ಉಪ ಚುನಾವಣೆ: ಉಭಯ ಪಕ್ಷಗಳ ವರಿಷ್ಠರ ತೀರ್ಮಾನವೇ ಅಂತಿಮ

7

ಉಪ ಚುನಾವಣೆ: ಉಭಯ ಪಕ್ಷಗಳ ವರಿಷ್ಠರ ತೀರ್ಮಾನವೇ ಅಂತಿಮ

Published:
Updated:
Deccan Herald

ಮರಳವಾಡಿ(ಕನಕಪುರ): ‘ದೇವರ ಅನುಗ್ರಹದಿಂದ ಎಚ್‌.ಡಿ ಕುಮಾರಸ್ವಾಮಿ ಅವರು ಮತ್ತೊಮ್ಮೆ ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಜನರ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಉತ್ತಮ ಆಡಳಿತ ನೀಡಲಿದ್ದಾರೆ’ ಎಂದು ಜೆಡಿಎಸ್‌ ಮುಖಂಡರಾದ ಅನಿತಾ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಕನಕಪುರ ತಾಲ್ಲೂಕಿನ ಮರಳವಾಡಿ ಕೋಟೆ ಇಷ್ಟಾರ್ಥ ಗಣಪತಿ ದೇವಾಲಯದಲ್ಲಿ ಗುರುವಾರ ನಡೆದ ಅತಿರುದ್ರ ಮಹಾಯಾಗ ಮತ್ತು ಶತಚಂಡಿಕಾ ಯಾಗದಲ್ಲಿ  ಭಾಗವಹಿಸಿ ಮಾತನಾಡಿದರು.

ದೇವರ ಆಶೀರ್ವಾದದಿಂದ ಸಮ್ಮಿಶ್ರ ಸರ್ಕಾರದಲ್ಲಿ ಒಳ್ಳೆಯ ರೀತಿಯ ಆಡಳಿತದೊಂದಿಗೆ ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಸಿಗಲೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದರು.

‘ಮಹಿಳೆಯರು, ಮಕ್ಕಳು, ರೈತರು, ಅಂಗವಿಕಲರು, ಸಮಾಜದಲ್ಲಿನ ಆಶಕ್ತರ ಪರವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಒಳ್ಳೆಯ ಅಭಿವೃದ್ಧಿ ಕೆಲಸ ಮಾಡಲಿದ್ದಾರೆ’ ಎಂಬ ಆಶಾಭಾವ ವ್ಯಕ್ತಪಡಿಸಿದರು.

ರಾಮನಗರ ಉಪ ಚುನಾವಣೆಯಲ್ಲಿ ಅಭ್ಯರ್ಥಿ ಯಾರೆಂಬುದನ್ನು ಈಗಲೇ ಹೇಳಲಾಗದು. ಚುನಾವಣೆ ಘೋಷಣೆಯಾದ ನಂತರ ಎರಡೂ ಪಕ್ಷಗಳ ವರಿಷ್ಠರು ಅಭ್ಯರ್ಥಿ ತೀರ್ಮಾನಿಸಿ ಕಣಕ್ಕೆ ಇಳಿಸಲಿದ್ದಾರೆ. ಈ ವಿಚಾರದಲ್ಲಿ ವರಿಷ್ಠರ ತೀರ್ಮಾನವೇ ಅಂತಿಮವಾಗಲಿದೆ ಎಂದರು.

ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಾಮಕೃಷ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಭುಜಂಗಯ್ಯ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಕೆ.ಎನ್‌.ರಾಮು ಮತ್ತು ಶಿಲ್ಪ ಶಿವಾನಂದ, ಮುಖಂಡರಾದ ಭೈರೇಗೌಡ, ತಮ್ಮಣ್ಣ, ಕೃಷ್ಣಮೂರ್ತಿ, ರೆಹಮತ್‌ ಉಲ್ಲಾ, ನಾರಾಯಣಗೌಡ, ನಾಗರಾಜು, ರಾಜು, ಮಲ್ಲೇಶ್‌, ರಾಜು, ಮಲ್ಲೇಶ್‌, ಜಿ.ಕೆ.ರಂಗಣ್ಣ, ಜಯರಾಮೇಗೌಡ, ಬಸವರಾಜು, ಮಹದೇವ್‌, ನರಸಿಂಹ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !