ಶನಿವಾರ, ಅಕ್ಟೋಬರ್ 24, 2020
24 °C

ಆರ್‌ಸಿಬಿ ಅಭಿಮಾನಿಗಳಿಂದ ನುಗ್ಗಿಕೇರಿ ಹನುಮಂತ ದೇವರಿಗೆ ಅಭಿಷೇಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಈ ಸಲದ ಐಪಿಎಲ್‌ ಕ್ರಿಕೆಟ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಟ್ರೋಫಿ ಗೆಲ್ಲಬೇಕು ಎಂದು ಪ್ರಾರ್ಥಿಸಿ ತಂಡದ ಅಭಿಮಾನಿಗಳು ಶನಿವಾರ ಧಾರವಾಡದ ಪ್ರಸಿದ್ಧ ನುಗ್ಗಿಕೇರಿ ಹನುಮಂತ ದೇವರಿಗೆ ಅಭಿಷೇಕ ಮಾಡಿಸಿದ್ದಾರೆ.

ಅಭಿಮಾನಿಗಳು ಅಭಿಷೇಕದ ರಸೀತಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಎಂದು ಬರೆಸಿದ್ದು, ರಾಶಿ ‘ವಿರಾಟ್‌’, ಗೋತ್ರ ‘ಎಬಿಡಿ’ ಎಂದು ಬರೆಯಿಸಿದ್ದಾರೆ. ಈ ರಸೀತಿ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು ಅನೇಕರು ಮೆಚ್ಚಿಕೊಂಡಿದ್ದಾರೆ. ‘ಇದು ಕಣ್ರೊ ಆರ್‌ಸಿಬಿ ಕ್ರೇಜ್‌ ಅಂದ್ರೆ’ ಎನ್ನುವ ಮೆಚ್ಚುಗೆಯ ಸಂದೇಶ ಹರಿದಾಡುತ್ತಿವೆ. ಅಭಿಷೇಕ ಮಾಡಿರುವುದನ್ನು ದೇವಸ್ಥಾನದ ಅರ್ಚಕರು ಕೂಡ ಖಚಿತಪಡಿಸಿದ್ದಾರೆ.

ಅಭಿಷೇಕದ ರಸೀತಿ ಜೊತೆ ‘ಒಂದೆರೆಡು ಮ್ಯಾಚ್‌ಗಳನ್ನು ಸೋತ ತಕ್ಷಣ ಮನೆಯವರಿಗೆಲ್ಲ ಬೆದರಿಕೆ ಹಾಕೊ ಫ್ಯಾನ್ಸ್‌ ನಾವಲ್ಲ. 12 ವರ್ಷ ಆದ್ರೂ ಅದೇ ಪ್ರೀತಿ ಇಟ್ಕೊಂಡಿರೊ ರಾಯಲ್‌ ಫ್ಯಾನ್ಸ್‌’ ಎನ್ನುವ ಸಂದೇಶ ಬರೆಯಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು