ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಗಾಸೆ ಕಲಾವಿದರಿಗೆ ಅವಮಾನಿಸಿದ ದೃಶ್ಯಗಳಿಗೆ ಕತ್ತರಿ ಹಾಕಲು ಆಗ್ರಹ

Last Updated 29 ಅಕ್ಟೋಬರ್ 2022, 3:03 IST
ಅಕ್ಷರ ಗಾತ್ರ

ದಾವಣಗೆರೆ: ‘ಡಾಲಿ ಧನಂಜಯ್ ನಟನೆಯ ‘ಹೆಡ್‌ ಬುಷ್’ ಚಿತ್ರದಲ್ಲಿ ವೀರಗಾಸೆ ಕಲಾವಿದರು ಹಾಗೂ ಪುರವಂತರಿಗೆ ಅವಮಾನಿಸಿರುವ ದೃಶ್ಯಗಳಿಗೆ ಕತ್ತರಿ ಹಾಕಬೇಕು’ ಎಂದು ವಿವಿಧ ಸಮುದಾಯಗಳ ಮುಖಂಡರು ಆಗ್ರಹಿಸಿದರು.

‘ಚಿತ್ರದಲ್ಲಿ ವೀರಭದ್ರ ಸ್ವಾಮಿ ದೇವರ ಅನುಯಾಯಿಗಳಿಗೆ ಅವಮಾನ ಮಾಡುವ ಮೂಲಕ ಅವರ ಭಾವನೆಗಳಿಗೆ ಧಕ್ಕೆ ಆಗಿದೆ. ದೃಶ್ಯ ತೆಗೆಯುವವರೆಗೂ ಚಲನಚಿತ್ರ ಪ್ರದರ್ಶನ ತಡೆ ಹಿಡಿಯಬೇಕು’ ಎಂದುರಾಜ್ಯ ವೀರಶೈವ- ಲಿಂಗಾಯತ ಸಮನ್ವಯ ಸಮಿತಿಯ ಅಧ್ಯಕ್ಷ ಎಸ್.ವಿ. ಪಾಟೀಲ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಚಿತ್ರದಲ್ಲಿ ವೀರಗಾಸೆಯ ವೇಷ, ಭೂಷಣಗಳನ್ನು ಕಲಾವಿದರಿಗೆ ತೊಡಿಸಿ ವೀರಗಾಸೆಯವರ ಮೇಲೆ ಹಲ್ಲೆ ಮಾಡುವುದು, ಮೇಲಕ್ಕೆ ಎತ್ತಿ ಎಸೆಯುವುದು, ಹೊಡೆಯುವುದು ಮುಂತಾದ ರೀತಿಯಲ್ಲಿ ಚಿತ್ರೀಕರಣ ಮಾಡಿದ್ದು, ಆ ಮೂಲಕ ವೀರಗಾಸೆ, ಕಲೆ, ಪರಂಪರೆ ಹಾಗೂ ಸಂಸ್ಕೃತಿಗೆ ಅಪಚಾರ ಎಸಗಲಾಗಿದೆ. ಈ ರೀತಿ ಮಾಡಿರುವುದರಿಂದ ಸಮುದಾ
ಯವನ್ನು ಅವಮಾನಿಸಿದಂತೆ ಆಗಿದೆ. ಈ ರೀತಿ ಚಿತ್ರೀಕರಣ ಮಾಡಿರುವ ಚಿತ್ರದ ನಿರ್ಮಾಪಕರು, ನಿರ್ದೇಶಕರು ಹಾಗೂ ಕಥೆ-ಸಂಭಾಷಣೆ ಬರಹಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‌ಅಖಿಲ ಭಾರತ ವಿಶ್ವಕರ್ಮ ಪರಿಷತ್ತಿನ ಅಧ್ಯಕ್ಷ ಎಚ್.ಪಿ. ಸತೀಶ್ ಕುಮಾರ್, ಕರವೇ ಪ್ರವೀಣ್ ಶೆಟ್ಟಿ ಬಣದ ನಾಗರಾಜ್ ಜಮ್ಮಳ್ಳಿ, ಕಾಳಾಚಾರಿ, ರಾಜು ವೀರಣ್ಣನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT