ಸಾರ್ವಜನಿಕ ಗಣೇಶೋತ್ಸವ ಸ್ಥಳಕ್ಕೆ ಎಡಿಜಿಪಿ ಕಮಲ್ ಪಂತ್ ಭೇಟಿ

7

ಸಾರ್ವಜನಿಕ ಗಣೇಶೋತ್ಸವ ಸ್ಥಳಕ್ಕೆ ಎಡಿಜಿಪಿ ಕಮಲ್ ಪಂತ್ ಭೇಟಿ

Published:
Updated:
Deccan Herald

ಹುಬ್ಬಳ್ಳಿ: ಕಾನೂನು– ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಕಮಲ್ ಪಂತ್ ಅವರು ಹುಬ್ಬಳ್ಳಿ ನಗರದ ವಿವಿಧ ಸಾರ್ವಜನಿಕ ಗಣೇಶೋತ್ಸವ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಸ್ಥಳೀಯರೊಂದಿಗೆ ಸಂವಾದ ನಡೆಸಿದರು.

ಹಳೆಯ ಹುಬ್ಬಳ್ಳಿ, ನೇತಾಜಿನಗರ, ಘಂಟಿಕೇರಿ, ಮಂಗಳವಾರ ಪೇಟೆ, ಶಾ ಬಜಾರ್‌ಗೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಣೇಶೋತ್ಸವ ಆಚರಣೆಗೆ ಅಗತ್ಯ ಇರುವ ಪೊಲೀಸ್ ಭದ್ರತೆ– ಸಹಕಾರ ನೀಡಲಾಗುವುದು. ಆದರೆ ಎಲ್ಲರೂ ಶಾಂತಿ– ಮತ್ತು ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಬೇಕು. ಮೆರವಣಿಗೆ ವೇಳೆಯೂ ಯಾವುದೇ ರೀತಿಯ ಗೊಂದಲ ಆಗದಂತೆ ನೋಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಶಾಂತಿಯುತವಾಗಿ ಹಬ್ಬವನ್ನು ಆಚರಿಸುವ ಭರವಸೆ ನೀಡಿದ ಗಣೇಶೋತ್ಸವ ಮಂಡಳಿತ ಸದಸ್ಯರು, ಕಮಲ್ ಪಂತ್ ಅವರನ್ನು ಸನ್ಮಾನಿಸಿದರು. ಪೊಲೀಸ್ ಕಮಿಷನರ್ ಎಂ.ಎನ್. ನಾಗರಾಜ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಬಿ.ಎಸ್. ನೇಮಗೌಡ, ಉತ್ತರ ವಿಭಾಗದ ಎಸಿಪಿ ಎಚ್‌.ಕೆ. ಪಠಾಣ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !