ತಾವರೆಕೆರೆ (ಚನ್ನಗಿರಿ): ತಾಲ್ಲೂಕಿನ ಉಬ್ರಾಣಿ ಹೋಬಳಿ ಅರಣ್ಯ ಪ್ರದೇಶದಲ್ಲಿ ಕೆರೆ, ಹೊಂಡ ಜಲಮೂಲಗಳು ಬತ್ತುತ್ತಿವೆ. ಜೊತೆಗೆ ಮೇವಿನ ಕೊರತೆ ಹೆಚ್ಚಾಗಿದ್ದು ಕಾಡುಪ್ರಾಣಿಗಳು ಆಹಾರ, ನೀರು ಅರಿಸಿ ನಾಡಿನತ್ತ ನುಗ್ಗುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.

ಬುಧವಾರ ಕಾಡಿನಿಂದ ಹೊರಬಂದ ಗಂಡಾನೆಯೊಂದು ಉಬ್ರಾಣಿ – ಭದ್ರಾವತಿ ಮಾರ್ಗದ ಉಬ್ರಾಣಿ ಚೆಕ್ಪೋಸ್ಟ್ನಿಂದ ಸುಮಾರು 200 ಮೀಟರ್ ದೂರದಲ್ಲಿರುವ ರಸ್ತೆ ಪಕ್ಕದ ಚಿಕ್ಕ ಹೊಂಡಕ್ಕೆ ಇಳಿದು ದಾಹ ತೀರಿಸಿಕೊಂಡು ಕೆಸರನ್ನು ದೇಹಕ್ಕೆ ಎರಚಿಕೊಳ್ಳುತ್ತಿದ್ದ ದೃಶ್ಯವನ್ನು ವಾಹನಗಳ ಸವಾರರು ತಮ್ಮ ಮೊಬೈಲ್ ಫೋನ್ಗಳಲ್ಲಿ ಸೆರೆ ಹಿಡಿದಿದ್ದರು. ಆ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಜಿಂಕೆಗಳು ಹಾಗೂ ಇತರ ವನ್ಯಜೀವಿಗಳು ರಸ್ತೆ ಹಾಗೂ ಗ್ರಾಮಗಳ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದವು. ಈಗ ಹಗಲು ಹೊತ್ತಿನಲ್ಲಿಯೇ ದೊಡ್ಡ ಆನೆ ಕಾಣಿಸಿಕೊಂಡಿದ್ದು, ವಾಹನ ಸವಾರರು ಹಾಗೂ ಗ್ರಾಮಸ್ಥರು ಕೆಲಕಾಲ ಎಚ್ಚರಿಕೆಯಿಂದ ಸಂಚರಿಸಿದರು. ಕಾಡಾನೆ ಯಾವುದೇ ಹಾನಿ ಮಾಡಿಲ್ಲವಾದರೂ ಜನರಲ್ಲಿ ಗಾಬರಿ ಹೆಚ್ಚಿಸಿದೆ.

‘ಅರಣ್ಯ ಇಲಾಖೆಯವರು ಕಾಡಿನೊಳಗೆ ಶಾಶ್ವತ ನೀರಿನ ಮೂಲಗಳನ್ನು ಅಭಿವೃದ್ಧಿಪಡಿಸಿ, ಕುಡಿಯುವ ನೀರು ಹಾಗೂ ಮೇವುಗಳ ಸಮರ್ಪಕ ವ್ಯವಸ್ಥೆ ಮಾಡಬೇಕು. ಬೇಸಿಗೆ ಅವಧಿಯಲ್ಲಿ ತಾತ್ಕಾಲಿಕ ನೀರಿನ ಟ್ಯಾಂಕ್, ಕೃತಕ ಕೆರೆ ಹಾಗೂ ಮೇವು ಕೇಂದ್ರಗಳನ್ನು ನಿರ್ಮಿಸಿ, ಗ್ರಾಮಗಳತ್ತ ನುಗ್ಗುವುದನ್ನು ತಪ್ಪಿಸಿ ಆತಂಕ ನಿವಾರಿಸಬೇಕು’ ಎಂದು ಉಬ್ರಾಣಿ ಗ್ರಾಮಸ್ಥರ ಒಕ್ಕೊರಲಿನ ಒತ್ತಾಯವಾಗಿದೆ.

‘ಅರಣ್ಯ ಇಲಾಖೆಯಿಂದ ಉಬ್ರಾಣಿ ಅರಣ್ಯ ಪ್ರದೇಶದಲ್ಲಿ ಎಂಟು ಸಣ್ಣ ಸಣ್ಣ ಕೆರೆಗಳನ್ನು ನಿರ್ಮಿಸಲಾಗಿದೆ. ಆದರೆ, ಬಿರು ಬೇಸಿಗೆಯಿಂದಾಗಿ ನೀರಿನ ಸಂಗ್ರಹ ತುಂಬಾ ಕಡಿಮೆಯಾಗಿದೆ. ಹಾಗಾಗಿ ಕಾಡಾನೆಗಳು ನೀರನ್ನು ಹುಡುಕಿಕೊಂಡು ಬರುತ್ತಿವೆ. ಮಳೆಗಾಲ ಆರಂಭವಾದರೆ ಸಮಸ್ಯೆ ಬಗೆಹರಿಯಲಿದೆ. ಆದರೂ ಕಾಡಾನೆ ಗ್ರಾಮದೊಳಗೆ ಬರದಂತೆ ಇಲಾಖೆಯ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದಾರೆ’ ಎಂದು ವಲಯ ಅರಣ್ಯಾಧಿಕಾರಿ ರಾಘವೇಂದ್ರ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-43-2048812247

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.