ಪ್ರತಿ ಜಿಲ್ಲೆಗೆ ತಲಾ ₹ 2 ಸಾವಿರ ಕೋಟಿ: ಎಚ್‌ಡಿಕೆ

7

ಪ್ರತಿ ಜಿಲ್ಲೆಗೆ ತಲಾ ₹ 2 ಸಾವಿರ ಕೋಟಿ: ಎಚ್‌ಡಿಕೆ

Published:
Updated:
Deccan Herald

ಹುಬ್ಬಳ್ಳಿ: ‘ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ಮುಂದಿನ ವರ್ಷದಿಂದ ಪ್ರತಿ ಜಿಲ್ಲೆಗೆ ತಲಾ ₹ 2 ಸಾವಿರ ಕೋಟಿ ಮೀಸಲಿಡುತ್ತೇನೆ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರತಿ ತಿಂಗಳು ಅಧಿಕಾರಿಗಳ ತಂಡದೊಂದಿಗೆ ಒಂದು ಜಿಲ್ಲೆಗೆ ಭೇಟಿ ನೀಡುತ್ತೇನೆ. ಅಲ್ಲಿನ ಪಂಚಾಯ್ತಿ ಅಥವಾ ಹೋಬಳಿ ಮಟ್ಟದಲ್ಲಿ ಇಡೀ ದಿನ ಕಳೆದು, ಸ್ಥಳೀಯರ ಸಮಸ್ಯೆಗಳನ್ನು ಆಲಿಸುತ್ತೇನೆ’ ಎಂದರು.

‘ನಮ್ಮ ಯುವಕರಿಗೆ ಸ್ಥಳೀಯ ಮಟ್ಟದಲ್ಲೇ ಉದ್ಯೋಗ ಒದಗಿಸಲು ಬದ್ಧನಾಗಿದ್ದೇನೆ. ಅದಕ್ಕಾಗಿ, ಕಲಬುರ್ಗಿಯಲ್ಲಿ ಸೋಲಾರ್ ಉಪಕರಣ, ಬೀದರ್‌ನಲ್ಲಿ ಕೃಷಿ ಉಪಕರಣ, ಕೊಪ್ಪಳದಲ್ಲಿ ಎಲೆಕ್ಟ್ರಾನಿಕ್ ಬೊಂಬೆ, ಬಳ್ಳಾರಿಯಲ್ಲಿ ಜವಳಿ ಹಾಗೂ ಬೆಳಗಾವಿಯಲ್ಲಿ ಪಿಠೋಪಕರಣ ತಯಾರಿಕೆಗೆ ಸಂಬಂಧಿಸಿದ ಕ್ಲಸ್ಟರ್‌ಗಳನ್ನು ಆರಂಭಿಸಲು ₹ 500 ಕೋಟಿ ಮೀಸಲಿಟ್ಟಿದ್ದೇನೆ’ ಎಂದು ಹೇಳಿದರು.

ರಾಷ್ಟ್ರೀಕೃತ ಸಾಲ ಮನ್ನಾಗೂ ಕ್ರಮ:

‘ಇಸ್ರೇಲ್ ಮಾದರಿಯಲ್ಲಿ ರಾಜ್ಯದ ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತರಲಾಗುವುದು. ಆ ಕುರಿತು ಅಧ್ಯಯನಕ್ಕಾಗಿ, ಕೃಷಿ ಸಚಿವರ ನೇತೃತ್ವದ ತಂಡ ಇಸ್ರೇಲ್‌ಗೆ ಪ್ರವಾಸ ಕೈಗೊಳ್ಳಲಿದೆ. ಮೊದಲ ಬಜೆಟ್‌ನಲ್ಲಿ ಸಹಕಾರಿ ಬ್ಯಾಂಕ್‌ಗಳ ಸಾಲ ಮನ್ನಾ ಆಗಿದೆ. ಮುಂದಿನ ಬಜೆಟ್‌ನಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾಗೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

**

ನಾನು ಮುಖ್ಯಮಂತ್ರಿಯಾದ ಎರಡು ತಿಂಗಳಲ್ಲಿ ಸಾಲ ಮನ್ನಾದಂತಹ ನಿರ್ಧಾರಗಳ ಹೊರತಾಗಿಯೂ, ತೆರಿಗೆ ಸಂಗ್ರಹ ಶೇ 33ರಷ್ಟು ಏರಿಕೆಯಾಗಿದೆ
-ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !