ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ಮಾರಾಟ ನಿಷೇಧದಿಂದ ಮಾಫಿಯಾ ಸೃಷ್ಟಿ: ಕಮಲ್

Last Updated 1 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಚೆನ್ನೈ : ಮದ್ಯ ಮಾರಾಟ ನಿಷೇಧ ಮಾಡುವುದರಿಂದ ‘ಮಾಫಿಯಾ’ ಸೃಷ್ಟಿಯಾಗಲಿದೆ ಎಂದು ಮಕ್ಕಳ್‌ ನೀದಿ ಮಯ್ಯಂ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಕಮಲ್‌ ಹಾಸನ್‌ ಅಭಿಪ್ರಾಯಪಟ್ಟಿದ್ದಾರೆ.

‘ಆನಂದ ವಿಕಟನ್‌’ ಎಂಬ ತಮಿಳು ನಿಯತಕಾಲಿಕೆಗೆ ಬರೆದ ಅಂಕಣದಲ್ಲಿ ಕಮಲ್‌ ಹಾಸನ್‌ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ.

ತಮ್ಮ ಲೇಖನದಲ್ಲಿ ‘ಮಾಫಿಯಾ’ ಸೃಷ್ಟಿಯ ಬಗ್ಗೆ ವಿವರವಾಗಿ ಚರ್ಚಿಸದಿದ್ದರೂ, ಮದ್ಯ ನಿಷೇಧದಿಂದ ಕಳ್ಳಬಟ್ಟಿ ಮಾರಾಟ ಆರಂಭವಾಗಲಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

‘ಜೂಜಾಟದ ಮೇಲೆ ನಿಷೇಧ ಹೇರಿದಂತೆ, ಮದ್ಯದ ಮೇಲೆ ನಿಷೇಧ ಹೇರಲು ಸಾಧ್ಯವಿಲ್ಲ. ಮದ್ಯ ಸೇವನೆ ಕಡಿಮೆ ಮಾಡಬಹುದು. ಆದರೆ, ಅದನ್ನು ಪೂರ್ಣ ಪ್ರಮಾಣದಲ್ಲಿ ನಿಲ್ಲಿಸಬಹುದು ಎಂಬುದರ ಬಗ್ಗೆ ಅನುಮಾನಗಳಿವೆ’ ಎಂದು ವಿವರಿಸಿದ್ದಾರೆ.

‘2016ರ ತಮಿಳುನಾಡು ವಿಧಾನಸಭಾ ಚುನಾವಣೆ ವೇಳೆ ಎಲ್ಲ ರಾಜಕೀಯ ಪಕ್ಷಗಳು ಮದ್ಯ ನಿಷೇಧ ಕುರಿತು ಮಾತನಾಡಿದ್ದವು. ಆದರೆ, ಮಹಿಳಾ ಮತದಾರರನ್ನು ಸೆಳೆಯುವ ಸಲುವಾಗಿ ಈ ಕುರಿತು ಅವು ಮಾತನಾಡುತ್ತವೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT