ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ನಿಲ್ದಾಣದಲ್ಲಿ ₹ 4.40 ಲಕ್ಷ ಕಿತ್ತುಕೊಂಡ ದುಷ್ಕರ್ಮಿಗಳು

Last Updated 23 ಅಕ್ಟೋಬರ್ 2018, 17:21 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಕೆ.ಎಸ್‌.ಆರ್‌.ಟಿ.ಸಿ ಬಸ್‌ನಿಲ್ದಾಣದಲ್ಲಿ ಸಹ ಶಿಕ್ಷಕರೊಬ್ಬರ ಬಳಿಯಿದ್ದ ₹ 4.40 ಲಕ್ಷ ನಗದನ್ನು ದುಷ್ಕರ್ಮಿಗಳು ಮಂಗಳವಾರ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಗಣೇಶ ಬಡಾವಣೆಯ ಇಮ್ತಿಯಾಜ್‌ ಅಬ್ದುಲ್‌ ಘನಿ ಹಣ ಕಳೆದುಕೊಂಡವರು. ಹರಿಹರದ ಡಿಆರ್‌ಎಂ ಶಾಲೆಯ ಸಹಶಿಕ್ಷಕರಾಗಿದ್ದ ಇಮ್ತಿಯಾಜ್‌ ಅವರು, ಹೊನ್ನಾಳಿಯ ಎಸ್‌ಬಿಐನಿಂದ ₹ 2.40 ಲಕ್ಷವನ್ನು ನಗದೀಕರಿಸಿಕೊಂಡಿದ್ದರು. ನಿವೇಶನ ಮಾರಾಟ ಮಾಡುವ ಸಂಬಂಧ ವ್ಯಕ್ತಿಯೊಬ್ಬರಿಂದ ₹ 2 ಲಕ್ಷ ಪಡೆದು ಬಸ್‌ನಲ್ಲಿ ದಾವಣಗೆರೆ ಕೆ.ಎಸ್‌.ಆರ್‌.ಟಿ.ಸಿ ಬಸ್‌ನಿಲ್ದಾಣಕ್ಕೆ ಬಂದು ಇಳಿದಿದ್ದರು. ಗಣೇಶ ಬಡಾವಣೆಗೆ ಹೋಗಲು ನಿಲ್ದಾಣದ ಹಿಂಭಾಗದಲ್ಲಿರುವ ಗೇಟ್‌ನತ್ತ ಹೋಗುತ್ತಿದ್ದರು. ಆಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಇಮ್ತಿಯಾಜ್‌ ಬಳಿ ಇದ್ದ ಕ್ಯಾಶ್‌ಬ್ಯಾಗ್‌ ಕಿತ್ತುಕೊಂಡು ಹೋಗಿದ್ದಾರೆ.

ಇಮ್ತಿಯಾಜ್‌ ಅವರ ಪತ್ನಿಯೂ ಶಿಕ್ಷಕಿಯಾಗಿದ್ದು, ಸಾಲ ಪಡೆದ ಹಣವನ್ನು ಬ್ಯಾಂಕಿನಿಂದ ಬಿಡಿಸಿಕೊಂಡು ಬಂದಿದ್ದರು ಎನ್ನಲಾಗಿದೆ.

ಕೆ.ಟಿ.ಜೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT