ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರಮಹಾಲಕ್ಷ್ಮೀ: ಖರೀದಿ ಜೋರು

ಜಿಲ್ಲೆಯ ವಿವಿಧೆಡೆ ಹಬ್ಬಕ್ಕೆ ಸಿದ್ಧತೆ ನಡೆಸಿದ ಸಾರ್ವಜನಿಕರು
Last Updated 5 ಆಗಸ್ಟ್ 2022, 3:44 IST
ಅಕ್ಷರ ಗಾತ್ರ

ದಾವಣಗೆರೆ:ವರಮಹಾಲಕ್ಷ್ಮೀ ಪೂಜೆಗೆ ನಗರ ಸೇರಿ ಜಿಲ್ಲೆಯಾದ್ಯಂತ ಗುರುವಾರ ಸಿದ್ಧತೆ ಜೋರಾಗಿತ್ತು. ರಾತ್ರಿ ಮಳೆ
ಸುರಿದ ಕಾರಣ ರಾತ್ರಿ 8 ಗಂಟೆಯ ಹೊತ್ತಿಗೆ ಮಾರುಕಟ್ಟೆ ಸ್ತಬ್ಧವಾಯಿತು.

ನಗರದ ಕೆ.ಆರ್‌. ಮಾರುಕಟ್ಟೆ, ಹಳೆ ಬಸ್‌ ನಿಲ್ದಾಣ, ಪಿ.ಬಿ. ರಸ್ತೆಯಲ್ಲಿ ಖರೀದಿ ಭರಾಟೆ ಇತ್ತು. ಹೂವು, ಹಣ್ಣು, ಬಾಳೆ ಕಂದು, ಪೂಜಾ ಸಾಮಗ್ರಿಗಳು, ಆಲಂಕಾರಿಕ ವಸ್ತುಗಳ ಖರೀದಿಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿರುವುದು ಕಂಡುಬಂತು.ಹೂವು, ಹಣ್ಣುಗಳ ಬೆಲೆ ಗಗನಕ್ಕೆ ಏರಿದ್ದರೂ ಖರೀದಿ ಜೋರಾಗಿ ನಡೆಯಿತು.

ಸೇವಂತಿ ಹೂವಿನ ಬೆಲೆ ₹ 100ರಿಂದ ₹ 180ರವರೆಗೂ ಇತ್ತು. ಸೇಬು ಕೆ.ಜಿ ಗೆ ₹ 120 ರಿಂದ 160, ದ್ರಾಕ್ಷಿ ₹ 200, ಸೀತಾಫಲ
₹ 120, ದಾಳಿಂಬೆ ಕೆ.ಜಿ ₹ 120ಕ್ಕೆ ಮಾರಾಟವಾಯಿತು. ಬಾಳೆಕಂದು ₹ 20ಕ್ಕೆ ಜೋಡಿಯಂತೆ ಖರೀದಿಸಿದರು.ದುಂಡು ಮಲ್ಲಿಗೆ ಹಾಗೂ ಕನಕಾಂಬರ, ರುದ್ರಾಕ್ಷಿ ಹೂವು, ಚಂಡು ಹೂವು, ಸೇವಂತಿಗೆ (ಹಳದಿ), ಸೇವಂತಿಗೆ ( ಕೆಂಪು) ಬಿಡಿ ಹೂವು ಸೇವಂತಿ ಹಾಗೂ ಗುಲಾಬಿ, ತುಳಸಿ ಹಾರಗಳಿಗೆ ಭಾರಿ ಬೇಡಿಕೆ ಇತ್ತು.

ಇದಲ್ಲದೇ ಲಕ್ಷ್ಮಿ ವಿಗ್ರಹ, ಮೂರ್ತಿ, ಮುಖವಾಡ, ಹಾರ, ತುರಾಯಿ, ಬಳೆ, ಅರಿಶಿಣ, ಮಾಂಗಲ್ಯಸರ, ಉತ್ತತ್ತಿ, ಕೊಬ್ಬರಿ ಸೇರಿ ಮುತ್ತೈದೆಯರಿಗೆ ಉಡಿ ತುಂಬುವ ವಸ್ತುಗಳನ್ನು ಮಹಿಳೆಯರುಖರೀದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT