‘ಮಂಗಳವಾರ ಮಧ್ಯಾಹ್ನ ಸ್ಥಳೀಯರು ಕುತೂಹಲದಿಂದ ಪಾಳು ಬಿದ್ದ ಮನೆ ಪರಿಶೀಲಿಸಿದಾಗ, ಕೋಣೆಯೊಂದರಲ್ಲಿ ಹಾಸಿಗೆ ಮೇಲೆ ಅಸ್ಥಿಪಂಜರ ಕಂಡಿದೆ. ಮನೆಯಲ್ಲಿ ಚಂದ್ರಶೇಖರ್ ಎಂಬುವರು ವಾಸವಿದ್ದರು. ಅವರು ಯಾರ ಸಂಪರ್ಕದಲ್ಲೂ ಇರಲಿಲ್ಲ. ಅಸ್ಥಿಪಂಜರ ಅವರದ್ದೇ ಇರಬಹುದು. ಮನೆಯ ಎಲ್ಲಾ ಕಿಟಕಿಗಳು ಮುಚ್ಚಿದ್ದು, ಸುತ್ತಮುತ್ತ ಗಿಡಗಂಟಿ ಬೆಳೆದಿವೆ’ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.