ಜಲಾವೃತಗೊಂಡ ಸಾರಥಿ–ಚಿಕ್ಕಬಿದರಿ ಸೇತುವೆ

7
ಅಪಾಯದ ಮಟ್ಟ ತಲುಪುತ್ತಿರುವ ತುಂಗಭದ್ರಾ ನದಿ, ಗ್ರಾಮಸ್ಥರ ಸಂಚಾರಕ್ಕೆ ತೊಂದರೆ

ಜಲಾವೃತಗೊಂಡ ಸಾರಥಿ–ಚಿಕ್ಕಬಿದರಿ ಸೇತುವೆ

Published:
Updated:
Deccan Herald

ಹರಿಹರ: ಮಧ್ಯ ಕರ್ನಾಟಕದ ಜೀವನಾಡಿ ತುಂಗಭದ್ರಾ ನದಿ ತನ್ನ ಹರಿವು ಹೆಚ್ಚಿಸಿಕೊಂಡು ಅಪಾಯದ ಮಟ್ಟ ತಲುಪಿದೆ. ತಾಲ್ಲೂಕಿನ ಸಾರಥಿ ಹಾಗೂ ಚಿಕ್ಕಬಿದರಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ನೀರಿನಲ್ಲಿ ಮುಳುಗಡೆಯಾಗಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.

ಭದ್ರಾ ಹಾಗೂ ತುಂಗಾ ಜಲಾಶಯಗಳು ಭರ್ತಿಯಾಗಿದ್ದು, ನಿರಂತರವಾಗಿ ಜಲಾಶಯಗಳಿಂದ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದೆ.

ನದಿಯ ನೀರಿನ ಹೆಚ್ಚಳದಿಂದ ತಾಲ್ಲೂಕಿನ ಸಾರಥಿ ಹಾಗೂ ಚಿಕ್ಕಬಿದರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ನೀರಿನಲ್ಲಿ ಮುಳುಗಡೆಯಾಗಿದೆ. ಚಿಕ್ಕಬಿದರಿ ಗ್ರಾಮ ದ್ವೀಪವಾಗಿ ಮಾರ್ಪಟ್ಟು ತಾಲ್ಲೂಕಿನಿಂದ ಸಂಪರ್ಕ ಕಡಿದುಕೊಂಡಿದೆ. ನಗರದ ಶಾಲಾ –ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ತೊಂದರೆಯಾಗಿದೆ.

ಕುಡಿಯುವ ನೀರಿನಲ್ಲಿ ಮಣ್ಣಿನ ಪ್ರಮಾಣ ಹೆಚ್ಚಾಗಿದ್ದು, ಶುದ್ಧೀಕರಣಗೊಂಡರೂ ಮುಂಜಾಗೃತ ಕ್ರಮವಾಗಿ ನೀರನ್ನು ಕುದಿಸಿ, ಆರಿಸಿ ಕುಡಿಯಬೇಕು ಎಂದು ಪೌರಾಯುಕ್ತೆ ಎಸ್‍. ಲಕ್ಷ್ಮೀ ತಿಳಿಸಿದ್ದಾರೆ.

ನದಿಯ ನೀರಿನ ಪ್ರಮಾಣ ಅಳೆಯುವ ಮಾಪಕ ಹೊನ್ನಾಳಿಯಲ್ಲಿದೆ. ಹೊನ್ನಾಳಿಯಲ್ಲಿ ನೀರಿನ ಮಟ್ಟ 9.87 ಮೀ. ಇದೆ. ಅಪಾಯದ ಮಟ್ಟ 10.5 ಮೀ ಎಂದು ಗುರುತಿಸಲಾಗಿದೆ. ನೀರಿನ ಹರಿವು ಹೆಚ್ಚಿರುವ ಕಾರಣ ಮುಂಜಾಗೃತ ಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ತಹಶೀಲ್ದಾರ್‍ ರೆಹಾನ್‍ಪಾಷ ತಿಳಿಸಿದರು.

ನದಿಪಾತ್ರದಲ್ಲಿ ಜಾನುವಾರುಗಳನ್ನು ಮೇಯಿಸಲು ಬಿಡಬಾರದು. ತಗ್ಗು ಪ್ರದೇಶದಲ್ಲಿರುವವರು ಎತ್ತರದ ಪ್ರದೇಶಕ್ಕೆ ತೆರಳಬೇಕು ಎಂದು ಸೂಚನೆ ನೀಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !