ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೋಲಾರ್ ಸದ್ಬಳಕೆ ಆಗತ್ಯ’

Last Updated 27 ಡಿಸೆಂಬರ್ 2018, 13:39 IST
ಅಕ್ಷರ ಗಾತ್ರ

ಹೊನ್ನಾಳಿ: ಸಾರ್ವಜನಿಕರು ತಮ್ಮ ಮನೆ, ವಾಣಿಜ್ಯ ಕಟ್ಟಡಗಳ ಮೇಲೆ ಸೋಲಾರ್‌ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಬೆಂಗಳೂರಿನ ಸೋಲಾರ್ ಘಟಕ ನಿರ್ವಾಹಕ ವಿಜಯಕುಮಾರ ಹೇಳಿದರು.

ಗುರುವಾರ ಇಲ್ಲಿನ ಸಾಮರ್ಥ್ಯಸೌಧದಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಅಭಿವೃದ್ದಿ ಸಂಸ್ಥೆ, ಗ್ರಾಮಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆ ಸಹಯೋಗದಲ್ಲಿ ನವೀಕರಿಸಬಹುದಾದ ಇಂಧನ, ಘನತ್ಯಾಜ್ಯ ನಿರ್ವಹಣೆ, ಮಳೆನೀರು ಕೊಯ್ಲು ಕುರಿತು ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ವಿದ್ಯುತ್ ಹೆಚ್ಚಾಗಿ ಬಳಸಿಕೊಂಡರೆ ಆರ್ಥಿಕ ಹೊರೆ ಹೆಚ್ಚಾಗುತ್ತದೆ. ಆರ್ಥಿಕ ಹೊರೆ ತಗ್ಗಿಸಲು ಮನೆಗಳ ಮೇಲೆ 500 ಕಿ. ವ್ಯಾಟ್ ಸೋಲಾರ್ ಅಳವಡಿಸಿಕೊಂಡರೆ ವಿದ್ಯುತ್ ಉಳಿತಾಯವಾಗುತ್ತದೆ. ಅದನ್ನು ವಿದ್ಯುತ ಪ್ರಸರಣ ನಿಗಮಕ್ಕೂ ಮಾರಾಟ ಮಾಡಿಕೊಳ್ಳಬಹುದು ಎಂದರು.

ಸೋಲಾರ್‍ನಿಂದ ಬೀದಿದೀಪ, ಸೌರಶಕ್ತಿ, ಪಂಪ್‍ಸೆಟ್, ಸೌರಫಲಕ, ಸೌರಶಕ್ತಿಯ ಗೃಹದೀಪ, ಸೋಲಾರ ಲ್ಯಾಂಟರ್ನ್‍ಗಳನ್ನು ಉಪಯೋಗಿಸಿಕೊಳ್ಳಬಹುದು ಎಂದರು.

ಮಳೆನೀರು ಕೊಯ್ಲು ಬಗ್ಗೆ ಮಾತನಾಡಿದ ಪಂಚಾಯತ್ ರಾಜ್ ಇಲಾಖೆಯ ತರಬೇತಿದಾರರಾದ ಹೇಮಲತಾ, ‘ನೀರು ಅತ್ಯಮೂಲ್ಯವಾಗಿದ್ದು ಅದನ್ನು ಮಿತವಾಗಿ ಬಳಸಬೇಕು. ಇಂದಿನ ದಿನಗಳಲ್ಲಿ ಎಲ್ಲಾ ಕಡೆ ಸಿಸಿ ರಸ್ತೆ, ಚರಂಡಿ ನಿರ್ಮಿಸುತ್ತಿರುವುದರಿಂದ ಮಳೆ ನೀರು ಇಂಗದೆ ಅಂತರ್ಜಲ ಮಟ್ಟ ಕಡಿಮೆಯಾಗುತ್ತದೆ. ಪ್ರತಿ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಇಂಗು ಗುಂಡಿ, ಮಳೆನೀರು ಸಂಗ್ರಹದಂತಹ ವಿನೂತನ ಯೋಜನೆಗಳನ್ನು ಕುರಿತು ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಜೈವಿಕ ಇಂಧನದ ಬಗ್ಗೆ ಮಾತನಾಡಿದ ಸಂಪನ್ಮೂಲ ವ್ಯಕ್ತಿ ಸಂತೋಷ್, ‘ಮೆಕ್ಕೆಜೋಳ, ಕಬ್ಬು, ಸೋಯಾಬಿನ್‌ನಂತಹ ಸಸ್ಯಗಳಿಂದ ಬಯೋ ಇಥನಾಲ್ ಪರ್ಯಾಯವಾಗಿ ಪೆಟ್ರೋಲ್ ಆಗಿ ಉಪಯೋಗಿಸಿಕೊಳ್ಳಬಹುದು. ರೈತರು ತಮ್ಮ ಜಮೀನಿನ ಬದುಗಳಲ್ಲಿ ಕನಿಷ್ಠ 10 ಮೀ. ಅಂತರದಲ್ಲಿ ಇಂಧನ ಸಸಿಗಳನ್ನು ನೆಡುವುದರಿಂದ ಒಂದು ಗಿಡಕ್ಕೆ 20 ರಿಂದ 50 ಕೆ.ಜಿ ಇಳುವರಿ ಬರುತ್ತದೆ. ₹ 300 ರಿಂದ ₹ 800 ಗಳವರೆಗೆ ಆದಾಯ ಗಳಿಸಬಹುದು’ ಎಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹ್ಮದ್ ರಫಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT