ಮಂಗಳವಾರ, ನವೆಂಬರ್ 12, 2019
19 °C
ವಿಡಿಯೊ ಸುದ್ದಿ

ದಾವಣಗೆರೆ| ನಾಯಿಗಳೊಂದಿಗೆ ನಾಗರಹಾವಿನ ಕಾದಾಟ: ವಿಡಿಯೊ ವೈರಲ್

Published:
Updated:

ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ಮಲೆಕುಂಬಳೂರು ಗ್ರಾಮದಲ್ಲಿ ನಾಗರಹಾವೊಂದು ಮೂರು ನಾಯಿಗಳ ವಿರುದ್ಧ ಸೆಣಸಾಡಿರುವ ವಿಡಿಯೊ ವೈರಲ್ ಆಗಿದೆ.

ಭತ್ತ ಕಟಾವು ಮಾಡಿದ ಗದ್ದೆಯಲ್ಲಿ ಹೆಡೆ ಎತ್ತಿದ ನಾಗರಹಾವು ನಾಯಿಗಳೊಡನೆ ಒಂದು ಗಂಟೆಗೂ ಹೆಚ್ಚು ಕಾಲ ಕಾಳಗ ನಡೆಸಿದೆ. ಶ್ವಾನಗಳನ್ನು ಎದುರಿಸಲು ನಾಗರಹಾವಿಗೆ ಸಾಧ್ಯವಾಗದೇ ಸೋಲನ್ನಪ್ಪಿತು. ಈ ನಾಗರಹಾವು ಎರಡು ವರ್ಷಗಳಿಂದ ರೈತರನ್ನು ಭಯಭೀತಗೊಳಿಸಿತ್ತು ಎಂದು ಗ್ರಾಮಸ್ಥರು ಹೇಳುತ್ತಾರೆ.

ಪ್ರತಿಕ್ರಿಯಿಸಿ (+)