ಸ್ಟ್ರಾಂಗ್‌ರೂಂ ಸೇರಿದ ಮತಯಂತ್ರಗಳು

ಸೋಮವಾರ, ಮೇ 27, 2019
33 °C
ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬಿಗಿ ಭದ್ರತೆ

ಸ್ಟ್ರಾಂಗ್‌ರೂಂ ಸೇರಿದ ಮತಯಂತ್ರಗಳು

Published:
Updated:
Prajavani

ದಾವಣಗೆರೆ: ಲೋಕಸಭಾ ಚುನಾವಣೆ ಮುಗಿದಿದ್ದು, ಮತಯಂತ್ರಗಳು ಬುಧವಾರ ದಾವಣಗೆರೆ ವಿಶ್ವವಿದ್ಯಾಲಯದ ಸ್ಟ್ರಾಂಗ್‌ರೂಂಗಳನ್ನು ಸೇರಿವೆ. ಕೇಂದ್ರ ಭದ್ರತಾ ಪಡೆಗಳು ಹಾಗೂ ಜಿಲ್ಲೆಯ ಪೊಲೀಸರು ಭದ್ರತೆ ಒದಗಿಸಿದ್ದಾರೆ.

ಒಟ್ಟು 1949 ಮತಗಟ್ಟೆಗಳಲ್ಲಿ ಜನ ಮತ ಚಲಾಯಿಸಿದ್ದರು. ಅವುಗಳನ್ನು ಮಂಗಳವಾರ ರಾತ್ರಿ ವಿಧಾನಸಭಾ ಕ್ಷೇತ್ರವಾರು ಡಿಮಸ್ಟರಿಂಗ್‌ ಮಾಡಲಾಗಿತ್ತು. ರಾತ್ರಿ ಎಲ್ಲ ದಾಖಲೀಕರಣಗಳು ಮುಗಿದ ಬಳಿಕ 8 ಡಿಮಸ್ಟರಿಂಗ್‌ ಕೇಂದ್ರಗಳಿಂದ ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಬಿಗಿ ಭದ್ರತೆಯಲ್ಲಿ ಸಾಗಿಸಲಾಯಿತು.

ವಿಶ್ವವಿದ್ಯಾಲಯದ 8 ಸ್ಟ್ರಾಂಗ್‌ರೂಂಗಳಲ್ಲಿ ವಿಧಾನಸಭಾ ಕ್ಷೇತ್ರವಾರು ಇಡಲಾಯಿತು. ಬಳಿಕ ಜಿಲ್ಲಾಧಿಕಾರಿ ಶಿವಮೂರ್ತಿ, ಎಸ್‌ಪಿ ಆರ್‌. ಚೇತನ್‌, ಚುನಾವಣಾ ವೀಕ್ಷಕರು, ಅಭ್ಯರ್ಥಿಗಳು ಅಥವಾ ಅಭ್ಯರ್ಥಿಗಳ ಏಜೆಂಟ್‌ಗಳ ಸಮಕ್ಷಮದಲ್ಲಿ ಎಲ್ಲ ಕೊಠಡಿಗಳಿಗೆ ಬೀಗ ಹಾಕಿ ಸೀಲ್‌ ಮಾಡಲಾಯಿತು. ಬಳಿಕ ಬಾಗಿಲು, ಬೀಗಗಳು ಕಾಣದಂತೆ ಹಲಗೆ ಹೊಡೆಯಲಾಯಿತು.

ಪ್ರತಿ ಕೊಠಡಿಗಳನ್ನು ಕಾಯುವ ಕೇಂದ್ರ ಭದ್ರತಾ ಪಡೆ ಮತ್ತು ಪೊಲೀಸರ ಸಹಿಗಳನ್ನು ಪಡೆಯಲಾಯಿತು. ಇದಲ್ಲದೇ ಈ ವಠಾರದ ಒಳಗೆ ಯಾರೂ ಬಾರದಂತೆ ತಡೆಗಳನ್ನು ನಿರ್ಮಿಸಿ ಕಾವಲು ಪೊಲೀಸರನ್ನು ನಿಯೋಜಿಸಲಾಯಿತು. ಡಿವೈಎಸ್‌ಪಿ ಹಂತದ ಪೊಲೀಸ್‌ ಅಧಿಕಾರಿಗಳು ಬಂದೋಬಸ್ತ್‌ನ ನೇತೃತ್ವ ವಹಿಸಿದ್ದಾರೆ.

ಸುಮಾರು ಒಂದು ತಿಂಗಳ ಕಾಲ ಅಂದರೆ ಮೇ 23ರ ವರೆಗೆ ಈ ಮತಯಂತ್ರಗಳನ್ನು ಕಾಯಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !