುಲೈ 15ಕ್ಕೆ ಇಲ್ಲಿನ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದು, ಮರುದಿನ ಮೃತಪಟ್ಟಿದ್ದರು.

ಭಗತ್‌ಸಿಂಗ್‌ ನಗರದ 35 ವರ್ಷದ ಪುರುಷ, ಕುರುಬರ ಕೇರಿಯ 69 ವರ್ಷದ ವೃದ್ಧ, ಕೆಂಚಪ್ಪ ಆಸ್ಪತ್ರೆಯ 62 ವರ್ಷದ ವೃದ್ಧ, ಪಿ.ಜೆ. ಬಡಾವಣೆಯ 55 ವರ್ಷದ ಮಹಿಳೆ, ನರಸರಾಜಪೇಟೆಯ 32 ವರ್ಷದ ಪುರುಷರಿಗೆ ಸೋಂಕು ಬಂದಿದ್ದು, ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಎಂಸಿಸಿ ಬಿ ಬ್ಲಾಕ್‌ನ 30 ವರ್ಷದ ಮಹಿಳೆ, ಬೀಡಿ ಲೇಔಟ್‌ 8 ವರ್ಷದ ಬಾಲಕಿ, 25 ವರ್ಷದ ಯುವಕ, ದೇವರಾಜ ಅರಸು ಬಡಾವಣೆಯ 57 ವರ್ಷದ ಪುರುಷನಿಗೆ ಕಂಟೈನ್‌ಮೆಂಟ್‌ ವಲಯದ ಸಂಪರ್ಕದಿಂದ ಕೊರೊನಾ ಬಂದಿದೆ.

ಆವರಗೆರೆ 53 ವರ್ಷದ ಮಹಿಳೆ, ಆಲೂರಿನ 24 ವರ್ಷದ ಯುವಕನಿಗೆ ಯಾರ ಸಂಪರ್ಕದಿಂದ ಸೋಂಕು ಬಂದಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.

ಅಂಬರ್‌ಕರ್‌ ಪಂಪಣ್ಣ ಟೆಕ್ಸ್‌ಟೈಲ್ಸ್‌ನ 39 ವರ್ಷದ ಪುರುಷ, ತರಳಬಾಳು ಬಡಾವಣೆಯ 34 ವರ್ಷದ ಪುರುಷನಿಗೆ ಶೀತಜ್ವರ ಉಂಟಾಗಿದೆ.

ಬೆಂಗಳೂರಿನಿಂದ ಬಂದಿರುವ ವಿದ್ಯಾನಗರದ 34 ವರ್ಷದ ಮಹಿಳೆ, ಬಸಾಪುರದ 35 ವರ್ಷದ ಪುರುಷ, 26 ವರ್ಷದ ಯುವತಿ, ದೀಕ್ಷಿತ ರಸ್ತೆಯ 21 ಮತ್ತು 25 ವರ್ಷದ ಯುವಕರು, 68 ವರ್ಷದ ವೃದ್ಧ, 34 ವರ್ಷದ ಮಹಿಳೆಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.

ಬೀಡಿ ಲೇಔಟ್‌ನ 37, 40 ವರ್ಷದ ಮಹಿಳೆಯರು, 17 ವರ್ಷದ ಬಾಲಕಿ, 45 ವರ್ಷದ ಪುರುಷ, 18 ವರ್ಷದ ಯುವತಿಯರಿಗೆ ಸಂಪರ್ಕ, 16 ವರ್ಷದ ಬಾಲಕನ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಪಿ.ಜೆ. ಬಡಾವಣೆಯ 45 ವರ್ಷದ ಪುರುಷನಿಗೆ, ಸರಸ್ವತಿನಗರದ 49 ವರ್ಷದ ಮಹಿಳೆಗ, ಪಾಮೇನಹಳ್ಳಿಯ 20 ವರ್ಷದ ಯುವತಿ ಕಂಟೈನ್‌ಮೆಂಟ್‌ ಸಂಪರ್ಕದಿಂದ ಕೊರೊನಾ ಬಂದಿದೆ. ಬಾಪೂಜಿ ಆಸ್ಪತ್ರೆಯ 34 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

ಡಿಸಿಎಂ ಟೌನ್‌ಶಿಪ್‌ 39 ವರ್ಷದ ಪುರುಷ, ಎನ್‌.ಆರ್‌. ರೋಡ್‌ನ 60 ವರ್ಷದ ವೃದ್ಧ, ಬೇತೂರು ರಸ್ತೆಯ 50 ವರ್ಷದ ಪುರುಷ, ಡಿಸಿಬಿ ಬ್ಯಾಂಕ್‌ನ 40 ವರ್ಷದ ಪುರುಷನಿಗೆ ಶೀತಜ್ವರ ಉಂಟಾಗಿದೆ.

ಬಿ.ಟಿ. ಕಾಂಪೌಂಡ್‌ನ 48 ವರ್ಷದ ಪುರುಷ, ನಿಟುವಳ್ಳಿ ಜಯನಗರದ 55 ವರ್ಷದ ಮಹಿಳೆ, ಸೇವಾದಳ ಕ್ವಾಟ್ರರ್ಸ್‌ 55 ವರ್ಷದ ಮಹಿಳೆ, ಕುಂದವಾಡದ 25 ವರ್ಷದ ಯುವಕ, ಕೆ.ಆರ್‌. ರೋಡಿನ 48 ವರ್ಷದ ಪುರುಷ, ಕೆ.ಆರ್‌.ರೋಡ್‌ನ 45 ವರ್ಷದ ಪುರುಷನಿಗೆ ಸೋಂಕು ಬಂದಿದೆ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಚನ್ನಗಿರಿ ತಾಲ್ಲೂಕು ನಲ್ಲೂರಿನ 57 ವರ್ಷದ ಪುರುಷನಿಗೆ ಶೀತಜ್ವರ ಬಂದಿದೆ. ಹರಿಹರ ಕೆ.ಆರ್‌.ನಗರದ 18 ವರ್ಷದ ಯುವತಿಗೆ ಕಂಟೈನ್‌ಮೆಂಟ್‌ ಸಂಪರ್ಕದಿಂದ ವೈರಸ್‌ ತಗುಲಿದೆ. ಬೆಂಕಿನಗರದ 65ರ ವೃದ್ಧ ಶೀತಜ್ವರ ಉಂಟಾಗಿದೆ.

ಹೊನ್ನಾಳಿ ತಾಲ್ಲೂಕಿನ ಭೈರನಹಳ್ಳಿಯ 70 ವರ್ಷದ ವೃದ್ಧೆಗೆ ಕೊರೊನಾ ಬಂದಿದೆ. ಬೆಂಗಳೂರಿನಿಂದ ಬಂದಿರುವ ಹೊನ್ನಾಳಿ ಜಿನಹಳ್ಳಿ 25 ವರ್ಷದ ಯುವಕನಲ್ಲೂ ವೈರಸ್‌ ಕಾಣಿಸಿಕೊಂಡಿದೆ.

ಜಗಳೂರು ತಾಲ್ಲೂಕು ಗೊಲ್ಲರಹಟ್ಟಿಯ 80 ವರ್ಷದ ವೃದ್ಧೆಗೆ ಸೋಂಕು ಬಂದಿದ್ದು, ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಬೆಂಗಳೂರಿನಿಂದ ಚಿಕ್ಕಬನ್ನಿ ಹಟ್ಟಿಯ 66 ವರ್ಷದ ವೃದ್ಧರಿಗೆ ಕೊರೊನಾ ಬಂದಿದೆ. ತಾಲ್ಲೂಕಿನ ಬಿದರಕೆರೆಯ 54 ವರ್ಷದ ವ್ಯಕ್ತಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಯೆರೇಹೊಸಲ್ಲಿಯ 75 ವರ್ಷದ ವೃದ್ಧೆಗೆ ಕಂಟೈನ್‌ಮೆಂಟ್‌ ಸಂಪರ್ಕದಿಂದ ಸೋಂಕು ತಗುಲಿದೆ. ಬೆಂಗಳೂರಿನಿಂದ ಹಿಂತಿರುಗಿರುವ ಜಗಳೂರು ಇಂದಿರಾ ಬಡಾವಣೆಯ 58 ವರ್ಷದ ಪುರುಷನಲ್ಲೂ ಸೋಂಕು ಪತ್ತೆಯಾಗಿದೆ.

ಬಳ್ಳಾರಿ ಜಿಲ್ಲೆ ಹರಪನಹಳ್ಳಿ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿಯ 34 ವರ್ಷದ ಪುರುಷ, ತಾಲ್ಲೂಕು ಕಲ್ಲಹಳ್ಳಿಯ 32 ವರ್ಷದ ಪುರುಷನಿಗೆ ಶೀತಜ್ವರ ಎಂದು ಗುರುತಿಸಲಾಗಿದೆ. ಕಮ್ಮತ್ತಹಳ್ಳಿ 35 ವರ್ಷದ ಮಹಿಳೆಗೆ ಕೊರೊನಾ ಬಂದಿದೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮೈದೂರಿನ 80 ವರ್ಷದ ವೃದ್ಧನಿಗೂ ಸೋಂಕು ಇರುವುದು ಗೊತ್ತಾಗಿದೆ.

ಜಿಲ್ಲೆಯಲ್ಲಿ ಈವರೆಗೆ 745 ಮಂದಿಗೆ ಸೋಂಕು ತಗುಲಿದೆ. ಶನಿವಾರ 16 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅವರೂ ಸೇರಿ ಒಟ್ಟು 560 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 27 ಮಂದಿ ಮೃತಪಟ್ಟಿದ್ದಾರೆ. 158 ಪ್ರಕರಣಗಳು ಸಕ್ರಿಯವಾಗಿದೆ. ಅದರಲ್ಲಿ 8 ಮಂದಿ ಐಸಿಯುನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT