ಸಾಮಾಜಿಕ ಮೌಲ್ಯ ಸಾರುವ ಜನಪದ ಸಾಹಿತ್ಯ: ಡಾ.ಎಸ್‌.ಬಾಲಾಜಿ

7
ತುಂಗಣಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ‘ದೇಸಿ ಪದೋತ್ಸವ’

ಸಾಮಾಜಿಕ ಮೌಲ್ಯ ಸಾರುವ ಜನಪದ ಸಾಹಿತ್ಯ: ಡಾ.ಎಸ್‌.ಬಾಲಾಜಿ

Published:
Updated:
Deccan Herald

ಕನಕಪುರ: ಜಾನಪದ ಹಾಡುಗಳ ಮೂಲಕ ಮೌಲ್ಯಯುತವಾದ ಸಂದೇಶವನ್ನು ಮಹಿಳೆಯರು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಡಾ.ಎಸ್‌.ಬಾಲಾಜಿ ತಿಳಿಸಿದರು.

ತಾಲ್ಲೂಕಿನ ತುಂಗಣಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನವಚೇತನ ಯುವಕರ ಸಂಘ ಏರ್ಪಡಿಸಿದ್ದ ‘ದೇಸಿ ಪದೋತ್ಸವ’ದಲ್ಲಿ ರಾಗಿ ಕಣಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ದೇವಿಯ ಚೊಚ್ಚಲ ಕನಸು ಜಾನಪದವಾಗಿದ್ದು, ಇದು ಅತ್ಯಂತ ಶ್ರೀಮಂತವಾದ ಸಾಹಿತ್ಯ ಪ್ರಕಾರ. ಮೂರು ಲೋಕಗಳನ್ನು ಒಂದೆಡೆಗೆ ತರುವ ಅಪಾರವಾದ ಶಕ್ತಿ ಜನಪದಕ್ಕಿದೆ ಎಂದರು.

ಸಮಾಜ ಜೀವಿಗಳಾಗಬೇಕಾದ ಮಕ್ಕಳು ಪಾಶ್ಚಿಮಾತ್ಯ ಸಂಸ್ಕೃತಿ ಹಾಗೂ ಮೊಬೈಲ್ ಯುಗದಲ್ಲಿ ತೊಡಗಿದ್ದು, ಈ ಅಪಾಯ ತಪ್ಪಿಸಲು ಮಕ್ಕಳು ಮತ್ತು ಯುವಜನರನ್ನು ಜಾನಪದದ ಕಡೆಗೆ ಸೆಳೆಯಲು ಇಂತಹ ದೇಸಿ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದರು.

ತುಂಗಣಿ ತಾಲ್ಲೂಕು ಪಂಚಾಯಿತಿ ಸದಸ್ಯ ಟಿ.ಪಿ.ಧನಂಜಯ ಮಾತನಾಡಿ, ಜಾನಪದ ಕೇವಲ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಜನಪದಕ್ಕಿದೆ. ಪೂರ್ವಿಕರಿಂದ ಬಳುವಳಿಯಾಗಿ ಬಂದ ಈ ಕಲೆಯನ್ನು ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು.

ತಾಲ್ಲೂಕು ವರ್ತಕರ ಸಂಘದ ಅಧ್ಯಕ್ಷ ಕೈಲಾಸ್ ಶಂಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜಾನಪದ ನಶಿಸುವ ಹಂತಕ್ಕೆ ತಲುಪಿರುವುದು ದುರಂತದ ಸಂಗತಿ ಇದನ್ನು ಪೋಷಿಸುವ ಸಾಮಾಜಿಕ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ ಮಹಿಳಾ ಕಾರ್ಯಕರ್ತೆ ರೋಹಿಣಿ ಪ್ರಿಯ, ವೀರೇಶ್, ಬಿ.ವಿ.ಮಂಜುಳ, ತಾಮಸಂದ್ರ ಪ್ರಕಾಶ್, ಬಿ.ಎಸ್ ಗೌಡ, ಜೈರಾಮೇಗೌಡ.ಎಸ್, ಕನ್ನಡ ಹರೀಶ್, ತುಂಗಣಿ ಗ್ರಾ.ಪಂ ಸದಸ್ಯರಾದ ರಾಜಗೋಪಾಲ್, ಕೆ.ಕುಮಾರ್, ಪಿ.ಡಿ.ಒ ಮುನಿರಾಜು, ಮುಖ್ಯ ಶಿಕ್ಷಕಿ ಪ್ರೇಮಕುಮಾರಿ, ಮುಖಂಡರಾದ ಕಾಡೇಗೌಡ, ಮುಡೇನಹಳ್ಳಿ ಬೈರಾಜು, ವಕೀಲ ಮಹೇಶ್ ಕುಮಾರ್, ಅಸ್ಗರ್ ಖಾನ್, ಕೂರ್ಗಳ್ಳಿ ಕುಮಾರ್, ಎಂ.ನಾಗೇಶ, ಚಿಕ್ಕಣ್ಣ ಇದ್ದರು.

ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಸಾಮಗ್ರಿ ವಿತರಿಸಲಾಯಿತು, ರಾಜ್ಯ ಮಟ್ಟದ ಹಾಸ್ಯ ಕಲಾವಿದ ಚಂದ್ರಾಜ ಸಿ, ಸತೀಶ್ ವಿಶ್ವಕರ್ಮ, ನವೀನ್ ಕುಮಾರ್, ಮಹೇಶ್, ಕಾಡಹಳ್ಳಿ ಮುತ್ತರಾಜ, ಪ್ರದೀಪ್, ನಾಗೇಶ್ ಸಂಗಡಿಗರು ವಿವಿಧ ದೇಸಿ ಪದೋತ್ಸವ ಕಾರ್ಯಕ್ರಮ ನಡೆಸಿಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !