ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಎಂಜಿನ್‌ನಿಂದ 4 ರೈಲು ಸಂಚಾರ: ನಿತ್ಯ 5 ಸಾವಿರ ಲೀಟರ್ ಡೀಸೆಲ್ ಉಳಿತಾಯ

Last Updated 30 ಮಾರ್ಚ್ 2022, 16:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನೈರುತ್ಯ ರೈಲ್ವೆಯ ನಾಲ್ಕು ರೈಲುಗಳು ವಿದ್ಯುತ್ ಎಂಜಿನ್‌ನಿಂದ ಸಂಚಾರ ಆರಂಭಿಸಿವೆ. ತಿರುಪತಿ– ಕೊಲ್ಲಾಪುರ (17415) ಮತ್ತು ಕೊಲ್ಲಾಪುರ– ತಿರುಪತಿ ಎಕ್ಸ್‌ಪ್ರೆಸ್ (17416), ಎಸ್ಎಸ್ಎಸ್ ಹುಬ್ಬಳ್ಳಿ - ಎಂಜಿಆರ್ ಚೆನ್ನೈ ಸೆಂಟ್ರಲ್ - ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ ಪ್ರೆಸ್ (17313/ 17314) ಹಾಗೂ ಮೈಸೂರು - ಕೆಎಸ್ಆರ್ ಬೆಂಗಳೂರು– ಧರ್ಮಾವರಂ– ಗುಂತಕಲ್– ರಾಯಚೂರು– ವಾಡಿ- ಕಲಬುರಗಿ ಹಾಗೂ ಸೊಲ್ಲಾಪುರದ ಹರಿಪ್ರಿಯ ಎಕ್ಸ್‌ಪ್ರೆಸ್ ವಿದ್ಯುತ್ ಎಂಜಿನ್‌ನಿಂದ ಸಂಚರಿಸುವ ರೈಲುಗಳು.

ನಾಲ್ಕು ರೈಲುಗಳು ಎಲೆಕ್ಟ್ರಿಕಲ್ ಎಂಜಿನ್‌ನೊಂದಿಗೆ ಸಂಚರಿಸುವುದರಿಂದ ಪ್ರತಿದಿನ ಸುಮಾರು 5 ಸಾವಿರ ಲೀಟರ್ ಡೀಸೆಲ್ ಉಳಿತಾಯವಾಗಲಿದೆ. ನೈರುತ್ಯ ರೈಲ್ವೆಯಲ್ಲಿ ಎರಡು ವರ್ಷದಗಳಲ್ಲಿ ಪ್ರತಿ ವರ್ಷ 24 ರೈಲುಗಳಂತೆ ಒಟ್ಟು 48 ರೈಲುಗಳನ್ನು ಎಲೆಕ್ಟ್ರಿಕ್ ಎಂಜಿನ್‌ನೊಂದಿಗೆ ಸಂಚರಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಈಗಾಗಲೇ 26 ರೈಲುಗಳನ್ನು ಎಲೆಕ್ಟ್ರಿಕ್ ಲೋಕೋಮೋಟಿವ್‌ನಿಂದ ಸಂಚರಿಸಲು ಎಲೆಕ್ಟ್ರಿಕ್ ಟ್ರ್ಯಾಕ್ಷನ್‌ನಲ್ಲಿ ಪರಿವರ್ತಿಸಲಾಗಿದೆ.ಏಪ್ರಿಲ್ 2021ರಿಂದ ಇಲ್ಲಿಯವರೆಗೆ ತನ್ನ ಸಂಪರ್ಕ ಜಾಲದ 511.7 ಕೀ.ಮೀ.ಗಳ ವಿದ್ಯುದೀಕರಣ ಪೂರ್ಣಗೊಳಿಸಲಾಗಿದೆ ಎಂದು ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT