17ರಿಂದ ವಾಯುಸೇನೆ ನೇಮಕಾತಿ ರ್‍ಯಾಲಿ

ಭಾನುವಾರ, ಜೂಲೈ 21, 2019
22 °C

17ರಿಂದ ವಾಯುಸೇನೆ ನೇಮಕಾತಿ ರ್‍ಯಾಲಿ

Published:
Updated:

ಶಿವಮೊಗ್ಗ: ನಗರದ ನೆಹರು ಕ್ರೀಡಾಂಗಣದಲ್ಲಿ ಜುಲೈ 17ರಿಂದ 22ರವರೆಗೆ ವಾಯುಸೇನಾಗೆ ನೇಮಕಾತಿ ರ್‍ಯಾಲಿ ನಡೆಯಲಿದೆ.

ಈ ರ್‍ಯಾಲಿಗೆ ಜಿಲ್ಲೆಯ ಅಭ್ಯರ್ಥಿಗಳನ್ನು ಸಿದ್ಧಗೊಳಿಸಲು ಜುಲೈ 7 ಮತ್ತು 14ರಂದು ಕುವೆಂಪು ರಂಗಮಂದಿರದಲ್ಲಿ ತರಬೇತಿ ನೀಡಲಾಗುವುದು. ದೈಹಿಕ ಪರೀಕ್ಷೆಗೆ ಸಿದ್ಧರಾಗಲು ನೆಹರು ಕ್ರೀಡಾಂಗಣದಲ್ಲಿ ಬೆಳಿಗ್ಗೆ ಸಮಯದಲ್ಲಿ ಕಸರತ್ತು ನಡೆಸಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೂರು ವಿಭಾಗಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಐಎಎಫ್/ಪಿ ಹಾಗೂ ಅಟೋಟೆಕ್ ಟ್ರೇಡ್ ವಿಭಾಗಳಿಗೆ ದ್ವಿತೀಯ ಪಿಯು ವಿದ್ಯಾರ್ಹತೆ. ಯಾವುದೇ ವಿಷಯದಲ್ಲಾದರೂ ಪಿಯು ತೇರ್ಗಡೆಯಾಗಿರಬೇಕು. ಮೆಡಿಕಲ್ ಅಸಿಸ್ಟೆಂಟ್ ಟ್ರೇಡ್‌ಗೆ ಪಿಯು ವಿಜ್ಞಾನ ವಿಷಯದಲ್ಲಿ ತೇರ್ಗಡೆಯಾಗಿರಬೇಕು. ಎಲ್ಲಾ ವಿಭಾಗಗಳಿಗೂ ಲಿಖಿತ ಪರೀಕ್ಷೆ ಹಾಗೂ ದೈಹಿಕ ಸಾಮರ್ಥ್ಯ ಕಡ್ಡಾಯ. 19 ಜುಲೈ 1999ರಿಂದ 1 ಜುಲೈ 2003ರ ಮಧ್ಯೆ ಜನಿಸಿದವರು ಅರ್ಹರಾಗಿರುತ್ತಾರೆ. ಎಸ್‌ಎಸ್‌ಎಲ್‌ಸಿ, ಪಿಯು ಅಂಕಪಟ್ಟಿ, ಬಿಳಿ ಹಿನ್ನೆಲೆ ಇರುವ 30 ಪಾಸ್‌ಪೋರ್ಟ್ ಅಳತೆಯ ಫೋಟೊ, ಆಧಾರ್ ಕಾರ್ಡ್, ವಾಸ ದೃಢೀಕರಣ ಪತ್ರ ತರಬೇಕು ಎಂದು ವಿವರ ನೀಡಿದರು.

ಆಸಕ್ತ ಅಭ್ಯರ್ಥಿಗಳು ನೇರವಾಗಿ ಕ್ರೀಡಾಂಗಣಕ್ಕೆ ಬಂದು ಹೆಸರು ನೋಂದಾಯಿಸಿಕೊಳ್ಳಬಹುದು. ತರಬೇತಿ ಹಾಗೂ ಹೆಚ್ಚಿನ ಮಾಹಿತಿಗಾಗಿ 8861890866, 081-82–255293/4 ಸಂಪರ್ಕಿಸಬಹುದು ಎಂದರು.

ಪ್ರತಿ ದಿನ ಕನಿಷ್ಠ 2 ಸಾವಿರ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಅವರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲಾಗುವುದು. ಕಲ್ಯಾಣ ಮಂದಿರಗಳು, ಹಾಸ್ಟೆಲ್‌, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಹೆಚ್ಚಿನ ಅಭ್ಯರ್ಥಿಗಳು ಬರುವ ಕಾರಣ ಸಣ್ಣಪುಟ್ಟ ಸಮಸ್ಯೆಗಳು ಸಹಜ ಎಂದು ಅಭಿಪ್ರಾಯಪಟ್ಟರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !