ಶುಕ್ರವಾರ, ಡಿಸೆಂಬರ್ 13, 2019
21 °C

ಬಿಡುಗಡೆಯಾಗದ ಸಹಾಯಧನ: ಕಟ್ಟಡ ಕಾರ್ಮಿಕರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕಟ್ಟಡ ಕಾರ್ಮಿಕರಿಗೆ ಮದುವೆ ಸಹಾಯಧನ, ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ ಇನ್ನಿತರ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿ ಶ್ರಮಶಕ್ತಿ ಕಟ್ಟಡ ಕಾರ್ಮಿಕರ ಯೂನಿಯನ್‌ ಸದಸ್ಯರು ಸೋಮವಾರ ಕಾರ್ಮಿಕ ಅಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

3 ವರ್ಷಗಳಿಂದ ಶೈಕ್ಷಣಿಕ ಸಹಾಯಧನ (ಕಲಿಕಾಭಾಗ್ಯ) ಬಿಡುಗಡೆಯಾಗಿಲ್ಲ. ಗೃಹಲಕ್ಷ್ಮೀ ಬಾಂಡ್‌ ಕೂಡ ಬಂದಿಲ್ಲ. ಆಸ್ಪತ್ರೆಯ ಖರ್ಚಿನ ಹಣದ ಬಿಲ್ಲುಗಳನ್ನು 3 ತಿಂಗಳೊಳಗೆ ಬಿಡುಗಡೆಯಾಗಬೇಕು ಎಂಬ ನಿಯಮ ಪಾಲನೆಯಾಗುತ್ತಿಲ್ಲ. ಪಿಂಚಣಿ ಸೌಲಭ್ಯ ಒದಗಿಸಿಲ್ಲ. ಹೊಸ ಗುರುತಿನ ಚೀಟಿಯ ಗೊಂದಲಗಳನ್ನು ಸರಿಪಡಿಸಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು.

ಕೂಡಲೇ ಕಟ್ಟಡ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಯೂನಿಯನ್‌ ಗೌರವ ಅಧ್ಯಕ್ಷ ಎಂ. ಕರಿಬಸಪ್ಪ, ಅಧ್ಯಕ್ಷ ನೂರ್ ಅಹ್ಮದ್‌, ಉಪಾಧ್ಯಕ್ಷ ದಾದಾಪೀರ್‌, ಪ್ರಧಾನ ಕಾರ್ಯದರ್ಶಿ ಜಬೀನಾಖಾನಂ, ಖಜಾಂಚಿ ಎ.ಜಿ. ಇಸ್ಮಾಯಿಲ್‌ ಅಶ್ರಫಿ, ಎಂ.ಆರ್‌. ಸಿದ್ದೇಶ್‌, ಸಾದಿಕ್‌ ಹುಸೇನ್‌, ಸುಲ್ತಾನ್‌ ಬಾಷಾ, ಮಹಮ್ಮದ್‌ ರಫೀಕ್‌ ಅವರೂ ಇದ್ದರು.

ಪ್ರತಿಕ್ರಿಯಿಸಿ (+)