ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಜಿಲ್ಲೆಗಳಲ್ಲೂ ಪಿಂಚಣಿದಾರರ ಅದಾಲತ್

ಜುಲೈನಿಂದ ಆರಂಭ; ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಮಾಹಿತಿ
Last Updated 14 ಜೂನ್ 2019, 13:35 IST
ಅಕ್ಷರ ಗಾತ್ರ

ಶಿವಮೊಗ್ಗ: ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ ಜಲೈನಲ್ಲಿವಿವಿಧ ಯೋಜನೆಗಳ ಪಿಂಚಣಿದಾರರ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದುಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಸಾರ್ವಜನಿಕರ ಅಹವಾಲು ಸ್ವಿಕಾರ, ಪ್ರಗತಿ ಪರಿಶೀಲನಾ ಸಭೆಯನಂತರ ಪತ್ರಿಕಾಗೋಷ್ಠಿಯಲ್ಲಿಅವರು ಮಾತನಾಡಿದರು.

ತಾಂತ್ರಿಕ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ಕೆಲವು ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ ದೊರಕದಿರಬಹುದು. ಜಿಲ್ಲಾವಾರು ನಡೆಯುವ ಅದಾಲತ್‌ನಲ್ಲಿ ಅವರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಒಸಲಾಗುವುದು. ರಾಜ್ಯಮಟ್ಟದ, ಜಿಲ್ಲಾಮಟ್ಟದ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು, ಪರಿಹಾರ ಒದಗಿಸುವರು ಎಂದು ವಿವರ ನೀಡಿದರು.

ಜಿಲ್ಲೆಯಲ್ಲಿ 2,19,631 ಫಲಾನುಭವಿಗಳು ವಿವಿಧ ಯೋಜನೆಗಳ ಅಡಿ ಪಿಂಚಣಿ ಸೌಲಭ್ಯ ಪಡೆಯುತ್ತಿದ್ದಾರೆ. ಮಂಜೂರಾತಿಗೆ 300 ಅರ್ಜಿಗಳು ಬಾಕಿ ಇವೆ. ಕೆ2 ತಾಂತ್ರಿಕ ಸಮಸ್ಯೆಯಿಂದಾಗಿ 1,483 ಜನರಿಗೆ ಪಿಂಚಣಿ ನೀಡಲು ಸಾಧ್ಯವಾಗಿಲ್ಲ. ಪಿಂಚಣಿಯನ್ನೇ ಅವಲಂಬಿಸಿರುವ ಇಂತಹ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲು ತಕ್ಷಣ ತಾಂತ್ರಿಕ ಸಮಸ್ಯೆ ಬಗೆಹರಿಸಬೇಕು ಎಂದು ಸೂಚಿಸಿದರು.

ಅಂತ್ಯಸಂಸ್ಕಾರ ಯೋಜನೆಗೆ ಅನುದಾನ ಕೊರತೆ ಇದೆ. ಹಾಗಾಗಿ, ಸಕಾಲದಲ್ಲಿ ಸೌಲಭ್ಯ ಒದಗಿಸಲು ಸಾಧ್ಯವಾಗಿಲ್ಲ. 4,591 ಅರ್ಜಿಗಳು ಬಾಕಿ ಇವೆ. ತುರ್ತು ವಿಲೇವಾರಿ ಮಾಡಬೇಕು. ಸಕಾಲ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆ ನಿರಂತರವಾಗಿ ಪ್ರಥಮ ಸ್ಥಾನ ಉಳಿಸಿಕೊಂಡು ಬಂದಿದೆ. ನಿಗದಿತ ವೇಳೆಯಲ್ಲಿ ಸರ್ಕಾರಿ ಸೇವೆ ಒದಗಿಸಲಾಗುತ್ತಿರುವುದಕ್ಕೆ ಇದು ಸಾಕ್ಷಿ ಎಂದರು.

ಜಿಲ್ಲೆಯಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯಡಿ 73,960 ಫಲಾನುಭವಿಗಳಿಗೆ, ವೃದ್ಧಾಪ್ಯ ವೇತನ ಯೋಜನೆಯಲ್ಲಿ 20,864, ಅಂಗವಿಕಲ ಯೋಜನೆಯಲ್ಲಿ 28,333, ವಿಧವಾ ವೇತನ ಯೋಜನೆಯಲ್ಲಿ 51,794, ಮನಸ್ವಿನಿ ಯೋಜನೆಯಡಿ 3,504, ಮೈತ್ರಿ ಯೋಜನೆಯಲ್ಲಿ 22, ರಾಷ್ಟಿಯ ಕುಟುಂಬ ನೆರವು ಯೋಜನೆಯಲ್ಲಿ 10,744, ಅಂತ್ಯಸಂಸ್ಕಾರ ಯೋಜನೆಯಲ್ಲಿ 30,259, ಆದರ್ಶ ವಿವಾಹ ಯೋಜನೆಯಲ್ಲಿ 314 ಫಲಾನುಭವಿಗಳಿಗೆ ನೆರವು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ವಿವರ ನೀಡಿದರು.

ಕಂದಾಯ ಅದಾಲತ್: ಜಿಲ್ಲೆಯಲ್ಲಿ 442 ಕಂದಾಯ ಅದಾಲತ್‌ ನಡೆಸಲಾಗಿದೆ. 54,910 ಅರ್ಜಿಗಳಲ್ಲಿ 54,818 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಕಂದಾಯ ಅದಾಲತ್‌ಗಳನ್ನು ನಿರಂತರವಾಗಿ ಆಯೋಜಿಸಲು ಸೂಚಿಸಲಾಗಿದೆ ಎಂದರು.

ರೈತರ ಸಾಲಮನ್ನಾ:

ವಾಣಿಜ್ಯ ಬ್ಯಾಂಕುಗಳಲ್ಲಿ ಜಿಲ್ಲೆಯ 55,171 ರೈತರು ₨ 943.49ಕೋಟಿ ಸಾಲ ಪಡೆದಿದ್ದಾರೆ. ₨ 130.31ಕೋಟಿ ಸಾಲಮನ್ನಾ ಮಾಡಲಾಗಿದೆ. ₨ 812.83 ಕೋಟಿ ಬಾಕಿ ಇದೆ. ಸಹಕಾರ ವಲಯದಲ್ಲಿ 33,947 ರೈತರ ₨ 139.39ಕೋಟಿ ಮೊತ್ತದಲ್ಲಿ ₨ 77.56 ಕೋಟಿ ನೀಡಲಾಗಿದೆ. ₨ 61.83 ಕೋಟಿ ಬಾಕಿಯಿದೆ ಎಂದು ಮಾಹಿತಿ ನೀಡಿದರು.

ಬಗರ್‌ಹುಕುಂ ಭೂಮಿ ಮಂಜೂರು:

ಬಗರ್‌ಹುಕುಂ ಸಾಗುವಳಿ ಮಾಡಿದ ರೈತರಿಗೆ 78 ಸಾವಿರ ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಅರಣ್ಯ ಭೂಮಿ ಸಮಸ್ಯೆಯಿಂದಾಗಿ 942 ಗ್ರಾಮಗಳಲ್ಲಿ ಸ್ಮಶಾನ ಭೂಮಿ ಇಲ್ಲ. ಸಮಸ್ಯೆ ಬಗೆಹರಿಸಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಜಾರಿಯಲ್ಲಿರುವ ಪ್ರಾಪರ್ಟಿ ಕಾರ್ಡ್ ಹಲವು ಸಮಸ್ಯೆಗೆ ಕಾರಣವಾಗಿದೆ. ಹಾಗಾಗಿ, ಯೋಜನೆ ರದ್ದು ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಅನುರಾಧ, ಉಪ ವಿಭಾಗಾಧಿಕಾರಿಗಳಾದ ಟಿ.ವಿ.ಪ್ರಕಾಶ್, ದರ್ಶನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT