ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ಶೂಟರ್‌ಗಳಿಗೆ 11 ಪದಕ

Last Updated 27 ಫೆಬ್ರುವರಿ 2021, 2:42 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಶೂಟಿಂಗ್‌ ಕ್ರೀಡಾಕೂಟದಲ್ಲಿ ಹುಬ್ಬಳ್ಳಿ ಸ್ಪೋರ್ಟ್ಸ್‌ ಶೂಟಿಂಗ್‌ ಅಕಾಡೆಮಿಯ ಶೂಟರ್‌ಗಳು ಪಿಸ್ತೂಲ್ ವಿಭಾಗದಲ್ಲಿ ಎಂಟು ಚಿನ್ನ, ಮೂರು ಕಂಚಿನ ಪದಕಗಳನ್ನು ಜಯಿಸಿದ್ದಾರೆ.

ವೈಯಕ್ತಿಕ ಸ್ಪರ್ಧೆಯ ಸೀನಿಯರ್‌ ವಿಭಾಗದಲ್ಲಿ ವಿನುತಾ ಎಸ್‌. ಲಕಮನಹಳ್ಳಿ (ಚಿನ್ನ), ಪುರುಷರ ಜೂನಿಯರ್‌ ವಿಭಾಗದಲ್ಲಿ ಸಿದ್ಧಾರ್ಥ್‌ ದಿವಟೆ (ಕಂಚು),14 ವರ್ಷದ ಒಳಗಿನವರ ಮಹಿಳಾ ಎನ್‌.ಆರ್‌.–1 ವಿಭಾಗ, ಯೂತ್‌ ಮಹಿಳಾ ಮತ್ತು ಜೂನಿಯರ್‌ ಮಹಿಳಾ ವಿಭಾಗದಲ್ಲಿ ಜೇಫರ್ ಅರಳಿ ಒಟ್ಟು ಮೂರು ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ತಂಡ ಸ್ಪರ್ಧೆಯ ಜೂನಿಯರ್‌ ಪುರುಷರ ವಿಭಾಗದಲ್ಲಿ ಸಿದ್ದಾರ್ಥ ದಿವಟೆ, ಹರ್ಷ ಮೆಹರವಾಡೆ, ದರ್ಶನ ಪೂಜಾರಿ ಅವರನ್ನು ಒಳಗೊಂಡ ತಂಡ ಚಿನ್ನ, ಯೂತ್‌ ಪುರುಷರ ಎನ್‌.ಆರ್‌. ವಿಭಾಗದಲ್ಲಿ ಪ್ರಜ್ವಲ್‌ ಇಜಾರಿ, ದರ್ಶನ್ ವಾಂಜ್ರೆ, ಸುದೀಪ ಕಾಳಾಫುರ ಅವರನ್ನೊಳಗೊಂಡ ತಂಡ ಕಂಚು, ಯೂತ್‌ ಮಹಿಳೆಯರು ಮತ್ತು 14 ವರ್ಷದ‌ ಒಳಗಿನವರ ವಿಭಾಗದ ಎನ್‌. ಆರ್‌. ಸ್ಪರ್ಧೆಯಲ್ಲಿ ಐಶ್ವರ್ಯಾ ಬಾಲೆಹೊಸೂರ, ಜೇಫರ್‌ ಮತ್ತು ಸುಶೋಭನಾ ಜಾಲಿಹಾಳ ತಂಡ ಎರಡು ಚಿನ್ನ ಜಯಿಸಿತು.

ಜೂನಿಯರ್‌ ಮಹಿಳಾ ಎನ್‌.ಆರ್‌.ನಲ್ಲಿ ಅಕ್ಷತಾ ಹರಕುಣಿ, ಐಶ್ವರ್ಯಾ ಬಾಲೆಹೊಸೂರ, ಜೇಪ್‌ ಅರಳಿ ಅವರ ತಂಡ ಚಿನ್ನ, ಸೀನಿಯರ್‌ ಮಹಿಳಾ ಆರ್‌.ಎನ್‌. ವಿಭಾಗದಲ್ಲಿ ಜಯಶ್ರೀ ಪಾಟೀಲ, ಅಕ್ಷತಾ ಹರಕುಣಿ ಮತ್ತು ಪ್ರತಿಭಾ ಬಡ್ನಿ ಅವರನ್ನು ಒಳಗೊಂಡ ತಂಡ ಕಂಚು ಗೆದ್ದುಕೊಂಡಿತು. ಇವರೆಲ್ಲರಿಗೂ ರವಿಚಂದ್ರ ಬಾಲೆಹೊಸೂರ ತರಬೇತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT