ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಲಮೂಲ ರಕ್ಷಣೆ ಎಲ್ಲರ ಕರ್ತವ್ಯ’

ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ
Last Updated 21 ಡಿಸೆಂಬರ್ 2020, 3:42 IST
ಅಕ್ಷರ ಗಾತ್ರ

ಹರಿಹರ: ‘ನದಿ, ಬೆಟ್ಟಗುಡ್ಡಗಳು ಹಾಗೂ ಪ್ರಕೃತಿ ನಮ್ಮ ಜೀವನಾಡಿ. ಇವುಗಳ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಈ ನಿಟ್ಟಿನಲ್ಲಿ ನನ್ನ ಊರು, ನನ್ನ ಹೊಣೆ ಅಭಿಯಾನ ನಡೆಸುತ್ತಿರುವುದು ಶ್ಲಾಘನೀಯ’ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ ಹೇಳಿದರು.

ನಗರದ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಭಾನುವಾರ ‘ನನ್ನ ಊರು, ನನ್ನ ಹೊಣೆ’ ಬಳಗದಿಂದ ‘ಸ್ವಚ್ಛ ಹಾಗೂ ಸಂಭ್ರಮದ ಸಂಕ್ರಾತಿ' ಪರಿಕಲ್ಪನೆಯಲ್ಲಿ ಸ್ವಯಂ ಪ್ರೇರಿತರಾಗಿ ನಡೆದ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಕೃತಿ ಸಹಜವಾಗಿ ಜೀವ ಸಂಕುಲವನ್ನು ರಕ್ಷಿಸುತ್ತಿದೆ. ಆದರೆ, ಮಾನವನ ದುರಾಸೆ ಹಾಗೂ ಸಾಮಾಜಿಕ ಬೇಜವಾಬ್ದಾರಿ ವರ್ತನೆ ಪ್ರಕೃತಿಯ ಸಮತೋಲನವನ್ನು ಹದಗೆಡಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಗರದ ಪ್ರಮುಖ ವೀಕ್ಷಣಾ ಸ್ಥಳದಲ್ಲಿ ನದಿಯ ದುಃಸ್ಥಿತಿ ಆತಂಕ ಮೂಡಿಸಿದೆ. ಈ ಸ್ಥಳವನ್ನು ಶುಚಿಗೊಳಿಸುವ ಜತೆಗೆ ಭವಿಷ್ಯದಲ್ಲಿ ತಾಲ್ಲೂಕಿನ ಎಲ್ಲಾ ಶ‍್ರೀ ಮಠಗಳ ಸಹಕಾರದಿಂದ ಈ ಸ್ಥಳದಲ್ಲಿ ಗಂಗಾರತಿ ಮಾದರಿಯಲ್ಲಿ ‘ತುಂಗಾರತಿ’ ಕಾರ್ಯಕ್ರಮವನ್ನು ಆಯೋಜಿ
ಸಲು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಯೋಜನೆ ರೂಪಿಸಲಾಗುವುದು ಎಂದರು.

ಜನಪ್ರತಿನಿಧಿಗಳು, ಕ್ರೀಡಾ ಸಂಸ್ಥೆ, ಸಂಘ-ಸಂಸ್ಥೆಯ ಪದಾಧಿಕಾರಿಗಳು, ಮಹಿಳೆಯರು, ಯುವಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT