ಮಂಗಳವಾರ, ಆಗಸ್ಟ್ 16, 2022
21 °C

ರಥ ಎಳೆದು ಭಕ್ತಿ ಸಮರ್ಪಿಸಿದ ಮಹಿಳೆಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನಗರದ ಹೊರವಲಯದ ಯರಗುಂಟೆ ಗ್ರಾಮದಲ್ಲಿ ಭಾನುವಾರ ಮಹಿಳೆಯರು ಗುರು ಕರಿಬಸವೇಶ್ವರ ಸ್ವಾಮಿ ರಥವನ್ನು ಎಳೆದು ಗಮನ ಸೆಳೆದರು.

ಗುರು ಕರಿಬಸವೇಶ್ವರ ಸ್ವಾಮಿ ಗದ್ದುಗೆ ಮಠ ಆಯೋಜಿಸಿದ್ದ ರಥೋತ್ಸವದಲ್ಲಿ ಬಿಸಿಲನ್ನು ಲೆಕ್ಕಿಸದೆ ಮಹಿಳೆಯರು ಹಾಗೂ ಯುವತಿಯರು ಹೂವಿನಿಂದ ಅಲಂಕೃತವಾದ ರಥಕ್ಕೆ ಕಟ್ಟಿದ್ದ ಹಗ್ಗ ಎಳೆದು ಭಕ್ತಿ ಸಮರ್ಪಿಸಿದರು.

ಕಲಾ ತಂಡಗಳು ಮೆರುಗು ನೀಡಿದರೆ, ದೇವರ ಪಟ, ತೆಂಗಿನಕಾಯಿ ಹರಾಜು ಪ್ರಕ್ರಿಯೆ ನಡೆಯಿತು. ನೂರಾರು ಭಕ್ತರು ರಥೋತ್ಸವ ಕಣ್ತುಂಬಿಕೊಂಡರು.

ಬೆಳಿಗ್ಗೆ ನಡೆದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿದ್ದ ಕರಿಬಸವೇಶ್ವರ ಸ್ವಾಮಿ ಗದ್ದುಗೆ ಮಠದ ಪರಮೇಶ್ವರ ಸ್ವಾಮೀಜಿ, ‘ಸ್ತ್ರೀಯರಲ್ಲಿ ಕಂಡುಬರುವ ಶಾಂತಚಿತ್ತತೆ, ಸಮಾಧಾನ ಪುರುಷರಲ್ಲಿ ಇರುವುದಿಲ್ಲ. ಹೆಣ್ಣುಮಕ್ಕಳನ್ನು ಗೌರವಿಸಬೇಕು. ಅವರಿಗೆ ಹಕ್ಕುಗಳನ್ನು ನೀಡಬೇಕು. ಹೆತ್ತಮ್ಮನ ಋಣವನ್ನು ಪ್ರತಿಯೊಬ್ಬರೂ ತೀರಿಸಬೇಕು’ ಎಂದರು.

3 ವರ್ಷಗಳಿಂದ ಮುಸ್ಲಿಮರು ರಥೋತ್ಸವದ ಪ್ರಸಾದ ವ್ಯವಸ್ಥೆ ಮಾಡುತ್ತಿದ್ದಾರೆ. ಜಾತಿ, ಮತ, ಭೇದವಿಲ್ಲದ ಮಠವಾಗಿದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಅರಕೆರೆಯ ಕರಿಸಿದ್ದೇಶ್ವರ ಸ್ವಾಮೀಜಿ, ‘ಕರಿಬಸವೇಶ್ವರ ಸ್ವಾಮಿ ಗದ್ದುಗೆ ಮಠ ಹಿಂದು-ಮುಸ್ಲಿಮರ ಭಾವೈಕ್ಯಕ್ಕೆ ಸಾಕ್ಷಿಯಾಗಿದೆ’ ಎಂದು ಹೇಳಿದರು.

ಪ್ರವಚನಕಾರ ಮಹಾಂತೇಶ ಶಾಸ್ತ್ರಿ, ವೀರೇಶ ಶಾಸ್ತ್ರಿ, ವಾಗೀಶ ಶಾಸ್ತ್ರಿ, ಚನ್ನಬಸವಯ್ಯ ಶಾಸ್ತ್ರಿ, ಪಾಲಿಕೆ ಸದಸ್ಯೆ ಎಚ್.ಸಿ.ಜಯಮ್ಮ, ಗಂಗಾವತಿಯ ಹಜರತ್ ಸೈಯದ್ ಖಾದರ್ ಷಾ ಖಾದ್ರಿ, ಬಯಲಾಟ ಅಕಾಡೆಮಿ ಸದಸ್ಯ ಎನ್.ಎಸ್.ರಾಜು, ಪ್ರಾಚಾರ್ಯ ಸಿದ್ದಪ್ಪ, ಎನ್.ಪಿ. ರಾಕೇಶ, ಎ.ಸಿ.ಕರಿಬಸಪ್ಪ, ಮಂಜುನಾಥ, ಬಸವರಾಜ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.