ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ನೇ ಡಿವಿಷನ್ ಕ್ರಿಕೆಟ್: ವಿಬಿಸಿಎ ಚಾಂಪಿಯನ್

Last Updated 8 ಫೆಬ್ರುವರಿ 2023, 5:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸಾಯಿ ಸುಶೀಲ್ ಆರ್. (89 ರನ್, 7x4, 4x6) ಹಾಗೂ ರಾಹುಲ್ ವೆರ್ನೆಕರ್ (55 ರನ್, 5x4,1x6) ಅವರ ಅರ್ಧ ಶತಕಗಳ ನೆರವಿನ ಬಲದಿಂದ ಧಾರವಾಡ ವಲಯದ 3ನೇ ಡಿವಿಷನ್ ಕ್ರಿಕೆಟ್‌ ಟೂರ್ನಿಯಲ್ಲಿ ಧಾರವಾಡದ ವಿಲಾಸ್ ಬೇಂದ್ರೆ ಕ್ರಿಕೆಟ್ ಅಕಾಡೆಮಿ ‘ಎ’ (ವಿಬಿಸಿಎ) ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು.

ನಗರದ ರಾಜನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಫೈನಲ್ ಪಂದ್ಯದಲ್ಲಿ ವಿಬಿಸಿಎ ತಂಡ 53 ರನ್‌ಗಳಿಂದ‌ ಗೆದ್ದು ಬೀಗಿತು.

ಟಾಸ್ ಸೋತು ಬ್ಯಾಟಿಂಗ್ ಅವಕಾಶ ಪಡೆದ ವಿಬಿಸಿಎ, ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿತು. 29 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 202 ರನ್‌ಗಳ ಸವಾಲಿನ ಮೊತ್ತ ಪೇರಿಸಿತು.

ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿಯ ತಾನಾಜಿ ಸ್ಪೋರ್ಟ್ಸ್ ಕ್ಲಬ್ ‘ಎ’ ತಂಡವು 25.1 ಓವರ್‌ಗಳಲ್ಲಿ 149 ರನ್‌ಗಳಿಗೆ ಆಲೌಟ್ ಆಯಿತು. ಅಶ್ಫಾಕ್ ಎಂ. (70 ರನ್, 6x4, 1x6) ಹಾಗೂ ಪ್ರಜ್ವಲ್ ಪ್ರಕಾಶ್ (38 ರನ್, 5x4) ಅವರ ಆಟ ಮನ ಸೆಳೆಯಿತು.

ಸಂಕ್ಷಿಪ್ತ ಸ್ಕೋರ್: ವಿಬಿಸಿಎ ತಂಡ (29 ಓವರ್ ಗಳಲ್ಲಿ 6 ವಿಕೆಟ್‌ಗೆ 202; ಸುಜಯ್‌ ಕೊರವಾರ 17, ಬಸವರಾಜ ಎಚ್. 19, ಸಾಯಿ ಸುಶೀಲ್ 89, ರಾಹುಲ್ ವೆರ್ನೆಕರ್ 53, ಶಿವಶಂಕರ್ ಸಿ. 15ಕ್ಕೆ 2, ಸಚಿನ್ ರೇವಣಕರ್ 35ಕ್ಕೆ 2).

ತಾನಾಜಿ ಸ್ಪೋರ್ಟ್ಸ್ ಕ್ಲಬ್ ತಂಡ (25.1 ಓವರ್ ಗಳಲ್ಲಿ 149 ರನ್‌ಗಳಿಗೆ ಆಲೌಟ್; ಪ್ರಜ್ವಲ್‌ ಪ್ರಕಾಶ 38 ರನ್, ಅಶ್ಫಾಕ್ 70, ತಾಹೀರ್ ಬೆಂಡಿಗೇರಿ 10, ಬಸವರಾಜ ಕೆ 7, ರಾಹುಲ್ ಸಾಲಿಮಠ 9, ಆದಿತ್ಯ ಮಣಿ 15ಕ್ಕೆ 3 ವಿಕೆಟ್, ಶ್ರೇಯಾಂಶ್ ಎನ್‌ 33ಕ್ಕೆ 3 ವಿಕೆಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT