ಶನಿವಾರ, ಜನವರಿ 29, 2022
22 °C

ಹುಬ್ಬಳ್ಳಿ: ಗ್ರಾಹಕರ ಸೇವಾ ಕೇಂದ್ರದ ಹೆಸರಲ್ಲಿ ₹ 6.77 ಲಕ್ಷ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಿಮ್ಮ ಡೆಬಿಟ್‌ ಕಾರ್ಡ್‌ ಬ್ಲಾಕ್‌ ಆಗಿದ್ದು, ಅದನ್ನು ಸರಿಪಡಿಸಿಕೊಡುವುದಾಗಿ ನಂಬಿಸಿ ಇಲ್ಲಿನ ವಿದ್ಯಾನಗರದ ಸಿ.ಎಸ್‌. ಜೋಶಿ ಎಂಬುವವರಿಗೆ ಆನ್‌ಲೈನ್‌ ಮೂಲಕ ₹6.77 ಲಕ್ಷ ವಂಚಿಸಲಾಗಿದೆ.

ಬ್ಲಾಕ್‌ ತೆಗೆಯಲು ಗ್ರಾಹಕರ ಸೇವಾ ಕೇಂದ್ರಕ್ಕೆ ಸಂಪರ್ಕಿಸಿ ಎಂದು ಮೊಬೈಲ್‌ ಫೋನ್‌ಗೆ ಬಂದಿದ್ದ ಸಂದೇಶದಲ್ಲಿದ್ದ ಲಿಂಕ್‌ ಅನ್ನು ಅವರು ಒತ್ತಿದ್ದಾರೆ. ಆಗ ಬಂದ ಸಂಖ್ಯೆಗೆ ಕರೆ ಮಾಡಿದಾಗ ಗ್ರಾಹಕರ ಸೇವಾ ಕೇಂದ್ರದಿಂದ ಮಾತನಾಡುತ್ತಿರುವುದಾಗಿ ನಂಬಿಸಿ ಡೆಬಿಡ್‌ ಕಾರ್ಡ್‌ ಸಂಖ್ಯೆ, ಪಿನ್‌ ಸಂಖ್ಯೆ, ಆಧಾರ್‌ ಮತ್ತು ಬ್ಯಾಂಕ್‌ ಖಾತೆಯ ಸಂಖ್ಯೆಯನ್ನು ಪಡೆದು ವಂಚನೆ ಮಾಡಿದ್ದಾರೆ. ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆದರಿಕೆ; ಪ್ರಕರಣ: ಭಾವನಾ ಮೇಟಿ ಎಂಬುವರ ಇನ್‌ಸ್ಟಾಗ್ರಾಮ್‌ ಖಾತೆಗೆ ಸೋನು ನವೀನ್‌ ಎಂಬ ವ್ಯಕ್ತಿ ಸಲ್ಲಿಸಿದ್ದ ಫಾಲೊ ಕೋರಿಕೆಯನ್ನು ಭಾವನಾ ಒಪ್ಪಿಕೊಳ್ಳದ ಕಾರಣ ಅಶ್ಲೀಲ ಫೋಟೊಗಳನ್ನು ಸಾಮಾಜಿಕ ತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿದ ಘಟನೆ ನಡೆದಿದೆ.

ಭಾವನಾ ತಮ್ಮ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದ ಫೋಟೊಗಳನ್ನು ಅಶ್ಲೀಲವಾಗಿ ಎಡಿಟ್‌ ಮಾಡಿ ಸಾಮಾಜಿಕ ತಾಣದಲ್ಲಿ ಹಾಕುತ್ತೇನೆ ಎಂದು ಸೋನು ಎಂಬಾತ ಬೆದರಿಕೆ ಒಡ್ಡಿದ್ದಾನೆ. ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಲೈಂಗಿಕ ದೌರ್ಜನ್ಯ: ಬಾಲಕಿಯೊಬ್ಬಳನ್ನು ಜಿಲ್ಲೆಯ ಬೇರೆ ತಾಲ್ಲೂಕಿನ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಜರುಗಿದೆ.

ಆರೋಪಿ ಹಾಗೂ ಬಾಲಕಿ ಪರಸ್ಪರ ಪ್ರೀತಿಸುತ್ತಿದ್ದರು. ಆರೋಪಿ ಹೊರಗಡೆ ಸುತ್ತಾಡಿಕೊಂಡು ಬರೋಣ ಎಂದು ಹೇಳಿ ಪುಸಲಾಯಿಸಿಕೊಂಡು ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ. ಕಸಬಾಪೇಟೆ ಪೊಲೀಸ್‌ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.