ದಾವಣಗೆರೆ: ‘ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀಗಳು ಪೀಠಾರೋಹಣದ ಸಂದರ್ಭದಲ್ಲಿ ತಿಳಿಸಿದಂತೆ ಬೆಂಗಳೂರಿನ ಶ್ವಾಸ ಯೋಗ ಪೀಠವನ್ನು ತ್ಯಜಿಸಬೇಕು. ಇದೇ 24ರಂದು ನಡೆಯಲಿರುವ ಟ್ರಸ್ಟ್ ಸಭೆಯಲ್ಲಿ ಈ ಕುರಿತ ಅಂತಿಮ ನಿರ್ಧಾರ ಪ್ರಕಟಿಸಬೇಕು’ ಎಂದು ಗುರುಪೀಠದ ಟ್ರಸ್ಟ್ನ ಮುಖಂಡರು ಗಡುವು ನೀಡಿದರು.

‘ಸ್ವಾಮೀಜಿಯವರು ಶ್ವಾಸ ಯೋಗ ಪೀಠ ತ್ಯಜಿಸಿ ಪೂರ್ಣ ಪ್ರಮಾಣದಲ್ಲಿ ಸಮುದಾಯದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಟ್ರಸ್ಟ್ನ ಸಭೆಗಳಲ್ಲಿ ಈ ಬಗ್ಗೆ ನಿರ್ಧರಿಸಿದಂತೆ ಈಗಾಗಲೇ 6 ಬಾರಿ ಶ್ರೀಗಳಿಗೆ ಈ ಕುರಿತು ತಿಳಿಸಿದ್ದರೂ, ಅವರು ಅಂತಿಮ ನಿರ್ಧಾರ ಕೈಗೊಂಡಿಲ್ಲ. ತಿಂಗಳಲ್ಲಿ ಒಂದೆರಡು ದಿನ ಮಾತ್ರ ಗುರುಪೀಠದಲ್ಲಿರುವ ಅವರು ಬಹುತೇಕ ದಿನ ಬೇರೆಡೆ ಇರುವುದನ್ನು ಒಪ್ಪಲು ಸಾಧ್ಯವಿಲ್ಲ. ಮಠವನ್ನು ಅತಿಥಿಗೃಹ (ಗೆಸ್ಟ್ಹೌಸ್) ಮಾಡಿಕೊಳ್ಳಲು ಬಿಡುವುದಿಲ್ಲ’ ಎಂದು ಟ್ರಸ್ಟ್ನ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಒಂದು ವಾರ ಎಂದು ಹೇಳಿ ವಿದೇಶ ಪ್ರವಾಸ ಕೈಗೊಳ್ಳುವ ಶ್ರೀಗಳು, 40 ದಿನ ಕಳೆದರೂ ವಾಪಸ್ ಬರುವುದಿಲ್ಲ. ಸಮುದಾಯದ ಬಡಜನರ ಬಗೆಗಿನ ಕಾಳಜಿಯಾಗಲೀ, ಸಂಸ್ಕಾರವಾಗಲೀ ಅವರಲ್ಲಿ ಕಾಣುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಟ್ರಸ್ಟ್ನಿಂದ ಅವ್ಯವಹಾರ ನಡೆದಿಲ್ಲ. ಪ್ರತೀ ವರ್ಷವೂ ಸರ್ಕಾರಕ್ಕೆ, ಸಮುದಾಯಕ್ಕೆ ಲೆಕ್ಕ ನೀಡಿದ್ದೇವೆ. ಶ್ರೀಗಳನ್ನು ಗುರುಪೀಠದಿಂದ ತೆಗೆಯುವ ಉದ್ದೇಶವಿಲ್ಲ. ಅವರು ಶ್ವಾಸ ಯೋಗ ಪೀಠ ತ್ಯಜಿಸಿ, ಇಲ್ಲಿಯೇ ಉಳಿಯುವ ವಿಶ್ವಾಸವಿದೆ. ತ್ಯಜಿಸದಿದ್ದರೆ, ಟ್ರಸ್ಟ್ನ ಮುಖಂಡರು ಸಭೆ ನಡೆಸಿ ಅಂತಿಮ ನಿರ್ಧಾರವನ್ನು ಕೈಗೊಳ್ಳುತ್ತೇವೆ’ ಎಂದು ಹೇಳಿದರು.

‘ಹಾಲಿ ಟ್ರಸ್ಟಿಗಳನ್ನು ತೆಗೆದು ಅವರು ಸೂಚಿಸಿದವರನ್ನು ಟ್ರಸ್ಟಿಗಳನ್ನಾಗಿ ಮಾಡಲು ಶ್ರೀಗಳು ಹೇಳಿದ್ದರು. ಅವರ ಮಾತಿಗೆ ನಾವು ಒಪ್ಪದಿದ್ದಾಗ, ಲೆಕ್ಕಪತ್ರದ ವಿಚಾರ ತಂದಿದ್ದಾರೆ’ ಎಂದರು.

‘ಶ್ರೀಗಳ ವರ್ತನೆಯಲ್ಲಿ ವ್ಯತ್ಯಾಸವಾದರೆ ಪೀಠದಿಂದ ತೆಗೆಯಲಾಗುವುದು ಎಂದು ಬೈಲಾದಲ್ಲೇ ಇದೆ. ಶ್ರೀಗಳು ರಾಜಕೀಯ ಪಕ್ಷಗಳ ಗುಲಾಮರಾಗಬಾರದು. ಅವಾಚ್ಯ ಪದಗಳನ್ನು ಬಳಸುವ ಶ್ರೀಗಳಿಗೆ ತಿದ್ದಿಕೊಳ್ಳಿ ಎಂದು ಹಲವು ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ’ ಎಂದು ಪೀಠದ ಸಂಸ್ಥಾಪಕ ಟ್ರಸ್ಟಿ ಬಾವಿ ಬೆಟ್ಟಪ್ಪ ದೂರಿದರು.

‘ದಾಸೋಹ ಕೊಠಡಿ, ವಿದ್ಯಾರ್ಥಿ ನಿಲಯ ಹಾಗೂ ಇನ್ನಿತರ ಕಾಮಗಾರಿಗಳಿಗೆ ಸರ್ಕಾರದಿಂದ ಅನುದಾನ ಬಾರದಿದ್ದಾಗ ಬಿ.ಸಿ. ಉಮಾಪತಿ ಅವರೇ ವೈಯಕ್ತಿಕವಾಗಿ ಖರ್ಚು ಭರಿಸಿದ್ದಾರೆ. ಪ್ರತೀ ವರ್ಷ ಆಡಿಟ್ ನಡೆದಿದೆ. ಹಣ ದುರುಪಯೋಗ ಆಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಎಷ್ಟು ಬಾರಿ ಅಂತ ಲೆಕ್ಕ ಒಪ್ಪಿಸಬೇಕು?’ ಎಂದು ಪ್ರಶ್ನಿಸಿದರು.

ಟ್ರಸ್ಟ್ನ ಕಾರ್ಯದರ್ಶಿ ಜ್ಯೋತಿ ಪ್ರಕಾಶ್, ಮುಖಂಡರಾದ ಚಂದ್ರಶೇಖರ್ ಪೂಜಾರ್, ಬಸವರಾಜ ದಿಂಡೂರು, ಪಿ.ಡಿ. ಶಿರೂರು, ನಾಗಣ್ಣ, ಹಾವೇರಿ ಮಹೇಶ್, ಎಸ್.ಎಸ್. ಪಾಟೀಲ, ಪರಮೇಶ್ ಪಟ್ಟಣಶೆಟ್ಟಿ, ಕಿಚಡಿ ಕೊಟ್ರೇಶ್ ಮತ್ತಿತರರು ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.