ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಗಾಸ್‌ ಯಾತ್ರಾ: ಕೈಪಿಡಿ ಬಿಡುಗಡೆ ನಾಳೆ

Last Updated 28 ಡಿಸೆಂಬರ್ 2019, 11:13 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅಡಿಗಾಸ್ ಯಾತ್ರಾ ಮತ್ತು ಅಡಿಗಾಸ್‌ ವರ್ಲ್ಡ್‌ನ ಕೈಪಿಡಿ ಬಿಡುಗಡೆ ಸಮಾರಂಭ ಡೆನಿಸನ್ಸ್ ಹೋಟೆಲ್‌ನ ರಾಯಲ್ ಹಾಲ್‌ನಲ್ಲಿ ಡಿ.29ರಂದು ಸಂಜೆ 4.30ಕ್ಕೆ ನಡೆಯಲಿದೆ.

ಈ ಕುರಿತು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅಡಿಗಾಸ್ ಸಂಸ್ಥೆಯ ಸಂಸ್ಥಾಪಕ ಕೆ. ನಾಗರಾಜ ಅಡಿಗ, ಅಡಿಗಾಸ್ ವರ್ಲ್ಡ್‌ನ (www.adigasworld.com) ಪರಿಷ್ಕೃತ ಮಾಹಿತಿ ಒಳಗೊಂಡ ವೆಬ್‌ಸೈಟ್‌ ಮತ್ತು ಕೈಪಿಡಿಯನ್ನು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಅಡಿಗಾಸ್‌ ಯಾತ್ರಾ (www.adigasyatra.com) ವೆಬ್‌ಸೈಟ್ ಮತ್ತು ಕೈಪಿಡಿಯನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ ಜೋಶಿ ಬಿಡುಗಡೆಗೊಳಿಸುವರು ಎಂದರು.

2020ರ ಟೂರ್‌ ಪ್ಯಾಕೇಜ್‌ಗಳ ಸಮಗ್ರ ಮಾಹಿತಿ ವೆಬ್‌ಸೈಟ್ ಹಾಗೂ ಕೈಪಿಡಿಯಲ್ಲಿದೆ. ಗ್ರಾಹಕರು ತಮಗೆ ಅನುಕೂಲವಾಗುವ ಪ್ಯಾಕೇಜ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುವಂತೆ ವೆಬ್‌ಸೈಟ್ ರೂಪಿಸಲಾಗಿದೆ. ನೋಡಲು ಬಯಸುವ ಸ್ಥಳದ ಮಾಹಿತಿ ಅಥವಾ ಬಜೆಟ್ ಅನ್ನು ನಮೂದಿಸಿದರೂ ಅದಕ್ಕೆ ಸಂಬಂಧಿಸಿದ ಮಾಹಿತಿ ತಕ್ಷಣ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.

ವಿದೇಶ ಪ್ರವಾಸದ ವೇಳೆ ಭಾರತೀಯ ಶೈಲಿಯ ಆಹಾರವನ್ನು ನೀಡಲಾಗುತ್ತದೆ. ಉತ್ತಮ ಮಾರ್ಗದರ್ಶಕರನ್ನು ನಿಯೋಜಿಸಲಾಗುತ್ತದೆ. ವಿದೇಶ ಪ್ರವಾಸಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಏಕೈಕ ಸಂಸ್ಥೆ ಅಡಿಗಾಸ್ ಆಗಿದೆ. ಬೇರೆ ಸಂಸ್ಥೆಗಳು ಶಾಖಾ ಕಚೇರಿಗಳನ್ನು ಮಾತ್ರ ಹೊಂದಿವೆ ಎಂದು ಅವರು ತಿಳಿಸಿದರು.

ಸಂಸ್ಥೆಯು 20 ವರ್ಷಗಳನ್ನು ಪೂರೈಸಿ 26ನೇ ವರ್ಷಕ್ಕೆ ಕಾಲಿಟ್ಟಿದ್ದು, ವಿಶ್ವಾಸಾರ್ಹತೆಯನ್ನು ಕಾಯ್ದುಕೊಂಡಿದೆ. ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡುತ್ತಿದೆ ಎಂದು ಅಡಿಗಾಸ್ ವ್ಯವಸ್ಥಾಪಕಿ ಆಶಾ ಅಡಿಗ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT