ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಹಾವು ರಕ್ಷಿಸಿದ ವಾಲ್ಮೀಕಿ ಸ್ವಾಮೀಜಿ

Last Updated 4 ನವೆಂಬರ್ 2020, 15:41 IST
ಅಕ್ಷರ ಗಾತ್ರ

ಹರಿಹರ: ಮಠ ಹಾಗೂ ಗುರುಪೀಠಗಳ ಸ್ವಾಮೀಜಿಗಳು ಕೇವಲ ಧಾರ್ಮಿಕ ಕಾರ್ಯಗಳಿಗೆ, ಭಕ್ತರ ಮಾರ್ಗದರ್ಶನ ಹಾಗೂ ಆಶೀರ್ವಾದ ಮಾಡಲು ಮಾತ್ರ ಸೀಮಿತ ಎಂಬ ಭಾವನೆ ಸಹಜ. ಆದರೆ, ತಾಲ್ಲೂಕಿನ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಬರಿಗೈಲಿ ನಾಗರಹಾವನ್ನು ಹಿಡಿದು ರಕ್ಷಿಸುವ ಮೂಲಕ ಜೀವ ಮೌಲ್ಯವನ್ನು ಸಾರಿದ್ದಾರೆ.

ಮಠದ ಆವರಣದಲ್ಲಿರುವ ಕಲ್ಯಾಣ ಮಂಟಪದಲ್ಲಿ ಎರಡು ದಿನಗಳ ಹಿಂದೆ ನಾಗರಹಾವು ಕಾಣಿಸಿಕೊಂಡಿತ್ತು. ಇದರಿಂದ ಭಕ್ತರು ಹಾಗೂ ಅಲ್ಲಿನ ಜನರಲ್ಲಿ ಪ್ರಾಣ ಭಯದ ವಾತಾವಾರಣ ಸೃಷ್ಟಿಯಾಗಿತ್ತು. ಇನ್ನೂ ಕೆಲವರು ಹಾವನ್ನು ಕೊಲ್ಲಲು ಮುಂದಾದರು.

ಹಾವು ಬಂದಿರುವ ಸುದ್ದಿ ತಿಳಿದ ಪ್ರಸನ್ನಾನಂದ ಸ್ವಾಮೀಜಿ ಕೂಡಲೇ ಸ್ಥಳಕ್ಕೆ ಬಂದು ಹಾವಿನ ಹತ್ಯೆಗೆ ಮುಂದಾಗಿದ್ದ ಭಕ್ತರಿಗೆ ಜೀವ ಮೌಲ್ಯದ ಬಗ್ಗೆ ತಿಳಿಸಿದರು. ‘ದೇವರು ಪ್ರತಿಯೊಂದು ಜೀವಿಗೂ ಬದುಕಲು ಅವಕಾಶ ಕೊಟ್ಟಿದ್ದಾರೆ. ಅನಗತ್ಯವಾಗಿ ಯಾವ ಪ್ರಾಣಿಗೂ ಹಿಂಸೆ ಮಾಡಬಾರದು’ ಎಂದು ಅಲ್ಲಿದ್ದ ಭಕ್ತರಿಗೆ ಮಾರ್ಗದರ್ಶನ ಮಾಡಿದರು. ಕಟ್ಟಿಗೆಯೊಂದರ ಸಹಾಯದಿಂದ ಹಾವನ್ನು ಹಿಡಿದು, ಸುರಕ್ಷಿತ ಸ್ಥಳಕ್ಕೆ ಒಯ್ದು ಬಿಟ್ಟರು.

ಸ್ವಾಮೀಜಿ ಅವರ ಈ ಕಾರ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT