ಕೊಲೆ ಪ್ರಕರಣ: ಸಹೋದರನ ಹೆಸರು ದುರ್ಬಳಕೆ– ಗುರುನಾಥಗೌಡ ಆರೋಪ

ಭಾನುವಾರ, ಏಪ್ರಿಲ್ 21, 2019
27 °C

ಕೊಲೆ ಪ್ರಕರಣ: ಸಹೋದರನ ಹೆಸರು ದುರ್ಬಳಕೆ– ಗುರುನಾಥಗೌಡ ಆರೋಪ

Published:
Updated:

ಹುಬ್ಬಳ್ಳಿ: ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡ ಕೊಲೆ ಪ್ರಕರಣವನ್ನು ಕ್ಷೇತ್ರದ ಮೈತ್ರಿಪಕ್ಷದ ಅಭ್ಯರ್ಥಿ ವಿನಯ ಕುಲಕರ್ಣಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅವರು ಹೆಸರು ಹೇಳಿ ಮತದಾರರ ಅನುಕಂಪ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಯೋಗಿಶಗೌಡರ ಸಹೋದರ ಗುರುನಾಥಗೌಡರ ಆರೋಪಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ನನ್ನ ಸಹೋದರನ ಸಾವಿಗೆ ನ್ಯಾಯ ಸಿಗಬೇಕು ಎಂದು ಕುಟುಂಬದವರೆಲ್ಲ ಒಂದಾಗಿ ಹೋರಾಟ ಮಾಡುತ್ತಿದ್ದೇವೆ. ಆದರೆ ವಿನಯ, ಈ ವಿಷಯವನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡು ವಿನಾಕಾರಣ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಹಾಗೂ ಶಾಸಕ ಅಮೃತ ದೇಸಾಯಿ ಅವರನ್ನು ನಿಂದನೆ ಮಾಡುತ್ತಿದ್ದಾರೆ. ಈ ಬಗ್ಗೆ ಶೀಘ್ರವೇ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇನೆ’ ಎಂದರು.

‘ನನ್ನೊಂದಿಗೆ ರಾಜೀ ಸಂಧಾನ ಮಾಡಿಕೊಳ್ಳುವಂತೆ ವಿನಯ ಕುಲಕರ್ಣಿ ನನ್ನ ಮೇಲೆ ಒತ್ತಡ ಹೇರಿದ್ದರು. ಇದಕ್ಕಾಗಿ ಅನೇಕ ಬಾರಿ ಅವರ ಆಪ್ತರು ನನ್ನ ಮನೆಗೂ ಬಂದು ಹೋಗಿದ್ದಾರೆ. ಅವರಿಗೆ ಈಗಲೇ ಸೋಲಿನ ಭಯ ಎದುರಾಗಿರುವುದರಿಂದ ಈ ಪ್ರಕರಣದಲ್ಲಿ ಪ್ರಹ್ಲಾದ ಜೋಶಿ ಹೆಸರು ಸೇರಿಸಿ ಅವರಿಗೆ ಕಳಂಕ ತರಲು ಪ್ರಯತ್ನಿಸುತ್ತಿದ್ದಾರೆ’ ಎಂದು ದೂರಿದರು.

ಕುಟುಂಬ ಸದಸ್ಯರಾದ ಅಂಜನಾ ಡೊಳ್ಳಿನ, ಬಸಪ್ಪ ನಾಗರಹಳ್ಳಿ, ಶರಣು ಅಗಡಿ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !