ವೀರಶೈವವೇ ಮೂಲ, ಪ್ರಚಾರ ಮಾಡಿದವರು ಬಸವಣ್ಣ

7
ಇಷ್ಟಲಿಂಗ ಮಹಾಪೂಜೆ, ಜನಜಾಗೃತಿ ಧರ್ಮ ಸಮ್ಮೇಳನದಲ್ಲಿ ತಾವರೆಕೆರೆ ಸ್ವಾಮೀಜಿ

ವೀರಶೈವವೇ ಮೂಲ, ಪ್ರಚಾರ ಮಾಡಿದವರು ಬಸವಣ್ಣ

Published:
Updated:
Deccan Herald

ದಾವಣಗೆರೆ: ರೇಣುಕಾದಿ ಪಂಚಾಚಾರ್ಯರು ವೀರಶೈವದ ಮೂಲ ಸಂಸ್ಥಾಪಕರು. ಅದನ್ನು ಉದ್ದಾರ ಮಾಡಿದವರು, ಪ್ರಚಾರ ಮಾಡಿದವರು ಬಸವಣ್ಣಾದಿ ಶರಣರು ಎಂದು ತಾವರೆಕೆರೆ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಶ್ರೀ ಮದ್ವೀರಶೈವ ಸದ್ಬೋಧನಾ ಸಂಸ್ಥೆಯ ಜಿಲ್ಲಾ ಘಟಕದಿಂದ ರೇಣುಕ ಮಂದಿರದಲ್ಲಿ ನಡೆಯುತ್ತಿರುವ 23ನೇ ವರ್ಷದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಮತ್ತು ಜನಜಾಗೃತಿ ಧರ್ಮ ಸಮ್ಮೇಳನದ ಎರಡನೇ ದಿನವಾದ ಸೋಮವಾರ ಮಾತನಾಡಿದರು.

ವೀರಶೈವ ಧರ್ಮಕ್ಕೆ ದೊಡ್ಡಸ್ಥಾನ ತಂದುಕೊಟ್ಟವರು ಬಸವಣ್ಣ. ಸಂಸ್ಕಾರದ ಕೊರತೆಯಿಂದ ವೀರಶೈವ– ಲಿಂಗಾಯತ ಪ್ರತ್ಯೇಕ ಧರ್ಮ ಎಂಬ ವಿವಾದ ಹುಟ್ಟಿಕೊಂಡಿದೆ. ಸಂಸ್ಕೃತಿ, ಸಮಾಜ ಸರಿದಾರಿಯಲ್ಲಿರಬೇಕಿದ್ದರೆ ಅವು ಧರ್ಮದ ತಳಹದಿಯಲ್ಲಿರಬೇಕು ಎಂದು ತಿಳಿಸಿದರು.

ಒಬ್ಬರನ್ನು ದೊಡ್ಡವರನ್ನಾಗಿ ಮಾಡಲು ಇನ್ನೊಬ್ಬರನ್ನು ತುಳಿಯುವ ಕೆಲಸಗಳು ಆಗುತ್ತಿವೆ. ಹಾಗಾಗಿ ಎಷ್ಟೋ ವಚನಗಳು ಲುಪ್ತವಾಗಿವೆ. ಹಲವು ವಚನಗಳನ್ನು ಕಸದಬುಟ್ಟಿಗೆ ಹಾಕಲಾಗಿದೆ ಎಂದು ಆರೋಪಿಸಿದರು.

ಜೇಡರದಾಸಿಮಯ್ಯ ಅವರು ರೇವಣಸಿದ್ಧೇಶ್ವರರನ್ನು ಹೃದಯದಿಂದ ಸ್ಮರಿಸಿದ ವಚನ ಸಿಗುತ್ತದೆ. ಸೋಮೇಶ್ವರ ಅಂಕಿತದಲ್ಲಿ ಇರುವ ವಚನದಲ್ಲೂ ರೇವಣಸಿದ್ಧೇಶ್ವರರ ಬಗ್ಗೆ ಇದೆ. ‘ಅಣ್ಣ ಅಂದರೆ ಬಸವಣ್ಣ, ಜ್ಞಾನಿ ಅಂದರೆ ಚನ್ನಬಸವಣ್ಣ, ಅಪ್ಪ ಅಂದರೆ ರೇವಣಸಿದ್ಧೇಶ್ವರ’ ಎಂಬ ಸೊನ್ನಲಿಂಗ ಸಿದ್ಧರಾಮೇಶ್ವರರ ವಚನವು ಯಾರಿಗೆ ಯಾವ ಸ್ಥಾನ ನೀಡಿದೆ ಎಂಬುದನ್ನು ತಿಳಿಸುತ್ತದೆ. ತೋಂಟದ ಸಿದ್ದಲಿಂಗೇಶ್ವರರ ವಚನದಲ್ಲಿಯೂ ಇವೆಲ್ಲ ಇದೆ ಎಂದು ತಿಳಿಸಿದರು.

ವೀರಶೈವ ಸಂಸ್ಕೃತಿ ವಿಸ್ತಾರವಾದುದು. ಸ್ತ್ರೀಯರಿಗೆ ಸಮಾನ ಸ್ಥಾನಮಾನ ನೀಡಿದ ಮೊದಲ ಧರ್ಮ ಇದು. ವೀರಶೈವ– ಲಿಂಗಾಯತ ಒಂದೇ ಎಂಬುದು ಎಲ್ಲರಿಗೂ ಗೊತ್ತು. ಆದರೂ ಸುಳ್ಳು ಹೇಳುತ್ತಾರೆ. ವೀರಶೈವರೆಲ್ಲ ಒಗ್ಗಟ್ಟಾಗಬೇಕಾದ ಅವಶ್ಯಕತೆ ಇದೆ ಎಂದರು.

ಬಾಳೆಹೊನ್ನೂರು ರಂಭಾಪುರಿ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಯಡಿಯೂರು ರೇಣುಕ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಹಲವರಿಗೆ ಗುರುರಕ್ಷೆ ನೀಡಿ ಹರಸಲಾಯಿತು.

ಚಾರ್ಟೆಡ್‌ ಅಕೌಂಟೆಂಟ್‌ ಎ. ಕಿರಣಕುಮಾರ್‌ ಅವರಿಗೆ ಗೌರವ ‘ಶ್ರೀರಕ್ಷೆ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಉಪನ್ಯಾಸಕಿ ಸೌಮ್ಯಾ ಬಸವರಾಜ್‌, ಮೇಯರ್‌ ಶೋಭಾ ಪಲ್ಲಾಗಟ್ಟೆ, ಎಚ್‌.ಸಿ. ಗುಡ್ಡಪ್ಪ ಅವರೂ ಇದ್ದರು. ಆರಾಧ್ಯಮಠ ಡಿ.ವಿ. ಸ್ವಾಗತಿಸಿದರು. ಕರೇಶಿವಪ್ಪ ಸಿದ್ದೇಶ್‌ ವಂದಿಸಿದರು. ಉಪನ್ಯಾಸಕ ಎನ್‌. ಮಲ್ಲಯ್ಯ ಕಾರ್ಯಕ್ರಮ ನಿರೂಪಣೆ ಮಾಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !